ಹಾಡಹಗಲೇ ಕಾರು  ಅಡ್ಡಗಟ್ಟಿ ದಾಳಿ ನಡೆಸಿದ ಮುಸುಕುಧಾರಿಗಳ ಗುಂಪು

1 min read

ಹಾಡಹಗಲೇ ಕಾರು  ಅಡ್ಡಗಟ್ಟಿ ದಾಳಿ ನಡೆಸಿದ ಮುಸುಕುಧಾರಿಗಳ ಗುಂಪು

ಹಾಡಹಗಲೇ ಮುಸುಕುಧಾರಿ ದುಷ್ಕರ್ಮಿಗಳ ಗುಂಪು ಕಾರು ಅಡ್ಡಗಟ್ಟಿ ದಾಳಿ ಮಾಡಿರುವ ಘಟನೆ ಮೈಸೂರನಲ್ಲಿ ನಡೆದಿದೆ.  ಮೈಸೂರು – ನಂಜನಗೂಡು ರಾಷ್ಟ್ರೀಯ ಹೆದ್ದಾರಿ ಬಳಿಯ ಕಡಕೊಳ ಬಳಿ ದುಷ್ಕರ್ಮಿಗಳು ಕಾರು ಅಡ್ಡಗಟ್ಟಿದ್ದಾರೆ.  ಸುಮಾರು ಎಂಟು ಜನರ ಯುವಕರ ಗುಂಪು ಮುಸುಕು ಧರಿಸಿ ದೊಣ್ಣೆಗಳನ್ನು ಹಿಡಿದು ಕಾರಿನ ಮೇಲೆ ದಾಳಿ ಮಾಡಿದ್ದಾರೆ. ಕಾರು ಚಾಲಕ ಪಾರಾಗಲು ಯತ್ನಿಸಿದರೂ ಬಿಡದ ಗುಂಪು ಒಳಗೆ ತಳ್ಳಿ ಕಾರಿನ ಸಮೇತ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಇದೇ ವೇಳೆ ಎದುರಿಗೆ ಬರುತ್ತಿದ್ದ ವಾಹನದಲ್ಲಿದ್ದ ಪ್ರಯಾಣಿಕರು ತಮ್ಮ ಮೊಬೈಲ್​ನಲ್ಲಿ ಈ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ.  ಘಟನೆಯ ಕುರಿತು ಸ್ಥಳಿಯರು ಪ್ರತಿಕ್ರಿಯಿಸಿ ಕಾರು ಕೇರಳ ರಿಜಿಸ್ಟ್ರೇಷನ್ ಹೊಂದಿತ್ತು ಎಂದು ಹೇಳಿದ್ದಾರೆ.  ಸದ್ಯ ಈ ಘಟನೆಯ ದೃಶ್ಯಗಳು ಮತ್ತು ಹೆದ್ದಾರಿ ಸಿಸಿಟಿ ದೃಶ್ಯಗಳನ್ನ ಪರಿಶೀಲಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Robbers attack a car on Mysore-Nanjangud highway

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd