IND VS ENG : ದಾಖಲೆಗಳ ಮೇಲೆ ಕೊಹ್ಲಿ – ರೋಹಿತ್ ಜೋಡಿ ಕಣ್ಣು

1 min read
Virat kohli saaksha tv

IND VS ENG : ದಾಖಲೆಗಳ ಮೇಲೆ ಕೊಹ್ಲಿ – ರೋಹಿತ್ ಜೋಡಿ ಕಣ್ಣು

ವಿಶ್ವ ಕ್ರಿಕೆಟ್ ನಲ್ಲಿ ಅತ್ಯುತ್ತಮ ಜೋಡಿಗಳಲ್ಲಿ ವಿರಾಟ್ ಕೊಹ್ಲಿ – ರೋಹಿತ್ ಶರ್ಮಾ ಜೋಡಿ ಕೂಡ ಒಂದು.

ಈ ಇಬ್ಬರೂ ಕ್ರೀಸ್ ನಲ್ಲಿ ಕಚ್ಚಿನಿಂತರೇ ಅವತ್ತು ಎದುರಾಳಿ ತಂಡದ ಬೌಲರ್ ಗಳಿಗೆ ಶನಿ ವಕ್ಕರಿಸಿದಂತೆ.

ಈ ಬಲ್ಲೆ ಜೋಡಿ ಈಗಾಗಲೇ ಸಾಕಷ್ಟು ದಾಖಲೆಗಳು ನಿರ್ಮಿಸಿದೆ.

ಇದೀಗ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲೂ ಕೆಲವು ದಾಖಲೆಗಳ ಮೇಲೆ ವಿರಾಟ್ – ರೋಹಿತ್ ಶರ್ಮಾ ಜೋಡಿ ಕಣ್ಣಾಕಿದೆ.

ಜುಲೈ ಒಂದರಿಂದ ಆರಂಭವಾಗಲಿರುವ ಸರಣಿಯಲ್ಲಿ ಟೀಂ ಇಂಡಿಯಾ ಮೊದಲು ಟೆಸ್ಟ್ ಪಂದ್ಯವನ್ನಾಡಲಿದೆ.

ನಂತರ ಟಿ 20 ಮತ್ತು ಏಕದಿನ ಸರಣಿಗಳಲ್ಲಿ ಗುದ್ದಾಟ ನಡೆಸಲಿದೆ.

ಸಾಮಾನ್ಯವಾಗಿ ವೈಯುಕ್ತಿಕವಾಗಿ ದಾಖಲೆಗಳನ್ನು ನಿರ್ಮಿಸುವ ವಿರಾಟ್, ರೋಹಿತ್, ಇಂಗ್ಲೆಂಡ್ ಸರಣಿಯಲ್ಲಿ ಜಂಟಿಯಾಗಿ ದಾಖಲೆಗಳನ್ನು ನಿರ್ಮಿಸಲಿದ್ದಾರೆ.

ರೋಹಿತ್ ಶರ್ಮಾ – ವಿರಾಟ್ ಕೊಹ್ಲಿ ಜೋಡಿ ಈವರೆಗೂ 940 ರನ್ ಗಳ ಜೊತೆಯಾಟವನ್ನಾಡಿದೆ.

ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಏಕೈಕ ಟೆಸ್ಟ್ ಸರಣಿಯಲ್ಲಿ ಇನ್ನೂ 60 ರನ್ ಗಳನ್ನ ಜೋಡಿಸಿದ್ರೆ ಈ ಜೋಡಿ 1000 ರನ್ ಗಳ ಜೊತೆಯಾಟವನ್ನಾಡಿದ ದಾಖಲೆ ಮಾಡಲಿದೆ.

 ಇದಲ್ಲದೆ ಟಿ 20 ಕ್ರಿಕೆಟ್ ನಲ್ಲಿ ಇಲ್ಲಿಯವರೆಗೂ ರೋಹಿತ್ – ವಿರಾಟ್ ಕೊಹ್ಲಿ ಜೋಡಿ 991 ರನ್ ಗಳ ಜೊತೆಯಾಟವನ್ನಾಡಿದೆ.

