ರಷ್ಯಾ ಉಕ್ರೇನ್ ಯುದ್ಧದ ನಡುವೆ ಶುಭ ಸುದ್ದಿ – 108 ಮಹಿಳಾ ಖೈದಿಗಳ ವಿನಿಮಯ…
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ನಡುವೆ ಅಪರೂಪಕ್ಕೊಂದು ಶುಭ ಸುದ್ಧಿ ಬಂದಿದೆ. ರಷ್ಯಾದೊಂದಿಗೆ 100ಕ್ಕೂ ಹೆಚ್ಚು ಯುದ್ಧ ಕೈದಿಗಳನ್ನ ವಿನಿಮಯ ಮಾಡಿಕೊಳ್ಳಲಾಗಿದೆ ಎಂದು ಉಕ್ರೇನಿಯನ್ ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು ಎಂಟು ತಿಂಗಳ ಸುದೀರ್ಘ ಯುದ್ಧದ ಸಮಯದಲ್ಲಿ ಮಾಸ್ಕೋದೊಂದಿಗಿನ ಮೊದಲ ಸಂಪೂರ್ಣ ಮಹಿಳಾ ವಿನಿಮಯ ಎಂದು ವಿವರಿಸಲಾಗಿದೆ. “ಇಂದು ಯುದ್ಧ ಕೈದಿಗಳ ಬೃಹತ್ ವಿನಿಮಯವಿದೆ. ನಾವು 108 ಮಹಿಳೆಯರನ್ನು ಸೆರೆಯಿಂದ ಮುಕ್ತಗೊಳಿಸಿದ್ದೇವೆ. ಇದೇ ಮೊದಲ ಪ್ರಯತ್ನವಾಗಿತ್ತು ಎಂದು ಉಕ್ರೇನಿಯನ್ ಪ್ರೆಸಿಡೆನ್ಸಿಯ ಮುಖ್ಯಸ್ಥ ಆಂಡ್ರೆ ಯೆರ್ಮಾಕ್ ಹೇಳಿದ್ದಾರೆ.
ಪೂರ್ವ ಉಕ್ರೇನ್‌ನ ಡೊನೆಟ್ಸ್ಕ್ ಪ್ರದೇಶದ ಮುಖ್ಯಸ್ಥ ಡೆನಿಸ್ ಪುಶಿಲಿನ್ ವಿನಿಮಯವನ್ನ ದೃಢಪಡಿಸಿದ್ದಾರೆ. 108 ಮಹಿಳೆಯರನ್ನು ವಿನಿಮಯ ಮಾಡಿಕೊಳ್ಳಲಾಗಿದ್ದು, 2 ಮಂದಿ ರಷ್ಯಾದಲ್ಲಿ ಉಳಿಯಲು ನಿರ್ಧರಿಸಿದ್ದಾರೆ ಎಂದು ಅವರು ಹೇಳಿದರು. 72 ಜನರು ಉಕ್ರೇನ್‌ನಿಂದ ಮರಳಿದ್ದಾರೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.
ರಷ್ಯಾ ದಾಳಿಯಿಂದ ಉಕ್ರೇನ್ ರಾಜಧಾನಿ ಕೀವ್ ಮತ್ತೊಮ್ಮೆ ತತ್ತರಿಸಿ ಹೋಗಿರುವ ಸಂದರ್ಭದಲ್ಲೇ ಈ ಸುದ್ದಿ ಬಂದಿದೆ. ಈ ಸ್ಫೋಟಕ್ಕಾಗಿ ಡ್ರೋನ್‌ಗಳನ್ನು ಬಳಸಲಾಗಿದೆ. ರಷ್ಯಾದ ಪಡೆಗಳು ಬಳಸಿರುವ ಡ್ರೋನ್‌ಗಳು ಇರಾನ್‌ನ ಶಾಹೆದ್ ಡ್ರೋನ್‌ಗಳು ಎಂದು ತೋರುತ್ತದೆ. ಉಕ್ರೇನಿಯನ್ ಸೈನಿಕರು ಈ ಡ್ರೋನ್‌ಗಳನ್ನು ಗುಂಡು ಹಾರಿಸುವ ಮೂಲಕ ಹೊಡೆದುರುಳಿಸಲು ಪ್ರಯತ್ನಿಸಿದ್ದಾರೆ.
Russo-Ukraine war: Good news amid war – 108 female prisoners exchanged…