Rohit Sharma | ಬದಲಾಗದ ರೋಹಿತ್ ನಸೀಬು..
1 min read
rohit-sharma’s-poor-form saaksha tv
Rohit Sharma | ಬದಲಾಗದ ರೋಹಿತ್ ನಸೀಬು..
ಎಡ್ಜ್ಬಾಸ್ಟನ್ನಲ್ಲಿ ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಗೂ ಮುನ್ನ ಟೀಮ್ ಇಂಡಿಯಾ ನಾಲ್ಕು ದಿನಗಳ ಅಭ್ಯಾಸ ಪಂದ್ಯದಲ್ಲಿ ಲೀಸೆಸ್ಟರ್ಶೈರ್ ಕೌಂಟಿ ವಿರುದ್ಧ ಸೆಣಸಿದೆ.
ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಕಳಫೆ ಪ್ರದರ್ಶನ ನೀಡಿದ್ದ ರೋಹಿತ್ ಶರ್ಮಾ, ಪ್ರಾಕ್ಟೀಸ್ ಮ್ಯಾಚ್ ನಲ್ಲಿಯೂ ಅದೇ ಫಾರ್ಮ್ ಮುಂದುವರೆಸಿದ್ದಾರೆ.
ಇನ್ನಿಂಗ್ಸ್ ಆರಂಭದಿಂದಲೂ ಫಾಸ್ಟ್ ಬೌಲರ್ ಗಳನ್ನು ಎದುರಿಸಲು ರೋಹಿತ್ ಶರ್ಮಾ ತುಂಬಾ ಕಷ್ಟಪಟ್ಟರು.
ಮುಖ್ಯವಾಗಿ ಪ್ರಾಕ್ಟೀಸ್ ಮ್ಯಾಚ್ ನಲ್ಲಿ ಲಿಸೆಸ್ಟರ್ ಶೈರ್ ತಂಡದ ಪರ ಆಡುತ್ತಿರುವ ಜಸ್ ಪ್ರೀತ್ ಬುಮ್ರಾ , ಪ್ರಸಿದ್ಧ್ ಕೃಷ್ಣ ಬೌಲಿಂಗ್ ನಲ್ಲಿ ರನ್ ಗಳಿಸಲು ರೋಹಿತ್ ಪರದಾಡಿದರು.

ಈ ಪಂದ್ಯದಲ್ಲಿ ವೇಗಿಗಳ ಬ್ಯಾಕ್ ಆಫ್ ದಿ ಲೆಂಗ್ತ್ ಬೌಲಿಂಗ್ ನಲ್ಲಿ ರೋಹಿತ್ ಶರ್ಮಾ ಅವರನ್ನ ಕಾಡಿದರು.
ಕೊನೆಗೆ ರೋಮನ್ ವಾಕರ್ ಬೌಲಿಂಗ್ ನಲ್ಲಿ ನಿರ್ಲಕ್ಷ್ಯ ಹೊಡೆತಕ್ಕೆ ಕೈ ಹಾಕಿ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡರು.
ಮೊದಲ ಇನ್ನಿಂಗ್ಸ್ ನಲ್ಲಿ 47 ಎಸೆತಗಳನ್ನು ಎದುರಿಸಿದ ರೋಹಿತ್ ಶರ್ಮಾ, ಕೇವಲ 25 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.
ಮೊದಲ ದಿನದ ಆಟದ ಅಂತ್ಯಕ್ಕೆ ಭಾರತ ಕ್ರಿಕೆಟ್ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 60.2 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 246 ರನ್ ಗಳಿಸಿದೆ. ಕೆ.ಎಸ್.ಭರತ್ 111 ಎಸೆತಗಳಲ್ಲಿ 70 ರನ್ ಗಳಿಸಿದ್ದಾರೆ.