ADVERTISEMENT
Tuesday, June 24, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ಈ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದರೆ ಸಂತಾನ ಭಾಗ್ಯ ಲಭಿಸಲಿದೆ ಈ ದೇವರ ವಿಶೇಷತೆ ಏನು ಗೊತ್ತಾ…?

Shwetha by Shwetha
April 21, 2021
in Astrology, Newsbeat, ಜ್ಯೋತಿಷ್ಯ, ನ್ಯೂಸ್ ಬೀಟ್
Saakshatv astrology halu rameshwara
Share on FacebookShare on TwitterShare on WhatsappShare on Telegram

ಈ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದರೆ ಸಂತಾನ ಭಾಗ್ಯ ಲಭಿಸಲಿದೆ ಈ ದೇವರ ವಿಶೇಷತೆ ಏನು ಗೊತ್ತಾ…?

ಶ್ರೀ ಕ್ಷೇತ್ರ ರಾಮಾಯಣ ಕಾಲದಲ್ಲಿ ವಾಲ್ಮೀಕಿ ನಿರ್ಮಿಸಿದ ಇತಿಹಾಸ ಪ್ರಸಿದ್ಧ ಹಾಲು ರಾಮೇಶ್ವರವಿದು. ಇಲ್ಲಿ ಉದ್ಬವ ಗಂಗೆ ಪವಾಡ. ಈ ಬಾವಿಯೊಳಗಿಂದ ನಿಮ್ಮ ಇಷ್ಟಾನುಸಾರ ಸಿದ್ಧಿ ಪ್ರಸಾದ ಮೇಲೆದ್ದು ಬರುವುದು, ಮೈಸೂರು ಮಹಾರಾಜರು ಸಹ ಇಲ್ಲಿ ಫಲ ಬೇಡಲು ಬಂದ ಇತಿಹಾಸವಿದೆ. ಇದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನಿಂದ 11 ಕಿಲೋ ಮೀಟರ್ ದೂರದಲ್ಲಿದೆ .

Related posts

ಮಲೆನಾಡಿನ ಮಜ್ಜಿಗೆ ಹುಳಿ ರೆಸಿಪಿ ಒಮ್ಮೆ Try ಮಾಡಿ

ಮಲೆನಾಡಿನ ಮಜ್ಜಿಗೆ ಹುಳಿ ರೆಸಿಪಿ ಒಮ್ಮೆ Try ಮಾಡಿ

June 24, 2025
ಬಿಯರ್ ಮತ್ತು ವಿಸ್ಕಿ: ಯಾವುದು ಉತ್ತಮ?ತಜ್ಞರು ಏನಾಂತರೆ?

ಬಿಯರ್ ಮತ್ತು ವಿಸ್ಕಿ: ಯಾವುದು ಉತ್ತಮ?ತಜ್ಞರು ಏನಾಂತರೆ?

June 24, 2025

ಶ್ರೀ ಕ್ಷೇತ್ರ ಹಾಲು ರಾಮೇಶ್ವರ ದಕ್ಷಿಣ ಕಾಶಿ ಎಂದೇ ಖ್ಯಾತವಾದ ಪವಿತ್ರ ಪುಣ್ಯಕ್ಷೇತ್ರ.
ನೀರಗುಡ್ಡ, ಕೋಟೆಕಲ್ಲು ಗುಡ್ಡ, ದೊಡ್ಡರಸಿಗುಡ್ಡ, ತಿರುಮಲದೇವರ ಗುಡ್ಡ ಮತ್ತು ಹಾಲುರಾಮೇಶ್ವರ ಗುಡ್ಡಗಳನ್ನು ಹೊಂದಿರುವ ಹೊಸದುರ್ಗದ ಬೆಟ್ಟಶ್ರೇಣಿಗಳಲ್ಲಿ 1,181 ಮೀಟರ್ ಎತ್ತರವಿರುವ ಹಾಲುರಾಮೇಶ್ವರ.
Saakshatv astrology halu rameshwara

