`ಬಾಕ್ಸ್ ಆಫೀಸ್ ನಲ್ಲಿ 4ನೇ ದಿನವೂ ‘ದಾಸ’ನ ದರ್ಬಾರ್ : ಒಟ್ಟಾರೆ ಕಲೆಕ್ಷನ್ ಎಷ್ಟು..?
ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸುನಾಮಿ ಎಬ್ಬಿಸಿದೆ. ರಾಬರ್ಟ್ ಸಿನಿಮಾದ ಬ್ಯೂಸಿನೆಸ್ ನಲ್ಲಿ ಭಾಗಿಯಾದವರ ಜೇಬು ತುಂಬಿ ತುಳುಕುತ್ತಿದೆ.
ರಾಬರ್ಟ್ ಆರ್ಭಟಕ್ಕೆ ಈ ಹಿಂದಿನ ದಾಖಲೆಗಳೆಲ್ಲಾ ಪೀಸ್ ಪೀಸ್ ಆಗೋಗಿದೆ. ದರ್ಶನ್ ಇಂದಿಗೂ ಎಂದಿಗೂ ಬಾಕ್ಸ್ ಆಫೀಸ್ ಸುಲ್ತಾನ ಅನ್ನೋದನ್ನ ರಾಬರ್ಟ್ ಸಿನಿಮಾ ಕಲೆಕ್ಷನ್ ಸಾರಿ ಹೇಳುತ್ತಿದೆ.
ಗುರುವಿನ ಮಾತು ತಪ್ಪದ ಇಶಾನ್ ಕಿಶಾನ್… ಕೋಚ್ ತಂದೆಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಅರ್ಪಣೆ..!
ಹೌದು..! ಗುರುವಾರ ತೆರಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ರಾಬರ್ಟ್ 4ನೇ ದಿನವೂ ಗಲ್ಲಾಪೆಟ್ಟಿಗೆ ತುಂಬಿಸಿಕೊಂಡಿದೆ. 4ನೇ ದಿನ ಕರ್ನಾಟಕದಲ್ಲಿ ರಾಬರ್ಟ್ 15.68 ಕೋಟಿ ರೂ. ಹಣ ಗಳಿಸಿ ದಾಖಲೆ ಬರೆದಿದೆ. ಈ ಮೂಲಕ ಕೇವಲ ಕರ್ನಾಟಕದಲ್ಲೇ ರಾಬರ್ಟ್ ಸಿನಿಮಾ 4 ದಿನಗಳಲ್ಲಿ 59.8 ಕೋಟಿ ರೂ.ಗಳಿಕೆ ಮಾಡಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.
ಇನ್ನೂ ಆಂಧ್ರ ಮತ್ತು ತೆಲಂಗಾಣದಲ್ಲಿ ರಾಬರ್ಟ್ 4ನೇ ದಿನ 6.17 ಕೋಟಿ ರೂ. ಕಲೆಕ್ಷನ್ ಮಾಡಿದೆ.
ಅಂದ್ಹಾಗೆ ಮೊದಲ ದಿನ ಈ ಚಿತ್ರಕ್ಕೆ 17.24 ಕೋಟಿ ರೂ. ಕಲೆಕ್ಷನ್ ಆಗಿತ್ತು. ತೆಲುಗು ವರ್ಷನ್ ನಿಂದ 3.21 ಕೋಟಿ ರೂ. ಸಿಕ್ಕಿತ್ತು. 2ನೇ ದಿನ ಬರೋಬ್ಬರಿ 12.78 ಕೋಟಿ ರೂ. ಗಳಿಕೆ ಮಾಡಿತ್ತು. 3ನೇ ದಿನ 14.10 ಕೋಟಿ ರೂ. ಹಣ ಗಳಿಸಿ ದಾಖಲೆ ಬರೆದಿದೆ. 4ನೇ ದಿನ ಕರ್ನಾಟಕದಲ್ಲಿ ರಾಬರ್ಟ್ 15.68 ಕೋಟಿ ರೂ. ಹಣ ಗಳಿಸಿ ದಾಖಲೆ ಬರೆದಿದೆ.