ಉಕ್ರೇನ್ ನಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಅನಾರೋಗ್ಯದಿಂದ ಸಾವು
ಉಕ್ರೇನ್‌ನ ಖಾರ್ಕಿವ್ ಪ್ರದೇಶದಲ್ಲಿ ಶೆಲ್ ದಾಳಿಯಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ ಒಂದು ದಿನದ ನಂತರ, ಯುದ್ಧ ಪೀಡಿತ ದೇಶದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಪಾರ್ಶ್ವವಾಯುವಿಗೆ ಬಲಿಯಾಗಿದ್ದಾನೆ. ಕೆಲಕಾಲ ಆಸ್ಪತ್ರೆಯಲ್ಲಿದ್ದ ಪಂಜಾಬ್‌ನ ಚಂದನ್ ಜಿಂದಾಲ್ ಪಾರ್ಶ್ವವಾಯುವಿಗೆ ತುತ್ತಾಗಿದ್ದರು.
ಉಕ್ರೇನ್ ನಲ್ಲಿ ಮತ್ತೊಬ್ಬ ಭಾರತೀಯ ಅನಾರೋಗ್ಯದಿಂದಾಗಿ ಸಾವನ್ನಪ್ಪಿದ್ದಾರೆ. 22 ವರ್ಷದ ಚಂದನ್ ಜಿಂದಾಲ್ ವಿನಿಸ್ಟಿಯಾದ ಸ್ಮಾರಕ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ. ಆರೋಗ್ಯದ ಸ್ಥಿತಿ ಹದಗೆಟ್ಟಿದ್ದರಿಂದ ಐಸಿಯೂ ಗೆ ಸೇರಿಸಲಾಗಿತ್ತು. ಬ್ರೈನ್ ಸ್ಟ್ರೋಕ್ ನಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ.
ಏತನ್ಮಧ್ಯೆ, ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತನ್ನ ಎಲ್ಲಾ ನಾಗರಿಕರನ್ನು ತಕ್ಷಣವೇ ಖಾರ್ಕಿವ್‌ನಿಂದ ತೊರೆಯಲು ಮತ್ತು ಪೆಸೊಚಿನ್, ಬಾಬಾಯೆ ಮತ್ತು ಬೆಜ್ಲ್ಯುಡೋವ್ಕಾ ವಸಾಹತುಗಳನ್ನು ತಲುಪುವಂತೆ ತುರ್ತು ಸಲಹೆಯನ್ನು ನೀಡಿದೆ.
ರಷ್ಯಾ ಆಕ್ರಮಣದಿಂದಾಗಿ ವಸತಿ ಕಳೆದುಕೊಂಡಿರುವ ಉಕ್ರೇನ್ ನಿರಾಶ್ರಿತರಿಗೆ ಕೈವ್ ನಗರದಲ್ಲಿ ರೆಸ್ಟೋರೆಂಟ್ ನಡೆಸುತ್ತಿರುವ ಮನೀಶ ದೇವ್ ಎಂಬ ಭಾರತಿಯ ಉದ್ಯಮಿ ಆಶ್ರಯ ನೀಡಿ ಆಹಾರವನ್ನೂ ನೀಡುತ್ತಿದ್ದಾರೆ.
Russia-Ukraine War LIVE – Second Indian student dies in Ukrain