ಹಾಲುರಾಮೇಶ್ವರ ಕ್ಷೆತ್ರದ ವಿಶೇಷತೆ:- ಹಾಲು ರಾಮೇಶ್ವರ ತನ್ನಲ್ಲಿರುವ ವಿಶೇಷತೆಯಿಂದ ಭಕ್ತರನ್ನು ಸೆಳೆಯುತ್ತಿದೆ. ಇಲ್ಲಿ ಗಂಗಾ, ಯಮುನಾ ಹಾಗೂ ಸರಸ್ವತಿ ಎಂಬ ಮೂರು ಕೊಳಗಳಿವೆ. ಗಂಗಾ ಕೊಳದ ಮೇಲೆ ವಾಲ್ಮೀಕಿ ಮಹರ್ಷಿ ಪ್ರತಿಷ್ಠಾಪಿತ ಗಂಗಾಮಾತೆಯ ವಿಗ್ರಹವಿದೆ. ಇಲ್ಲಿ ಗಂಗಾಮಾತೆಯ ಪೂಜೆ ಮಾಡುವ ಭಕ್ತರು, ಕೊಳದ ನಾಲ್ಕೂ ಕಡೆ ಕುಳಿತು ತಮ್ಮ ಬಯಕೆ ಈಡೇರುತ್ತದೆಯೋ ಇಲ್ಲವೋ ಎಂದು ಕೇಳುತ್ತಾರೆ. ಮನದ ಬಯಕೆ ಈಡೇರುವುದಾದರೆ ಅವರಿಗೆ ಶುಭ ಸಂಕೇತವಾದ ಬಿಲ್ವಪತ್ರೆ, ಹರಿಶಿನ ಕುಂಕುಮ, ಬಳೆ ಬಿಚ್ಚೋಲೆ, ಅಡಿಕೆ, ಹೊಂಬಾಳೆ, ಸಿಹಿ, ಫಲಪುಷ್ಪ, ತಾಂಬೂಲ ಇತ್ಯಾದಿ ಬರುತ್ತದೆ. ಕೆಲಸ ಆಗುವುದಿಲ್ಲವೆಂದಾರೆ ಅಶುಭ ಸೂಚನೆಗಳಾದ ಒಡೆದ ಬಳೆಚೂರು, ಎಳ್ಳು, ಖಾಲಿ ಕೊಡ, ಚಿಪ್ಪು ದರ್ಬೆ ಬರುವುದೂ ಉಂಟು. ಕೆಲವರು ಎಷ್ಟು ಹೊತ್ತು ಕಾದರೂ ಏನೂ ಬರುವುದಿಲ್ಲ, ಬೇರೆಯವರಿಗಾಗಿ ಬಂದ ವಸ್ತುವನ್ನು ಮತ್ತೊಬ್ಬರು ಪಡೆಯಲು ಯತ್ನಿಸಿದರೆ ಅದು ಮುಳುಗಿ ಹೋಗುತ್ತದೆ.

ಇಲ್ಲಿ ಬಾಳೆಹಣ್ಣು, ತೆಂಗಿನಕಾಯಿ ಹೋಳು ಇತ್ಯಾದಿ ವಸ್ತುಗಳು ನೀರಿನ ಮೇಲೆ ತೇಲುವುದೇ ಒಂದು ಪವಾಡ. ತೇಲಲೇಬೇಕಾದ ಎಲೆ, ಕರಗುವ ಕುಂಕುಮ, ಹರಿಶಿನ ಕರಗದೆ ತೇಲುವುದು ಮತ್ತೊಂದು ವಿಶೇಷ. ಭಕ್ತರು ಪೂಜಿಸಿ ನೀಡುವ ಬಾಗಿನ ಮತ್ತೊಬ್ಬರಿಗೆ ಪ್ರಸಾದ ರೂಪದಲ್ಲಿ ದೊರಕುತ್ತದೆ. ಬರವಿರಲಿ, ಮಳೆಯಿರಲಿ ಎಲ್ಲ ಕಾಲದಲ್ಲೂ ಈ ಕೊಳದಲ್ಲಿ ನೀರು ಸದಾ ಇರುತ್ತದೆ. ಈ ಕೊಳದ ಆಳ, ಪವಾಡ ಎಲ್ಲವೂ ನಿಗೂಢ. ನೂರಾರು ವರ್ಷಗಳಿಂದ ಈ ಕೊಳ ಒಮ್ಮೆಯೂ ಬತ್ತಿಲ್ಲ, ಬರಿದಾಗಿಲ್ಲ.

ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸೃಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ಮೈಸೂರು ಮಹಾರಾಜರಾಗಿದ್ದ ಜಯಚಾಮರಾಜ ಒಡೆಯರ್ ಅವರು ಇಲ್ಲಿ ಬಂದು ಗಂಗೆಯನ್ನು ಪೂಜಿಸಿ ಸಂತಾನ ಕರುಣಿಸುವಂತೆ ಕೋರಿದಾಗ ಅವರಿಗೆ ಬೆಳ್ಳಿ ತೊಟ್ಟಿಲು ಬಂತಂತೆ. ಆ ನಂತರವೇ ಶ್ರೀಕಂಠದತ್ತ ನರಸಿಂಹರಾಜ ಒಡೆಯರು ಜನಿಸಿದರು ಎಂದು ಅಧಿಕೃತ ಉಲ್ಲೇಖವಿದೆ ಎಂದು ಸಂಜೀವಮೂರ್ತಿ ಹೇಳುತ್ತಾರೆ.

ಹೊಸದುರ್ಗದಿಂದ ಕೇವಲ 11 ಕಿಲೋ ಮೀಟರ್ ದೂರದಲ್ಲಿರುವ ಈ ಊರಿಗೆ ಹಾಲು ರಾಮೇಶ್ವರ ಎಂದು ಹೆಸರು ಹೇಗೆ ಬಂತು ಎಂಬುದಕ್ಕೆ ಪುರಾಣದಲ್ಲಿ ಉಲ್ಲೇಖವಿದೆಯಂತೆ. ವಾಲ್ಮೀಕಿ ಮಹರ್ಷಿಗಳ ಪತ್ನಿ ಸುದತಿದೇವಿ ಕಾಶಿಯಲ್ಲಿ ಗಂಗೆಗೆ ಬಾಗಿನ ರೂಪದಲ್ಲಿ ಸಮರ್ಪಿಸಿದ ವಜ್ರಖಚಿತ ಕಡಗ ಈ ಊರಿನ ಹುತ್ತದಲ್ಲಿ ದೊರಕಿತಂತೆ, ಆಗ ಅಲ್ಲಿ ಗಂಗೋದ್ಭವವೂ ಆಯಿತಂತೆ. ಈ ವಿಷಯ ತಿಳಿದ ವಾಲ್ಮೀಕಿ ಮಹರ್ಷಿಗಳು ಇಲ್ಲಿಯೇ ನೆಲೆ ನಿಂತು ಬರುವ ಭಕ್ತರ ಅದೃಷ್ಟಾನುಸಾರ ಬೇಡಿದ ಪ್ರಸಾದ ನೀಡೆಂದು ಗಂಗೆಗೆ ತಿಳಿಸಿ, ಗಂಗಾಮಾತೆ ವಿಗ್ರಹ ಪ್ರತಿಷ್ಠಾಪಿಸಿ ರಾಮೇಶ್ವರದತ್ತ ಹೊರಟರಂತೆ. ಆಗ ಹಾಲಿನ ಬಣ್ಣದ ನೀರು ಉದ್ಭವಿಸಿದ ಈ ಕ್ಷೇತ್ರಕ್ಕೆ ತಾವು ಹೊರಟಿದ್ದ ರಾಮೇಶ್ವರದ ಹೆಸರು ಸೇರಿಸಿ ಹಾಲು ರಾಮೇಶ್ವರ ಎಂದು ನಾಮಕರಣ ಮಾಡಿದರು ಎನ್ನುತ್ತಾರೆ ಹಾಲು ರಾಮೇಶ್ವರ ಕ್ಷೇತ್ರದ ಅಭಿವೃದ್ಧಿ ಸಮಿತಿಯ ಸಂಸ್ಥಾಪಕ ಕಾರ್ಯದರ್ಶಿಗಳಾದ ಹೊ.ಸ್ವಾ. ಸಂಜೀವಮೂರ್ತಿ ಅವರು.

