ಭಾರತದ ಕೋರಿಕೆ ಮೇರೆಗೆ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಸರಬರಾಜು ನಿಲ್ಲಿಸಲಿರುವ ರಷ್ಯಾ
ಮಾಸ್ಕೋ, ಸೆಪ್ಟೆಂಬರ್ 06: ಮಾಸ್ಕೋದಲ್ಲಿ ನಡೆದ ಸಭೆಯಲ್ಲಿ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುವುದಿಲ್ಲ ಎಂದು ರಷ್ಯಾ ಹೇಳಿದೆ. ಭಾರತದ ಕೋರಿಕೆಯ ಮೇರೆಗೆ ರಷ್ಯಾದ ಸಚಿವ ಜನರಲ್ ಸೆರ್ಗೆಯ್ ಶೋಯಿಗು ಈ ಹೇಳಿಕೆಯನ್ನು ನೀಡಿದ್ದಾರೆ. ಈ ಮೂಲಕ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಭಾರತದ ಭದ್ರತಾ ಹಿತಾಸಕ್ತಿಗೆ ರಷ್ಯಾ ನಿಲ್ಲುತ್ತದೆ ಎಂಬ ಭರವಸೆಯನ್ನು ಸಚಿವ ಜನರಲ್ ಸೆರ್ಗೆಯ್ ಶೋಯಿಗು ನೀಡಿದ್ದಾರೆ.
ದೇಶದ ರಕ್ಷಣಾ ಮತ್ತು ಭದ್ರತಾ ಅಗತ್ಯಗಳನ್ನು ಪರಿಹರಿಸಲು ರಷ್ಯಾ ಒದಗಿಸಿದ ಅಚಲ ಬೆಂಬಲಕ್ಕಾಗಿ ಸಿಂಗ್ ಭಾರತದ ಮೆಚ್ಚುಗೆಯನ್ನು ತಿಳಿಸಿದ್ದಾರೆ. ಮುಂಬರುವ ಏರೋ ಇಂಡಿಯಾ -2021 ರಲ್ಲಿ ಗಣನೀಯ ಭಾಗವಹಿಸುವಿಕೆ ಸೇರಿದಂತೆ ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಲ್ಲಿ ಭಾರತದೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಲು ರಷ್ಯಾ ಬದ್ಧವಾಗಿದೆ ಎಂದು ಜನರಲ್ ಶೋಯಿಗು ಹೇಳಿದ್ದಾರೆ. ಫೆಬ್ರವರಿ 3 ರಿಂದ 7 ರವರೆಗೆ ಬೆಂಗಳೂರಿನ ಹೊರಗಿನ ಯಲಹಂಕ ವಾಯುನೆಲೆಯಲ್ಲಿ ಕೋವಿಡ್ ಮಾನದಂಡಗಳನ್ನು ಕಾಪಾಡಿಕೊಂಡು ಪ್ರದರ್ಶನವನ್ನು ಪ್ರದರ್ಶಿಸಲಾಗುವುದು