ಉಕ್ರೇನ್ ನ ಮಿಲಿಟರಿ ಫೆಸಲಿಟಿ ಮೇಲೆ ಕ್ಷಿಪಣಿ ದಾಳಿ ನಡೆಸಿದ ರಷ್ಯಾ – Saaksha Tv
ಉಕ್ರೇನ್: ಉಕ್ರೇನ್ ಮೇಲೆ ರಷ್ಯಾ ಸತತ ದಾಳಿ ನಡೆಸಿದ್ದು, ಇಂದು ಬೆಳಿಗ್ಗೆ ಪೋಲಿಷ್ ಗಡಿಯ ಸಮೀಪವಿರುವ ದೊಡ್ಡ ಉಕ್ರೇನಿಯನ್ ಮಿಲಿಟರಿ ಸೌಲಭ್ಯದ ಮೇಲೆ ರಷ್ಯಾದ ಪಡೆಗಳು ಕ್ಷಿಪಣಿ ದಾಳಿಯನ್ನು ಮಾಡಿವೆ.
ಈ ದಾಳಿಯು ಉಕ್ರೇನ್ ಪಶ್ಚಿಮದಲ್ಲಿ ನಡೆದಿದೆ. ವೈಮಾನಿಕ ದಾಳಿಯಾಗುತ್ತಿದ್ದಂತೆ ಮತ್ತೆ ರಾಜಧಾನಿ ಕೈವ್‌ನಲ್ಲಿ ಸೈರನ್ ಮೊಳಗಿದೆ. ಅಲ್ಲದೆ ರಷ್ಯಾ ಯವೊರಿವ್‌ನಲ್ಲಿರುವ ಶಾಂತಿಪಾಲನೆ ಮತ್ತು ಭದ್ರತೆ ಅಂತಾರಾಷ್ಟ್ರೀಯ ಕೇಂದ್ರದ ಮೇಲೆ ವೈಮಾನಿಕ ದಾಳಿ ನಡೆಸಿದೆ. ಎಂದು ಎಲ್ವಿವ್ ಪ್ರಾದೇಶಿಕ ಮಿಲಿಟರಿ ಆಡಳಿತವು ಹೇಳಿಕೆಯಲ್ಲಿ ತಿಳಿಸಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಅವರು ಎಂಟು ಕ್ಷಿಪಣಿಗಳನ್ನು ಹಾರಿಸಿದ್ದು, ಯಾವುದೇ ಸಾವು ಸಂಭವಿಸಿಲ್ಲ ಆದರೆ ಅನೇಕ ಜನರಿಗೆ ಗಾಯಗಳಾಗಿದ್ದು, ಈ ಕುರಿತು ಮಾಹಿತಿ ಬಹಿರಂಗವಾಗಬೇಕಾಗಿದೆ ಎಂದು ಉಕ್ರೇನಿಯನ್ ಸಶಸ್ತ್ರ ಪಡೆಗಳ ಅಕಾಡೆಮಿ ಆಫ್ ಲ್ಯಾಂಡ್ ಫೋರ್ಸಸ್ನ ವಕ್ತಾರ ಆಂಟನ್ ಮಿರೊನೊವಿಚ್ ಹೇಳಿದರು.
ಹಾಗೇ ಉಕ್ರೇನ್-ರಷ್ಯಾ ನಡುವೆ ಯುದ್ಧ ಪ್ರಾರಂಭವಾದಾಗಿನಿಂದ ಉಕ್ರೇನ್‌ನ 1,300ಕ್ಕೂ ಹೆಚ್ಚು ಸೈನಿಕರು ಸಾವನ್ನಪ್ಪಿದ್ದು, ರಷ್ಯಾದ ಸೈನಿಕರ ಸಾವಿನ ಸಂಖ್ಯೆ ಇದಕ್ಕಿಂತಲೂ ಹೆಚ್ಚಿದೆ ಎಂದು ಉಕ್ರೇನ್ ತಿಳಿಸಿದೆ. ರಷ್ಯಾ ಉಕ್ರೇನ್‌ನ ಅತೀ ಹೆಚ್ಚು ಜನಸಂಖ್ಯೆಯಿರುವ ನಗರ ಮೆಲಿಟೊಪೊಲ್ ಅನ್ನು ಶನಿವಾರ ವಶಪಡಿಸಿಕೊಂಡಿದೆ. ರಷ್ಯಾ ಉಕ್ರೇನ್‌ನ ನಾಗರಿಕರ ಮೇಲೂ ದಾಳಿ ನಡೆಸುತ್ತಿದ್ದು, ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರೂ ಸಾವನ್ನಪ್ಪುತ್ತಿದ್ದಾರೆ ಎಂದು ಉಕ್ರೇನ್ ಆರೋಪಿಸಿದೆ.