ರೋಹಿತ್ ಗ್ರೇಟ್ ಕ್ಯಾಪ್ಟನ್.. ವಿರಾಟ್ ಪ್ರಶಂಸೆ Rohit saaksha tv
ಟೀಂ ಇಂಡಿಯಾದ ಸೀಮಿತ ಓವರ್ ಗಳ ನಾಯಕ ರೋಹಿತ್ ಶರ್ಮಾ ಮತ್ತು ಟೀಂ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಬಗ್ಗೆ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಪ್ರಶಂಸೆಗಳ ಸುರಿಗೈದಿದ್ದಾರೆ. ಭಾರತೀಯ ಕ್ರಿಕೆಟ್ ಅನ್ನು ಮತ್ತೊಂದು ಮೆಟ್ಟಿಲು ಮೇಲಕ್ಕೆ ಕೊಂಡೊಯ್ಯಲು ಅವರಿಗೆ ನನ್ನ ಬೆಂಬಲ ಇರುತ್ತದೆ ಎಂದು ವಿರಾಟ್ ಸ್ಪಷ್ಟಪಡಿಸಿದ್ದಾರೆ.
ಟಿ 20 ನಾಯಕತ್ವದಿಂದ ವಿರಾಟ್ ಕೊಹ್ಲಿ ಕೆಳಗಿಳಿದ ಬಳಿಕ ಬಿಸಿಸಿಐ ರೋಹಿತ್ ಶರ್ಮಾ ಅವರನ್ನು ಚುಟುಕು ಕ್ರಿಕೆಟ್ ನ ಸಾರಥಿಯನ್ನಾಗಿ ನೇಮಿಸಿತು. ಕಿವೀಸ್ ವಿರುದ್ಧ ನಡೆದ ಟಿ 20 ಸರಣಿಯಲ್ಲಿ ರೋಹಿತ್ ಶರ್ಮಾ ನೇತೃತ್ವದಲ್ಲಿ ಟೀಂ ಇಂಡಿಯಾ ದಿಗ್ವಿಜಯ ಸಾಧಿಸಿತ್ತು.
ಇದಾದ ಬಳಿಕ ವಿರಾಟ್ ಗೆ ಶಾಕ್ ನೀಡಿದ್ದ ಬಿಸಿಸಿಐ, ಏಕದಿನ ನಾಯಕತ್ವದಿಂದ ಅವರನ್ನ ವಜಾ ಮಾಡಿತ್ತು. ಸೀಮಿತ ಒವರ್ ಗಳ ಕ್ರಿಕೆಟ್ ಗೆ ಒಬ್ಬರೇ ನಾಯಕರು ಇರಬೇಕು ಎಂದು ರೋಹಿತ್ ಶರ್ಮಾ ಅವರನ್ನ ಟೀಂ ಇಂಡಿಯಾದ ಸೀಮಿತ ಓವರ್ ಗಳ ನಾಯಕರನ್ನಾಗಿ ನೇಮಿಸಿತ್ತು.
ಆದ್ರೆ ಉತ್ತಮ ದಾಖಲೆ ಹೊಂದಿದ್ದರೂ ನಾಯಕತ್ವದಿಂದ ಕೆಳಗಿಳಿಸಿದ್ದರಿಂದ ವಿರಾಟ್ ಸಹಜವಾಗಿಯೇ ಬೇಸರಗೊಂಡಿದ್ದರು. ಅಲ್ಲದೇ ನೂತನ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮಧ್ಯೆ ಸಂಬಂಧ ಸರಿಯಿಲ್ಲ ಎಂಬ ಸುದ್ದಿಯೂ ಹರಿದಾಡಿತ್ತು. ಇದಕ್ಕೆ ವಿರಾಟ್ ಬುಧವಾರ ಸ್ಪಷ್ಟನೆ ನೀಡಿದ್ದಾರೆ.
ರೋಹಿತ್ ಕ್ಯಾಪ್ಟನ್ಸಿಯಲ್ಲಿ ಆಡಲು ನನಗೆ ಯಾವುದೇ ಅಭ್ಯಂತರವಿಲ್ಲ. ರೋಹಿತ್ ಉತ್ತಮ ನಾಯಕ. ತಂಡ ಸರಿಯಾದ ಹಾದಿಯಲ್ಲಿ ಸಾಗಲು ನನ್ನ ಮಟ್ಟಿಗೆ ಸಹಾಯ ನನ್ನ ಜವಾಬ್ದಾರಿ. ಕ್ಯಾಪ್ಟನ್ ಆಗುವುದಕ್ಕೂ ಮುನ್ನ ನಾನು ಅದೇ ರೀತಿ ಇದ್ದೆ. ಈಗಲೂ ಅದೇ ಇರುತ್ತೇನೆ. ನನ್ನ ಮೈಂಡ್ ಸೆಟ್ ನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ರೋಹಿತ್ ಶರ್ಮಾ ಒಳ್ಳೆ ನಾಯಕ. ಅವರ ಸಾರಥ್ಯದಲ್ಲಿ ಟೀಂ ಇಂಡಿಯಾ ಮತ್ತು ಐಪಿಎಲ್ ತಂಡಗಳು ಯಶಸ್ಸು ಕಂಡಿವೆ ಎಂದು ವಿರಾಟ್ ಪ್ರಶಂಸಿದರು.
ಇನ್ನು ಇದೇ ವೇಳೆ ಟೀಂ ಇಂಡಿಯಾದ ಹೆಡ್ ಕೋಚ್ ಬಗ್ಗೆ ಮಾತನಾಡಿದ ವಿರಾಟ್, ರಾಹುಲ್ ದ್ರಾವಿಡ್ ಭಾಯ್ ತುಂಬಾ ಒಳ್ಳೆಯ ಕೋಚ್. ಗ್ರೇಟ್ ಮ್ಯಾನೆಜರ್. ಭಾರತ ಸೀಮಿತ ಓವರ್ ಗಳ ನಾಯಕ ರೋಹಿತ್, ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ನೂರಕ್ಕೆ ನೂರಷ್ಟು ನನ್ನ ಬೆಂಬಲ ಇರುತ್ತದೆ. ತಂಡದ ಒಳಿತಿಗಾಗಿ ನಾನು ಏನು ಮಾಡಬಲ್ಲೆನೋ ಅದನ್ನ ಮಾಡುತ್ತೇನೆ ಎಂದು ವಿರಾಟ್ ತಿಳಿಸಿದ್ದಾರೆ.