ಟೀಂ ಇಂಡಿಯಾದಲ್ಲಿ ಏನ್ ನಡೆಯುತ್ತಿದೆ…? rohit saaksha tv
ಕೆಲ ದಿನಗಳಿಂದ ಟೀಂ ಇಂಡಿಯಾದಲ್ಲಿ ಕ್ಷಿಪ್ರಗತಿಯ ಬದಲಾವಣೆಗಳು ನಡೆಯುತ್ತಿವೆ. ಟಿ 20 ವಿಶ್ವಕಪ್ ಬಳಿಕ ಟಿ 20 ನಾಯಕತ್ವದಿಂದ ಕೆಳಗಿಳಿಯುವುದಾಗಿ ವಿರಾಟ್ ಕೊಹ್ಲಿ ಘೋಷಣೆ ಮಾಡಿದ್ದರು. ಅದರಂತೆ ಯಾವುದೇ ಅಬ್ಬರ ಆರ್ಭಟವಿಲ್ಲದೇ ಸೈಲೆಂಟ್ ಆಗಿ ಟೀಂ ಇಂಡಿಯಾ ಟಿ 20 ನಾಯಕತ್ವದಿಂದ ಕಳೆಗಿಳಿದರು. ಇದಾದ ಬಳಿಕ ರೋಹಿತ್ ಶರ್ಮಾ ಅವರಿಗೆ ಬಿಸಿಸಿಐ ಟಿ 20 ನಾಯಕತ್ವವನ್ನು ವಹಿಸಿತು. ಅಲ್ಲದೇ ನ್ಯೂಜಿಲೆಂಡ್ ವಿರುದ್ಧದ ಟಿ 20 ಸರಣಿಗೆ ವಿರಾಟ್ ಗೆ ರೆಸ್ಟ್ ನೀಡಿತು. ಈ ಸರಣಿಯನ್ನು ರೋಹಿತ್ ನೇತೃತ್ವದಲ್ಲಿ ಟೀಂ ಇಂಡಿಯಾ ಕ್ಲೀನ್ ಸ್ವೀಪ್ ಮಾಡಿತು.
ಇದಾದ ಬಳಿಕ ವಿರಾಟ್ ಕೊಹ್ಲಿ ಮುಂಬೈ ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯಕ್ಕಾಗಿ ಟೀಂ ಇಂಡಿಯಾ ಸೇರಿಕೊಂಡರು. ಅಲ್ಲದೇ ಕಿವೀಸ್ ಗೆ ಮಣ್ಣುಮುಕ್ಕಿಸಿ ಸರಣಿಯನ್ನು ವಶಪಡಿಸಿಕೊಂಡರು. ಇಲ್ಲಿ ಗಮನಿಸಬೇಕಾದ ಸಂಗತಿ ಏನಂದರೇ ವಿರಾಟ್ ನಾಯಕತ್ವದಿಂದ ಕೆಳಗಿಳಿದ ಬಳಿಕ ರೋಹಿತ್ ನಾಯಕತ್ವದಲ್ಲಿ ವಿರಾಟ್ ಆಡಿಲ್ಲ. ಅದೇ ರೀತಿ ಟಿ 20 ತಂಡದ ನಾಯಕರಾದ ಬಳಿಕ ವಿರಾಟ್ ನಾಯಕತ್ವದಲ್ಲಿ ರೋಹಿತ್ ಬ್ಯಾಟ್ ಬೀಸಿಲ್ಲ. ಇದರ ಮಧ್ಯೆ ಸೀಮಿತ ಓವರ್ ಗಳಿಗೆ ಒಬ್ಬರೇ ಕ್ಯಾಪ್ಟನ್ ಇರಬೇಕು ಎಂದು ಭಾವಿಸಿ ಬಿಸಿಸಿಐ ರೋಹಿತ್ ಶರ್ಮಾಗೆ ಟಿ 20, ಏಕದಿನ ಮಾದರಿ ಕ್ರಿಕೆಟ್ ನ ನಾಯಕತ್ವ ವಹಿಸಿದ್ದಾರೆ.
ವಾಸ್ತವವಾಗಿ ಟೀ 20 ನಾಯಕತ್ವದಿಂದ ಕೆಳಗಿಳಿಯುವಾಗ ವಿರಾಟ್, ಏಕದಿನ ಕ್ರಿಕೆಟ್ ನಲ್ಲಿ ನಾಯಕರಾಗಿ ಮುಂದುವರೆಯುವುದಾಗಿ ಸ್ಪಷ್ಟವಾಗಿ ತಿಳಿಸಿದ್ದರು. ಆದ್ರೆ ಬಿಸಿಸಿಐ ಇದನ್ನ ಪರಿಗಣಿಸದೇ ಅವರನ್ನ ನಾಯಕತ್ವದಿಂದ ವಜಾಗೊಳಿಸಿತು.
ಇನ್ನು ಕೊಹ್ಲಿ ತನ್ನ ಡೆಪ್ಯೂಟಿಯಾಗಿ ರೋಹಿತ್ ಹೆಸರೇಳದೇ ಕೆಎಲ್ ರಾಹುಲ್ , ರಿಷಭ್ ಪಂತ್ ಹೆಸರುಗಳನ್ನು ಸೂಚಿಸಿದ್ದರು. ಆ ಮೂಲಕ ರೋಹಿತ್ ಆದ್ಯತೆಯನ್ನು ಕಡಿಮೆ ಮಾಡಲು ಕೊಹ್ಲಿ ಪ್ರಯತ್ನಿಸಿದ್ದರು.
ಈ ಸಮಯದಲ್ಲಿ ಬಿಸಿಸಿಐ ಒಂದು ವರ್ಗವೂ ರೋಹಿತ್ ಪರ ನಿಂತಿದ್ದು ಅಲ್ಲದೇ ಸೀಮಿತ ಓವರ್ ಗಳ ನಾಯಕತ್ವವನ್ನು ಕೂಡ ವಹಿಸಿದೆ. ಇದು ಕೊಹ್ಲಿಗೆ ಬೇಸರಕ್ಕೆ ಕಾರಣವಾಗಿದ್ದು, ಬಿಸಿಸಿಐ ವಿರುದ್ಧ ಗುರ್ ಗುರ್ ಎನ್ನುತ್ತಿದ್ದಾರಂತೆ. ಇದೇ ಕಾರಣಕ್ಕೆ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ದೂರ ಉಳಿಯಲು ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.