ಬೆಂಗಳೂರು: ಅಫ್ಘಾನಿಸ್ತಾನ (Afghanistan) ವಿರುದ್ಧ ನಡೆದ ಮೂರನೇ ಟಿ20 ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) 121 ರನ್ ಗಳಿಸುವ ಮೂಲಕ 5 ಅಂತಾರಾಷ್ಟ್ರೀಯ ಟಿ20 (T20) ಶತಕ ಸಿಡಿಸಿದ್ದಾರೆ.
ಇಲ್ಲಿಯವರೆಗೂ ರೋಹಿತ್ ಶರ್ಮಾ (ಭಾರತ) – 5, ಸೂರ್ಯಕುಮಾರ್ ಯಾದವ್ (ಭಾರತ) – 4, ಗ್ಲೆನ್ ಮ್ಯಾಕ್ಸ್ವೆಲ್ (ಆಸ್ಟ್ರೇಲಿಯಾ) – 4, ಸಬಾವೂನ್ ಡೇವಿಜಿ (ಜೆಕ್ ರಿಪಬ್ಲಿಕ್)- 3, ಕಾಲಿನ್ ಮುನ್ರೊ (ನ್ಯೂಜಿಲೆಂಡ್) – 3 ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ.
ಆಫ್ಘಾನಿಸ್ತಾನ ವಿರುದ್ಧದ ಈ ಪಂದ್ಯದಲ್ಲಿ ಭಾರತ ಕೇವಲ 4.3 ಓವರ್ಗಳಲ್ಲಿ 22 ರನ್ ಗಳಿಗೆ ನಾಲ್ಕು ವಿಕೆಟ್ ಕಳೆದು ಸಂಕಷ್ಟದಲ್ಲಿತ್ತು. ರೋಹಿತ್ ಶರ್ಮಾ ಹಾಗೂ ರಿಂಕು ಉತ್ತಮ ಪ್ರದರ್ಶನ ನೀಡಿ 212 ರನ್ ಗಳಿಸಿ ಅಫ್ಘಾನಿಸ್ತಾನಕ್ಕೆ 213 ರನ್ಗಳ ಟಾರ್ಗೆಟ್ ನೀಡಿದರು.
64 ಎಸೆತಗಳಲ್ಲಿ ಶತಕ ಬಾರಿಸಿದ ರೋಹಿತ್ ಶರ್ಮಾ ನಾಲ್ಕು ಅಂತರಾಷ್ಟ್ರೀಯ ಶತಕಗಳನ್ನು ಹೊಂದಿರುವ ಸೂರ್ಯಕುಮಾರ್ ಯಾದವ್ ಮತ್ತು ಗ್ಲೆನ್ ಮ್ಯಾಕ್ಸ್ ವೆಲ್ ಅವರನ್ನು ಹಿಂದಿಕ್ಕಿ ಹೊಸ ದಾಖಲೆ ಬರೆದಿದ್ದಾರೆ. ನಿಗದಿತ 20 ಓವರ್ ಮುಗಿದಾಗ 69 ಎಸೆತಗಳಲ್ಲಿ 11 ಬೌಂಡರಿ ಹಾಗೂ 8 ಸಿಕ್ಸರ್ ನೆರವಿನಿಂದ 121 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು. ರೋಹಿತ್ ನಾಯಕತ್ವ ವಹಿಸಿದ ನಂತರ 54 ಪಂದ್ಯಗಳಲ್ಲಿ 1,648 ರನ್ ಗಳಿಸಿದ್ದರೆ, ಕೊಹ್ಲಿ ನಾಯಕನಾಗಿ 50 ಪಂದ್ಯಗಳಿಂದ 1,570 ರನ್ ಗಳಿಸಿದ್ದಾರೆ.