RK Roja | ಜಬರ್ದಸ್ತ್ ಶೋಗೆ ರೋಜಾ ಗುಡ್ ಬೈ
ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ಮೋಹನ್ ರೆಡ್ಡಿ ಅವರು ತಮ್ಮ ನೂತನ ಸಚಿವ ಸಂಪುಟದಲ್ಲಿ ನಗರಿ ಶಾಸಕಿ ಆರ್ ಕೆ ರೋಜಾ ಅವರಿಗೆ ಅವಕಾಶ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ರೋಜಾ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಇನ್ಮುಂದೆ ಜಬರ್ದಸ್ತ್ ಶೋನಲ್ಲಿ ಭಾಗವಹಿಸೋದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರೋಜಾ ಅವರು ಶಾಸಕಿಯಾಗಿ ಗೆಲ್ಲುವಲ್ಲಿ ಜಬರ್ದಸ್ತ್ ಕಾರ್ಯಕ್ರಮ ಪ್ರಮುಖ ಪಾತ್ರವಹಿಸಿತ್ತು. ಇದನ್ನ ಸ್ವತಃ ರೋಜಾ ಅವರೇ ಹೇಳಿಕೊಂಡಿದ್ದಾರೆ.
ಆದ್ರೆ ಇದೀಗ ಸಚಿವ ಸಂಪುಟದಲ್ಲಿ ಅವಕಾಶ ಸಿಕ್ಕ ಕಾರಣ ಅವರು ಇನ್ಮುಂದೆ ಯಾವುದೇ ಶೂಟಿಂಗ್ ನಲ್ಲಿ ಭಾಗವಹಿಸುವುದಿಲ್ಲ.
ಸಿನಿಮಾಗಳನ್ನ ಮಾಡೋದಿಲ್ಲ. ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಜೊತೆಗೆ ಜಬರ್ದಸ್ತ್ ಶೋನಲ್ಲಿ ಭಾಗವಹಿಸುವುದಿಲ್ಲ ಎಂದು ರೋಜಾ ಘೋಷಿಸಿದ್ದಾರೆ.
ಏತನ್ಮಧ್ಯೆ, ಸಿಎಂ ಜಗನ್ ಹೊಸ ಮತ್ತು ಹಳೆಯ 25 ಸದಸ್ಯರ ಹೊಸ ಸಂಪುಟದ ರಚನೆ ಮಾಡಿದ್ಧಾರೆ. ಶೇ.70ರಷ್ಟು ಎಸ್ ಸಿ, ಎಸ್ ಟಿ, ಬಿಸಿ ಹಾಗೂ ಅಲ್ಪಸಂಖ್ಯಾತರಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ. rk-roja-said-she-quits-jabardasth-show