ಕಾಂತಾರ ಸಿನಿಮಾ ಯಶಸ್ವಿಯಾದ ನಂತರ ರಿಷಬ್ ಶೆಟ್ಟಿ ಕಾಂತಾರ 2ಗಾಗಿ ಸಿದ್ಧತೆ ಮಾಡಿಕೊಂಡಿದ್ದಾರೆ.
ಸ್ಕ್ರಿಪ್ಟ್ ಕೆಲಸ ಈಗಾಗಲೇ ಮುಗಿಸಿ ಇನ್ನುಳಿದ ಕಾರ್ಯಗಳಲ್ಲಿ ಟೀಂ ಬ್ಯೂಸಿಯಾಗಿದೆ. ಹೊಂಬಾಳೆ ಫಿಲಂಸ್ ನಿರ್ಮಾಣದ ಈ ಸಿನಿಮಾ ಬಜೆಟ್ 100 ಕೋಟಿ ರೂ. ದಾಟಲಿದೆ ಎನ್ನಲಾಗಿದೆ. ಕಾಂತಾರ ಪಾರ್ಟ್ 1ಕ್ಕಿಂತ ಮೊದಲಿನ ಕತೆಯನ್ನು ಕಾಂತಾರ 2ರಲ್ಲಿ ಹೇಳುತ್ತಿರುವುದಾಗಿ ರಿಷಬ್ ಹೇಳಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಹಳೆಯ ಕಾಲ ಘಟ್ಟಕ್ಕೆ ತಕ್ಕಂತೆ ಈಗ ಸೆಟ್ ಸಿದ್ಧ ಮಾಡಲಾಗಿದೆ.
ಕಾಂತಾರ 2 ಗಾಗಿ ರಿಷಬ್ ಕುದುರೆ ಸವಾರಿ, ಕಳರಿಯಪಟ್ಟುವನಂತಹ ಕೇರಳದ ಸಾಹಸ ವಿದ್ಯೆ ಕಲಿತಿದಿದ್ದಾರೆ ಎನ್ನಲಾಗಿದೆ. ಈ ಪಾತ್ರಕ್ಕಾಗಿ ರಿಷಬ್ ತೂಕ ಇಳಿಕೆ ಮಾಡಿದ್ದು, 11 ಕೆಜಿ ತೂಕ ಇಲಿಸಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೇ, ರಿಷಬ್ ಉದ್ದ ದಾಡಿ, ಹೇರ್ ಸ್ಟೈಲ್ ಎಲ್ಲರ ಗಮನ ಸೆಳೆಯುತ್ತಿದೆ. ಕಾಂತಾರ ಚಿತ್ರ ಯಶಸ್ವಿಯಾದ ನಂತರ 2ನ್ನು ಸಿದ್ಧತೆಯೊಂದಿಗೆ ನಿರ್ಮಾಣ ಮಾಡಲಾಗುತ್ತಿದೆ.