ಕ್ಷೇತ್ರದಲ್ಲಿ ಗಂಗೆ ಆವಿರ್ಭವಿಸಲು ಕಾರಣರಾದ ವಾಲ್ಮೀಕಿ ಮಹರ್ಷಿಗಳ ಪತ್ನಿ ಸುದತಿದೇವಿಯವರ ವಿಗ್ರಹವೂ ಇದೆ. ಇಲ್ಲಿಗೆ ಬರುವ ಭಕ್ತರಿಗೆ ದೇವರನ್ನು ಮುಟ್ಟಿ ಪೂಜಿಸುವ ಅವಕಾಶವುಂಟು. ಜಾತಿ, ಮತ, ಧರ್ಮಗಳ ಭೇದವಿಲ್ಲದೆ ಎಲ್ಲರೂ ಭಕ್ತಿಯಿಂದ ದೇವರನ್ನು ಪೂಜಿಸುತ್ತಾರೆ. ಕ್ಷೇತ್ರದಲ್ಲಿ ಹಾಲುರಾಮೇಶ್ವರ ದೇವಾಲಯ, ಗಂಗಾಮಾತೆ ದೇವಾಲಯ, ಶ್ರೀಸೀತಾರಾಮರ ಗುಡಿ, ಶ್ರೀಮೂಲ ಗಂಗಾ ಗುಡಿ, ಶ್ರೀ ಪಂಚಲಿಂಗೇಶ್ವರ ಗುಡಿ, ಬೇಡರ ಕಣ್ಣಪ್ಪ ದೇವಾಲಯ ಹಾಗೂ ಪುರಾತನ ಅಶ್ವತ್ಥಕಟ್ಟೆಯಿದೆ.

ಹುತ್ತವಿದ್ದ ಜಾಗದಲ್ಲಿ ಹಾಸುಗಲ್ಲು ಹಾಕಿ ಅದರ ಮೇಲೆ ನಂದಿಯ ವಿಗ್ರಹ ಪ್ರತಿಷ್ಠಾಪಿಸಲಾಗಿದೆ. ಈ ಕ್ಷೇತ್ರಕ್ಕೆ ಬರುವ ಪ್ರತಿಯೊಬ್ಬರೂ ಮೊದಲು ಮೂಲಗಂಗಾದೇವಿ ದರ್ಶನ ಮಾಡಿ ನಂತರ ರಾಮೇಶ್ವರನ ದರ್ಶನ ಮಾಡುತ್ತಾರೆ. ಇಲ್ಲಿ ಕ್ಷೇತ್ರದಲ್ಲಿ ಪ್ರತೀತಿ ಕೂಡ.
Saakshatv astrology halu rameshwara

ಈ ಕ್ಷೇತ್ರವನ್ನು ಹಿಂದೆ ವಿಜಯನಗರದ ಅರಸರು, ದುರ್ಗದ ಪಾಳೆಯಗಾರರು ಅಭಿವೃದ್ಧಿ ಪಡಿಸಿದ್ದರು. ಈಗ್ಗೆ 25 ವರ್ಷಗಳ ಹಿಂದೆ ಇಲ್ಲಿಗೆ ಆಗಮಿಸಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆ ಅವರು, ಪ್ರಗತಿ ಗಂಗಾ ಯೋಜನೆ ಉದ್ಘಾಟಿಸಿ, ಹಾಲು ರಾಮೇಶ್ವರ ಹಾಗೂ ಗಂಗಾಮಾತೆಯನ್ನು ಪೂಜಿಸಿದಾಗ ಅವರಿಗೆ 5 ದಳದ ಬಿಲ್ವಪತ್ರೆ ಪ್ರಸಾದವಾಯಿತು. ದೇವರ ಸಂಕಲ್ಪದಂತೆ ಶ್ರೀಗಳು ಇಲ್ಲಿ ಮಂಜುಶ್ರೀಭವನ ನಿರ್ಮಿಸಿದರು ಎನ್ನುತ್ತಾರವರು.

