‘ರಾಖಿ ಭಾಯ್’ಗೆ ಆರೋಗ್ಯ ಇಲಾಖೆಯಿಂದ ನೋಟಿಸ್..! ಯಾಕೆ ಗೊತ್ತಾ?
ಬೆಂಗಳೂರು : ಇಡೀ ಸೋಷಿಯಲ್ ಮೀಡಿಯದಲ್ಲೇ ಸೆನ್ಷೇಷನ್ ಕ್ರಿಯೇಟ್ ಮಾಡಿ ವಿಶ್ವದಾಖಲೆ ಬರೆದ ಕೆಜಿಎಫ್ 2 ಚಿತ್ರದ ಟೀಸರ್ ಭಾರೀ ಸೌಂಡ್ ಮಾಡ್ತಿದೆ. ಈವರೆಗೂ ಟ್ರೆಂಟ್ ನಲ್ಲಿದೆ. ರಿಲೀಸ್ ಆದ 2 ದಿನಗಳಲ್ಲಿ 100 ಮಿಲಿಯನ್ ಗೂ ಹೆಚ್ಚು ವೀವ್ಸ್ ಪಡೆದಿದೆ.
ಹೀಗೆ ಇಡೀ ವಿಶ್ವಾದ್ಯಂತ ಹೈಪ್ ಕ್ರಿಯೇಟ್ ಮಾಡಿರೋ ಈ ಟೀಸರ್ ವಿಚಾರವಾಗಿಯೇ ರಾಕಿಂಗ್ ಸ್ಟಾರ್ ಯಶ್ ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೋಟಿಸ್ ನೀಡಿದೆ. ಹೌದು.. ಆರೋಗ್ಯ ಇಲಾಖೆಯು ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಕಾಯ್ದೆ 2003 ಅಡಿಯಲ್ಲಿ ಯಶ್ ಗೆ ನೋಟಿಸ್ ನೀಡಿದೆ.
ನಿರ್ದೇಶಕ ಎ.ಟಿ ರಘುಗೆ ಕಿಚ್ಚ ಅಭಯ ಹಸ್ತ : ಇದಲ್ಲವೇ ಮಾನವೀಯತೆ..!!
ಅಂದ್ಹಾಗೆ ಟೀಸರ್ ನಲ್ಲಿ ಯಶ್ ಸಿಗರೇಟ್ ಸೇದುವ ದೃಶ್ಯವಿದ್ದು, ಈ ದೃಶ್ಯ ಯುವಕರನ್ನು ಪ್ರಚೋದಿಸುತ್ತದೆ. ಹೀಗಾಗಿ ದೃಶ್ಯ ತೆಗೆಯುವಂತೆ ಸೂಚನೆ ನೀಡಿ ಆರೋಗ್ಯ ಇಲಾಖೆ ನೋಟಿಸ್ ನೀಡಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel