Rohit Sharma | ಮೆಗಾ ಟೂರ್ನಿಯಲ್ಲಿ ಆ ದಾಖಲೆ ಮೇಲೆ ಕಣ್ಣಾಕಿದ್ದಾರೆ ರೋಹಿತ್ ಶರ್ಮಾ
ವಿಶ್ವ ಚುಟುಕು ಸಮರಕ್ಕೆ ಕೌಂಟ್ ಡೌನ್ ಶುರುವಾಗಿದ್ದು, ಟೀಂ ಇಂಡಿಯಾ ಮಹಾ ಕಾಳಗಕ್ಕೆ ಸಜ್ಜಾಗಿದೆ. ಈ ನಡುವೆ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಕೆಲವು ದಾಖಲೆಗಳ ಮೇಲೆ ಕಣ್ಣಾಕಿದ್ದಾರೆ.
ಹಿಟ್ ಮ್ಯಾನ್ ರೋಹಿತ್ ಶರ್ಮಾ 2007ರಲ್ಲಿ ಟೀಂ ಇಂಡಿಯಾ ಪರ ಮೊದಲ ಟಿ 20 ವಿಶ್ವಕಪ್ ಮ್ಯಾಚ್ ಆಡಿದರು. ಈ ಕ್ರಮದಲ್ಲಿ ಇಲ್ಲಿಯವರೆಗೂ 33 ಪಂದ್ಯಗಳನ್ನಾಡಿದ್ದಾರೆ.
ಇನ್ನೂ ಮೂರು ಪಂದ್ಯಗಳನ್ನಾಡಿದ್ದರೇ ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ಪಂದ್ಯಗಳನ್ನಾಡಿದ ಆಟಗಾರ ಎನಿಸಿಕೊಳ್ಳಲಿದ್ದಾರೆ.

ಇಲ್ಲಿಯವರೆಗೂ ಟಿ 20 ಯಲ್ಲಿ ಅತಿ ಹೆಚ್ಚು ಪಂದ್ಯಗಳನ್ನಾಡಿರುವ ಆಟಗಾರರು
ತಿಲಕರತ್ನೆ ದಿಲ್ಷಾನ್ 35 ಪಂದ್ಯ
ಡ್ವೇನ್ ಬ್ರಾವೋ 34 ಪಂದ್ಯ
ಶೋಯೆಬ್ ಮಾಲಿಕ್ 34 ಪಂದ್ಯ
ಎಂಎಸ್ ಧೋನಿ 33 ಪಂದ್ಯ
ಕ್ರಿಸ್ ಗೇಲ್ 33 ಪಂದ್ಯ
ಮುಷ್ಫಿಖರ್ ರಹಿಂ 33 ಪಂದ್ಯ
ರೋಹಿತ್ ಶರ್ಮಾ 33 ಪಂದ್ಯ