ಇಲ್ಲಿಗೆ ಬರುವ ಭಕ್ತರಿಗೆ ದೇವರನ್ನು ಮುಟ್ಟಿ ಪೂಜಿಸುವ ಅವಕಾಶವುಂಟು. ಜಾತಿ, ಮತ, ಧರ್ಮಗಳ ಭೇದವಿಲ್ಲದೆ ಎಲ್ಲರೂ ಭಕ್ತಿಯಿಂದ ದೇವರನ್ನು ಪೂಜಿಸುತ್ತಾರೆ. ಕ್ಷೇತ್ರದಲ್ಲಿ ಹಾಲುರಾಮೇಶ್ವರ ದೇವಾಲಯ, ಗಂಗಾಮಾತೆ ದೇವಾಲಯ, ಶ್ರೀಸೀತಾರಾಮರ ಗುಡಿ, ಶ್ರೀಮೂಲ ಗಂಗಾ ಗುಡಿ, ಶ್ರೀ ಪಂಚಲಿಂಗೇಶ್ವರ ಗುಡಿ, ಇದೆ.
ಸಂಗ್ರಹ ಮಾಹಿತಿ
ಶ್ರೀಕ್ಷೇತ್ರ ದುರ್ಗಾಪರಮೇಶ್ವರೀ ಕಟೀಲು ದೇವಸ್ಥಾನಂ
ಭವಿಷ್ಯದ ಕುರಿತು ನಿಮಗೆ ಆತಂಕವಿದೆಯೇ..? ಜ್ಯೋತಿಷಕ್ಕೆ ಸಂಬಂಧಿಸಿದ ಪ್ರಶ್ನೆಗಳಿವೆಯೇ? ನಿಮ್ಮಲ್ಲಿನ ಗೊಂದಲಗಳನ್ನು ಬಗೆಹರಿಸಲು ನಿಮ್ಮ ವೈಯಕ್ತಿಕ ಪ್ರಶ್ನೆಗಳನ್ನು 8548998564 ಕೇಳಿ ಪರಿಹಾರ ಪಡೆದುಕೊಳ್ಳಬಹುದು ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಗ್ರಹದೋಷ ,ಗ್ರಹಚಾರ ಫಲ, ಜಾತಕ ವಿಮರ್ಶೆ ,ದುಷ್ಟಶಕ್ತಿಗಳ ಉಚ್ಚಾಟನೆ, ಮಾನಸಿಕ ಕಿರಿಕಿರಿ, ವ್ಯವಹಾರದಲ್ಲಿ ಅಭಿವೃದ್ಧಿ, ಇಷ್ಟಪಟ್ಟವರು ನಿಮ್ಮಂತೆ ಆಗಲು ಇನ್ನೂ ಹಲವಾರು ಘೋರ ನಿಗೂಡ ಸಮಸ್ಯೆಗಳಿಗೆ ಪರಿಹಾರ ಸಿಗದೇ ನೊಂದಿದ್ದರೆ,ದೈವಿಕ ಪೂಜಾ ಶಕ್ತಿಯಿಂದ ಶಾಸ್ತ್ರಆಧಾರಿತವಾಗಿ ಅತ್ಯಮೂಲ್ಯ ಮಂತ್ರ ಸಿದ್ದಿಗಳ ಮೂಲಕ ಸಮಸ್ಯೆಗಳನ್ನು ಸಂಶೋಧಿಸಿ ಸೂಕ್ತ ಪರಿಹಾರ ಮಾರ್ಗದರ್ಶನ ನೀಡುತ್ತಾರೆ 8548998564

#Saakshatv #astrology #halurameshwara

Tags: rameshwara templeSaakshatv astrology halu rameshwara
ShareTweetSendShare
Join us on:

Related Posts

ಮಲೆನಾಡಿನ ಮಜ್ಜಿಗೆ ಹುಳಿ ರೆಸಿಪಿ ಒಮ್ಮೆ Try ಮಾಡಿ

ಮಲೆನಾಡಿನ ಮಜ್ಜಿಗೆ ಹುಳಿ ರೆಸಿಪಿ ಒಮ್ಮೆ Try ಮಾಡಿ

by Shwetha
June 24, 2025
0

ಮಲೆನಾಡಿನ ಮಜ್ಜಿಗೆ ಹುಳಿ ಅತ್ಯಂತ ರುಚಿಕರವಾದ ಮತ್ತು ಆರೋಗ್ಯಕರವಾದ ಒಂದು ತಿನಿಸು. ಮಲೆನಾಡಿನ ಹಸಿರು ವಾತಾವರಣದಲ್ಲಿ ಬೆಳೆಯುವ ತರಕಾರಿಗಳು ಮತ್ತು ಸಾಂಬಾರ ಪದಾರ್ಥಗಳು ಈ ಮಜ್ಜಿಗೆ ಹುಳಿಗೆ...

ಬಿಯರ್ ಮತ್ತು ವಿಸ್ಕಿ: ಯಾವುದು ಉತ್ತಮ?ತಜ್ಞರು ಏನಾಂತರೆ?

