ಉಕ್ರೇನ್ ನ ಮರಿಯುಪೋಲ್ನ ಮಸೀದಿ ಮೇಲೆ ರಷ್ಯಾ ವೈಮಾನಿಕ ದಾಳಿ – Saaksha Tv
ಉಕ್ರೇನ್ : ರಷ್ಯಾ-ಉಕ್ರೇನ್ ಮಧ್ಯೆ ಯುದ್ಧ 17ನೇ ದಿನ ಮುಂದುವರೆದಿದ್ದು, ಇಂದು ರಷ್ಯಾ ಎರಡು ಪ್ರತ್ಯೇಕ ಸ್ಥಳಗಳಲ್ಲಿ ವೈಮಾನಿಕ ದಾಳಿ ನಡೆಸಿದೆ.
ರಷ್ಯಾ ಕೈವ್ ಪ್ರದೇಶದ ವಾಸಿಲ್ಕಿವ್‌ನಲ್ಲಿನ ವಾಯುನೆಲೆಯ ಮೇಲೆ ದಾಳಿಮಾಡಿ ವಾಯುನೆಯನ್ನು ಸಂಪೂರ್ಣವಾಗಿ ನಾಶಪಡಿಸಿದೆ. ಅಲ್ಲದೆ ಉಕ್ರೇನ್ನ ಮರಿಯುಪೋಲ್ನ ಮಸೀದಿವೊಂದರ ಮೇಲೆ ಬಾಂಬ್ ದಾಳಿ ನಡೆಸಲಾಗಿದೆ.
ಸುಮಾರು 80 ಜನರು ಉಳಿದುಕೊಂಡಿದ್ದ ಮರಿಯುಪೋಲ್ನ ಮಸೀದಿ ಮೇಲೆ ರಷ್ಯಾ ಪಡೆಗಳು ಬಾಂಬ್ ದಾಳಿ ನಡೆಸಿವೆ ಎಂದು ಉಕ್ರೇನ್ ಅಧಿಕಾರಿಗಳು ಟ್ವೀಟ್ ಮಾಡಿದ್ದಾರೆ.
ಈ ಮಸೀದಿಯಲ್ಲಿ ಟರ್ಕಿ ಸೇರಿದಂತೆ ವಿವಿಧ ದೇಶದ ಮಕ್ಕಳು ಸೇರಿದಂತೆ 80ಕ್ಕೂ ಹೆಚ್ಚು ಜನರು ಅಡಗಿಕೊಂಡಿದ್ದರರು. ದಾಳಿಯಿಂದಾಗಿ ಕೆಲವರು ತಮ್ಮ ಪ್ರಾಣ ಕಳೆದುಕೊಂಡಿರುವ ಶಂಕೆ ಇದೆ ಎಂದು ತಿಳಿದುಬಂದಿದೆ.