ಅಕ್ಕಿ ಹಿಟ್ಟಿನ ವಡೆ
ಬೇಕಾಗುವ ಸಾಮಗ್ರಿಗಳು
ಅಕ್ಕಿ ಹಿಟ್ಟು – 1 ಕಪ್
ಮೊಸರು -1 ಕಪ್
ಶುಂಠಿ ತುರಿ -1 ಚಮಚ
ಹಸಿಮೆಣಸು -1
ಈರುಳ್ಳಿ -1
ಕೊತ್ತಂಬರಿ ಸೊಪ್ಪು -ಸ್ವಲ್ಪ
ಇಂಗು -ಚಿಟಿಕೆಯಷ್ಟು
ಕಾಳುಮೆಣಸು – 8
ಜೀರಿಗೆ – 1/4 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ
ಮೊದಲಿಗೆ ಒಂದು ದೊಡ್ಡ ಪಾತ್ರೆಗೆ ಅಕ್ಕಿ ಹಿಟ್ಟು ಹಾಕಿ ಅದಕ್ಕೆ ಮೊಸರು ಮತ್ತು 1 ಕಪ್ ನೀರು ಹಾಕಿ ಗಂಟಿಲ್ಲದಂತೆ ಚೆನ್ನಾಗಿ ಕಲಸಿ. ನಂತರ ಅದಕ್ಕೆ ಉಪ್ಪು, ಇಂಗು, ಜೀರಿಗೆ, ಗುದ್ದಿದ ಕಾಳುಮೆಣಸು , ಶುಂಠಿ ತುರಿ, ಚಿಕ್ಕದಾಗಿ ಕತ್ತರಿಸಿದ ಹಸಿಮೆಣಸು ಸೇರಿಸಿ ಚೆನ್ನಾಗಿ ಬೆರೆಸಿ.
ಬಳಿಕ ಪ್ಯಾನ್ ಗೆ ಈ ಹಿಟ್ಟನ್ನು ಹಾಕಿ ಸಣ್ಣ ಉರಿಯಲ್ಲಿ ಕೈಯಾಡಿಸಿ ನೀರಿನ ಅಂಶವನ್ನು ತೆಗೆದು ಮುದ್ದೆಯ ರೀತಿ ಮಾಡಿ. ನಂತರ ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಸೇರಿಸಿ ಮಿಶ್ರ ಮಾಡಿ. ಇದು ತಣ್ಣಗಾದ ನಂತರ ವಡೆ ರೀತಿಯಲ್ಲಿ ತಟ್ಟಿ ಕಾದ ಎಣ್ಣೆಯಲ್ಲಿ ಕರಿಯಿರಿ.
ಈಗ ರುಚಿಯಾದ ಅಕ್ಕಿ ವಡೆ ಸವಿಯಲು ಸಿದ್ಧವಾಗಿದೆ.
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಮಂಗಳೂರು ಬಜ್ಜಿ https://t.co/VE4KjEKfaM
— Saaksha TV (@SaakshaTv) September 21, 2021
ಆಧಾರ್ ವರ್ಚುವಲ್ ಐಡಿ – ಏನಿದರ ಪ್ರಯೋಜನ? https://t.co/u6oyf4t11L
— Saaksha TV (@SaakshaTv) September 21, 2021
ಮಧುಮೇಹಿಗಳಿಗೆ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಹರ್ಬಲ್ ಚಹಾಗಳು https://t.co/RuK828BgT0
— Saaksha TV (@SaakshaTv) September 22, 2021
ವೆಜಿಟೆಬಲ್ ದೋಸೆ https://t.co/JllsY8WS3y
— Saaksha TV (@SaakshaTv) September 22, 2021
#Saakshatv #cookingrecipe #vade