ಬಿಯರ್ ಮತ್ತು ವಿಸ್ಕಿ: ಯಾವುದು ಉತ್ತಮ?ತಜ್ಞರು ಏನಾಂತರೆ?

by Shwetha
June 24, 2025
0

ಬಿಯರ್ ಮತ್ತು ವಿಸ್ಕಿ ಎರಡೂ ಪ್ರಪಂಚದಾದ್ಯಂತ ಜನಪ್ರಿಯ ಮದ್ಯಗಳಾಗಿವೆ. ಆದರೆ, “ಯಾವುದು ಉತ್ತಮ?” ಎಂಬ ಪ್ರಶ್ನೆಗೆ ಉತ್ತರ ನೀಡಲು, ನಾವು ವಿವಿಧ ಅಂಶಗಳನ್ನು ಪರಿಗಣಿಸಬೇಕು. ಈ ಅಂಶಗಳಲ್ಲಿ...

ಸಾಬ್ರ ಹೆಸರಿಗೆ ಅಕ್ರಮ ಖಾತೆ ಮಾಡಿದ್ರೆ ನೇಣು ಶಿಕ್ಷೆ ಅಂತ ಎಚ್ಚರಿಕೆ: ಶಾಸಕರ ವಿವಾದಾತ್ಮಕ ಹೇಳಿಕೆ ವೈರಲ್

ಸಾಬ್ರ ಹೆಸರಿಗೆ ಅಕ್ರಮ ಖಾತೆ ಮಾಡಿದ್ರೆ ನೇಣು ಶಿಕ್ಷೆ ಅಂತ ಎಚ್ಚರಿಕೆ: ಶಾಸಕರ ವಿವಾದಾತ್ಮಕ ಹೇಳಿಕೆ ವೈರಲ್

by Shwetha
June 24, 2025
0

ರಾಜ್ಯದಲ್ಲಿ ವಸತಿ ಯೋಜನೆಯ ಅಡಿಯಲ್ಲಿ ಮನೆ ಹಂಚಿಕೆ ಸಂಬಂಧ ಲಂಚದ ಆರೋಪಗಳು ಹೊರ ಹೊಮ್ಮಿದ ಬೆನ್ನಲ್ಲೇ, ಇತ್ತೀಚೆಗೆ ಶ್ರೀರಂಗಪಟ್ಟಣದ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರ ಒಂದು...

ಶ್ರೀ ಸಿದ್ಧಲಿಂಗೇಶ್ವರಸ್ವಾಮಿ ಕ್ಷೇತ್ರ ಎಡೆಯೂರು ಇತಿಹಾಸ ಮತ್ತು ಮಹಿಮೆ ಅನಾವರಣ

ಶ್ರೀ ಸಿದ್ಧಲಿಂಗೇಶ್ವರಸ್ವಾಮಿ ಕ್ಷೇತ್ರ ಎಡೆಯೂರು ಇತಿಹಾಸ ಮತ್ತು ಮಹಿಮೆ ಅನಾವರಣ

by Shwetha
June 24, 2025
0

ತುಮಕೂರು ಜಿಲ್ಲೆ, ಕುಣಿಗಲ್ ತಾಲ್ಲೂಕಿನ ಪ್ರಸಿದ್ದ ಸರ್ವಧರ್ಮದ ಪ್ರಮುಖ ಧಾರ್ಮಿಕ ಸ್ಥಳವಾದ ಎಡೆಯೂರು ಶ್ರೀ ಸಿದ್ಧಲಿಂಗೇಶ್ವರಸ್ವಾಮಿ ಕ್ಷೇತ್ರಕ್ಕೆ, ಒಂದು ಇತಿಹಾಸವಿದ್ದು, 14-15ನೇ ಶತಮಾನದಲ್ಲಿ ಮೈಸೂರು ಜಿಲ್ಲೆ ಚಾಮರಾಜನಗರ...

ದಿನ ಭವಿಷ್ಯ (24-06-2025) ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (24-06-2025) ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
June 24, 2025
0

ಜೂನ್ 24, 2025 ರ ನಿಮ್ಮ ರಾಶಿ ಭವಿಷ್ಯ ಇಲ್ಲಿದೆ. ಮೇಷ (Aries): ಇಂದು ನಿಮಗೆ ಮಿಶ್ರ ಫಲಗಳು ದೊರೆಯಲಿವೆ. ಕೆಲಸದಲ್ಲಿ ಕೆಲವು ಅಡೆತಡೆಗಳು ಎದುರಾಗಬಹುದು, ಆದರೆ...

Load More

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram