ಎಲ್ಲೆಲ್ಲೂ ರಾಕಿ ಭಾಯ್ ಹವಾ..!
ಕೆಜಿಎಫ್ ಸಿನಿಮಾದಲ್ಲಿನ ರಾಕಿಭಾಯ್ ಪಾತ್ರ ರಾಕಿಂಗ್ ಸ್ಟಾರ್ ಯಶ್ ಅವರನ್ನ ನ್ಯಾಷನಲ್ ಸ್ಟಾರ್ ಮಾಡಿದೆ.
ಯಶ್ ಎಲ್ಲೆ ಹೋದರೂ ಅಭಿಮಾನಿಗಳು ಅವರನ್ನ ನೋಡಲು ಮುಗಿಬೀಳುತ್ತಾರೆ. ಯಶ್ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿ ಬೀಳುತ್ತಾರೆ.
ಅದಕ್ಕೆ ಸಾಕ್ಷಿಯಂಬಂತೆ ಮುಂಬೈಗೆ ಭೇಟಿ ನೀಡಿರುವ ಯಶ್ ಅವರನ್ನು ನೋಡಲು ಅಲ್ಲಿನ ಏರ್ ಪೋರ್ಟ್ ನಲ್ಲಿ ಜನಸಾಗರವೇ ನಿಂತಿದೆ.
ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬೀಳುತ್ತಿದ್ದಾರೆ.
ಇನ್ನು ಕೆಜಿಎಫ್ ಸಿನಿಮಾದಲ್ಲಿ ರಾಕಿಭಾಯ್ ಪಾತ್ರಕ್ಕಾಗಿ ಯಶ್ ಅವರಿಗೆ ಭಾರಿ ಕ್ರೇಜ್ ಬಂದಿದೆ.
ಕೆಜಿಎಫ್ ಮೊದಲಾರ್ಧದಲ್ಲಿ ಯಶ್ ಅಭಿನಯಕ್ಕೆ ಫಿದಾ ಆಗಿರುವ ಸಿನಿ ರಸಿಕರು, ಚಾಪ್ಟರ್ 2ಗಾಗಿ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.