Rowdy sheeters join jds : ಶಾಸಕ ತಮ್ಮಣ್ಣ ನೇತೃತ್ವದಲ್ಲಿ JDSಗೆ ಸೇರ್ಪಡೆಗೊಂಡ ರೌಡಿ ಶೀಟರ್ ಗಳು…
ದಿನಕಳೆದಂತೆ ರಾಜಕೀಯ ಚುನಾವಣೆಯ ಕಾವು ಜೊರಾಗುತ್ತಿದ್ದು ರಾಜಕೀಯ ಪಡಸಾಲೆಯಲ್ಲಿ ಚಟುವಟಿಕೆಗಳು ಗರಿಗೆದರಿವೆ. ಹಲವು ಕಾರಣಗಳಿಗಾಗಿ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಕಾರ್ಯಕರ್ತರ ಸಂಖ್ಯೆ ಹೆಚ್ಚಾಗಿದೆ. ರೌಡಿ ಶೀಟರ್ ಗಳು, ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು ಸಹ ಪಕ್ಷದ ಕದ ತಟ್ಟುತ್ತಿದ್ದಾರೆ. ಬಿಜೆಪಿ ಕಾಂಗ್ರೆಸ್ ನಂತರ ಇದೀಗ ಜೆಡಿಎಸ್ ಸರದಿ.
ಮಂಡ್ಯ ಜಿಲ್ಲೆಯ ಇಬ್ಬರು ರೌಡಿ ಶೀಟರ್ ಗಳು ಇದೀಗ ಜೆಡಿಎಸ್ ಸಖ್ಯ ಬಯಸಿದ್ದಾರೆ. ಮದ್ದೂರು ಠಾಣೆಯ ರೌಡಿ ಶೀಟರ್ ಗಳಾದ ವರುಣ್ ಗೌಡ ಮತ್ತು ಪ್ರಶಾಂತ್ ಮದ್ದೂರು ಶಾಸಕ ಡಿ ಸಿ ತಮ್ಮಣ್ಣ ಅವರ ಸಮ್ಮುಖದಲ್ಲಿ ಜೆಡಿಎಸ್ ಗೆ ಸೇರ್ಪಡೆಗೊಂಡಿದ್ದಾರೆ.
ಶಾಸಕ ತಮ್ಮಣ್ಣ ಅವರು ರೌಡಿಶೀಟರ್ ಗಳ ಜೊತೆ ನೂರಾರು ಯುವಕರಿಗೆ ಮಾಂಸದೂಟದ ಔತಣ ಏರ್ಪಡಿಸಿ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ.
Rowdy sheeters join jds: Rowdy sheeters joined JDS under the leadership of MLA Tammanna…