ರಾಯಚೂರು : ಅಪಾರ ಭಕ್ತರನ್ನು ಹೊಂದಿರುವ ಮಂತ್ರಾಲಯದ (Mantralayam) ರಾಘವೇಂದ್ರ ಸ್ವಾಮಿಗಳ ರಥೋತ್ಸವವು ಅದ್ದೂರಿಯಾಗಿ ನಡೆಯಿತು.
ರಾಘವೇಂದ್ರ ಸ್ವಾಮಿಗಳು (Raghavendra Swamy) 352ನೇ ಆರಾಧನಾ ಮಹೋತ್ಸವದ (Aradhana Mahotsava) ಕೊನೆಯ ಘಟ್ಟ ಉತ್ತರಾಧನೆ ಬಹಳ ಅದ್ದೂರಿಯಾಗಿ ನಡೆಯಿತು. ರಾಜಬೀದಿಯಲ್ಲಿ ಮಹಾರಥೋತ್ಸವವು ಸಹಸ್ರಾರು ಭಕ್ತರ ಎದುರು ನಡೆಯಿತು.
ಗುರು ರಾಘವೇಂದ್ರರು ವೃಂದಾವನಸ್ಥರಾದ ಮರುದಿನವನ್ನು ಉತ್ತರಾಧನೆಯಾಗಿ ಆಚರಿಸಲಾಗುತ್ತದೆ. ಈ ದಿನ ರಾಯರು ಪ್ರಹ್ಲಾದ ರಾಜರ ಉತ್ಸವ ಮೂರ್ತಿ ರೂಪದಿಂದ ಹೊರ ಪ್ರಾಕಾರದಲ್ಲಿ ಬಂದು ಭಕ್ತರಿಗೆ ರಾಜ ಬೀದಿಯಲ್ಲಿ ದರ್ಶನ ನೀಡುತ್ತಾರೆ ಎನ್ನುವ ನಂಬಿಕೆ ಇದೆ.
ರುರಾಯರನ್ನು ಪ್ರಹ್ಲಾದ ರಾಜರ ರೂಪದಲ್ಲಿ ಸಂಸ್ಕೃತ ಪಾಠಶಾಲೆಗೆ ಮೆರವಣಿಗೆಯಲ್ಲಿ ಕರೆದೊಯ್ಯುವ ಮೂಲಕ ಭಕ್ತರಿಗೆ ದರ್ಶನಕ್ಕೆ ದಾರಿ ಮಾಡಲಾಯಿತು.