Rohit Sharma | ಹಿಟ್ ಮ್ಯಾನ್ ಕೆಟ್ಟ ದಾಖಲೆ.. ಪ್ರಪಂಚದಲ್ಲಿಯೇ ಮೊದಲ ಪ್ಲೇಯರ್
ಇಂದೋರ್ ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಟಿ 20 ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡಿದೆ.
228 ರನ್ ಗಳ ಗುರಿಯೊಂದಿಗೆ ಕಣಕ್ಕಿಳಿದ ಟೀಂ ಇಂಡಿಯಾ, 178 ರನ್ ಗಳಿಗೆ ಆಲೌಟ್ ಆಗಿದೆ.
ಭಾರತದ ಪರ ದಿನೇಶ್ ಕಾರ್ತಿಕ್ 46 ರನ್ ಗಳಿಸಿದ್ದೇ ಟಾಪ್ ಸ್ಕೋರ್ ಆಗಿದೆ.
ಈ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ತೀವ್ರ ನಿರಾಸೆ ಮೂಡಿಸಿದರು.

ರಬಾಡ ಮಾಡಿದ ಮೊದಲ ಓವರ್ ನಲ್ಲಿ ರೋಹಿತ್ ಶರ್ಮಾ ಡಕೌಟ್ ಆದರು.
ಇದರೊಂದಿಗೆ ರೋಹಿತ್ ಶರ್ಮಾ ಒಂದು ಕೆಟ್ಟ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಟಿ 20 ಕ್ರಿಕೆಟ್ ನಲ್ಲಿ ಅತ್ಯಧಿಕ ಬಾರಿ ಸಿಂಗಲ್ ಡಿಜಿಟ್ ಸ್ಕೋರ್ ಗೆ ಔಟ್ ಆದ ಬ್ಯಾಟರ್ ಆಗಿ ರೋಹಿತ್ ಶರ್ಮಾ ಕೆಟ್ಟ ದಾಖಲೆಯನ್ನು ಬರೆದುಕೊಂಡಿದ್ದಾರೆ.
ರೋಹಿತ್ ಶರ್ಮಾ ಇಲ್ಲಿಯವರೆಗೂ 43 ಬಾರಿ ಸಿಂಗಿಲ್ ಡಿಜಿಟ್ ಸ್ಕೋರ್ ಗೆ ಔಟ್ ಆಗಿದ್ದಾರೆ.
ಇದಕ್ಕೂ ಮೊದಲು ಈ ಕೆಟ್ಟ ದಾಖಲೆ ಐರ್ಲೆಂಡ್ ತಂಡದ ಮಾಜಿ ಆಟಗಾರ ಕೆವಿನ್ ಒಬ್ರಿಯನ್ ಹೆಸರಿನಲ್ಲಿತ್ತು.
ಅವರು 42 ಬಾರಿ ಔಟ್ ಆಗಿದ್ದರು. ಇದೀಗ ಈ ಕೆಟ್ಟ ದಾಖಲೆ ರೋಹಿತ್ ಶರ್ಮಾ ಪಾಲಾಗಿದೆ.