ತೂಕ ಕಡಿಮೆ ಮಾಡಿಕೊಳ್ಳುವತ್ತ ರೋಹಿತ್ ಚಿತ್ತ..
ಮುಂಬೈ : ಟೀಂ ಇಂಡಿಯಾದ ಸೀಮಿತ ಓವರ್ಗಳ ನಾಯಕ ರೋಹಿತ್ ಶರ್ಮಾ ಗಾಯದ ಸಮಸ್ಯೆಯಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದಾರೆ.
ಈ ಸಮಯವನ್ನು ಬಳಿಸಿಕೊಂಡು ರೋಹಿತ್, ತೂಕ ಇಳಿಸಿಕೊಳ್ಳುವ ಜೊತೆಗೆ ನ್ಯೂ ಲುಕ್ ಟ್ರೈ ಮಾಡಿದ್ದಾರೆ.
ಕೆಲ ದಿನಗಳಿಂದ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ರಿಹ್ಯಾಬ್ಗೆ ಒಳಗಾಗಿರುವ ರೋಹಿತ್, ತುಂಬಾ ತೆಳ್ಳಗೆ ಮತ್ತು ಕ್ಲೀನ್ ಶೇವ್ ಮಾಡಿಕೊಂಡಿದ್ದಾರೆ.
ಅವರ ಹೊಸ ಲುಕ್ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಫೋಟೋದಲ್ಲಿ ರೋಹಿತ್, ಯಾವುದನ್ನೋ ತೀಷ್ಣವಾಗಿ ನೋಡುತ್ತಿದ್ದಾರೆ.
ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರೋಹಿತ್ ಲುಕ್ ಬಗ್ಗೆ ಅವರ ಅಭಿಮಾನಿಗಳು, ಟೀಂ ಇಂಡಿಯಾ ಕ್ರಿಕೆಟರ್ಸ್, ಪತ್ನಿ ರಿತಿಕಾ ಸಜ್ದೆ ಪ್ರತಿಕ್ರಿಯೆ ನೀಡಿದ್ದಾರೆ.