ಇಂಗ್ಲೆಂಡ್ ವಿರುದ್ಧದ ಟಿ 20 ಸರಣಿಯಲ್ಲಿ ಒಂಭತ್ತು ರನ್ ಗಳನ್ನು ಈ ಜೋಡಿ ಗಳಿಸಿದ್ರೆ ಚುಟುಕು ಕ್ರಿಕೆಟ್ ನಲ್ಲಿಯೂ 1000 ರನ್ ಗಳ ಭಾಗಸ್ವಾಮ್ಯವನ್ನ ಪೂರ್ತಿ ಮಾಡಲಿದೆ.

ಅದೇ ರೀತಿ ಏಕದಿನ ಕ್ರಿಕೆಟ್ ನಲ್ಲಿ ಇಲ್ಲಿಯವರೆಗೂ 4906 ರನ್ ಜೊತೆಯಾಟವನ್ನು ಈ ದಿಗ್ಗಜ ಜೋಡಿ ನೀಡಿದೆ.

rohit-sharma-and-virat-kohli-pair-eyes-rare-partnership-record saaksha tv
rohit-sharma-and-virat-kohli-pair-eyes-rare-partnership-record saaksha tv

ಇನ್ನೇ ಕೇವಲ 94 ರನ್ ಗಳ ಭಾಗಸ್ವಾಮ್ಯವನ್ನು ಈ ಜೋಡಿ ಮಾಡಿದ್ರೆ ಐದು ಸಾವಿರ ರನ್ ಗಳ ಜೊತೆಯಾಟವನ್ನು ಪೂರ್ಣಗೊಳಿಸಲಿದೆ.

ಇದು ಮಾತ್ರವಲ್ಲದೇ ಈ ಸರಣಿಯಲ್ಲಿ ರೋಹಿತ್ – ವಿರಾಟ್ ಕೊಹ್ಲಿ ಜೋಡಿ ಇನ್ನೂ 133 ರನ್ ಗಳ ಜೊತೆಯಾಟವನ್ನಾಡಿದ್ರೆ ರೋಹಿತ್ ಶರ್ಮಾ – ವಿರಾಟ್ ಕೊಹ್ಲಿ ಹೆಸರಿನಲ್ಲಿರುವ 5039 ರನ್ ಜೊತೆಯಾಟದ ದಾಖಲೆ ಬ್ರೇಕ್ ಆಗಲಿದೆ.

ಅಲ್ಲದೇ ಏಕದಿನ ಕ್ರಿಕೆಟ್  ಇತಿಹಾಸದಲ್ಲಿ ಅತ್ಯಧಿಕ ಜೊತೆಯಾಟವನ್ನಾಡಿದ ಟಾಪ್ 7 ಜೋಡಿಯಾಗಿ ನಿಲ್ಲಲಿದೆ.

ಈ ದಾಖಲೆಗಳು ಮಾತ್ರವಲ್ಲದೇ ಟೀಂ ಇಂಡಿಯಾದ ಸ್ಟಾರ್ ಜೋಡಿ ಮತ್ತೊಂದು ಅಪರೂಪದ ದಾಖಲೆಯ ಮೇಲೆ ಕೂಡ ಕಣ್ಣಾಕಿದೆ.

ಈ ಜೋಡಿ ಟೆಸ್ಟ್, ಟಿ 20 ಕ್ರಿಕೆಟ್ ನಲ್ಲಿ 1000 ರನ್ ಗಳ ಜೊತೆಯಾಟವನ್ನು ಪೂರ್ಣಮಾಡಿದ್ರೆ, ಮೂರು ಮಾದರಿ ಕ್ರಿಕೆಟ್ ನಲ್ಲಿ 1000ಕ್ಕೂ ಹೆಚ್ಚು ಜೊತೆಯಾಟವನ್ನಾಡಿದ ಮೊದಲ ಜೋಡಿ ಎಂಬ ಹೊಸ ದಾಖಲೆಯನ್ನು ನಿರ್ಮಿಸಲಿದೆ.

ಅಂತರಾಷ್ಟ್ರೀಯಕ ಕ್ರಿಕೆಟ್ ನಲ್ಲಿ ಇಲ್ಲಿಯವರೆಗೂ ಯಾವುದೇ ತಂಡದ ಪರ ಯಾವುದೇ ಜೋಡಿ ಮೂರು ಮಾದರಿಯ ಕ್ರಿಕೆಟ್ ನಲ್ಲಿ 1000ಕ್ಕೂ ಹೆಚ್ಚು ರನ್ ಗಳ ಜೊತೆಯಾಟವನ್ನ ಆಡಿಲ್ಲ.   

 

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd