ಬೆಂಗಳೂರು : ಆರ್ ಟಿಐ ಕಾರ್ಯಕರ್ತರೊಬ್ಬರ ಶವವು ಅರೆನಗ್ನವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಜಿಗಣಿ ಹತ್ತಿರದ ಮಾದಪಟ್ಟಣದಲ್ಲಿ ಬೆಳಕಿಗೆ ಬಂದಿದೆ.
ಆರ್ಟಿಐ ಕಾರ್ಯಕರ್ತನ ಸಾವಿನಿಂದಾಗಿ ಹಲವಾರು ಅನುಮಾನಗಳ ವ್ಯಕ್ತವಾಗುತ್ತಿವೆ. ಪ್ರದೀಪ್ (38) ಮೃತ ಆರ್ ಟಿಐ ಕಾರ್ಯಕರ್ತ. ಕಾರಿನ ಶೆಡ್ನಲ್ಲಿ ಆತನ ದೇಹ ಅರೆನಗ್ನವಾಗಿ ಪತ್ತೆಯಾಗಿದ್ದು, ಕಬ್ಬಿಣದ ಪೈಪ್ ಒಂದಕ್ಕೆ ಹಗ್ಗದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಶವ ಸಿಕ್ಕಿದೆ. ಶವ ಕಂಡು ಹಲವಾರು ಅನುಮಾನಗಳು ವ್ಯಕ್ತವಾಗುತ್ತಿದ್ದು, ಸ್ಥಳಕ್ಕೆ ಜಿಗಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.