ಮೆಂತ್ಯ ಸೊಪ್ಪಿನ ಚಪಾತಿ
ಬೇಕಾಗುವ ಸಾಮಗ್ರಿಗಳು
ಮೆಂತ್ಯ ಸೊಪ್ಪು – 2 ಕಟ್ಟು
ಶುಂಠಿ – 1/2 ಇಂಚು
ಗೋಧಿ ಹಿಟ್ಟು – 1 ಕಪ್
ಕಡ್ಲೆಹಿಟ್ಟು – 2 ಚಮಚ
ಜೀರಿಗೆ -1/4 ಚಮಚ
ಓಂ ಕಾಳು – 1/4 ಚಮಚ
ಮೆಣಸಿನ ಪುಡಿ – 1/2 ಚಮಚ
ಅರಿಶಿನ ಪುಡಿ – 1/2 ಚಮಚ
ಗರಂ ಮಸಾಲ – 1/2 ಚಮಚ
ಎಣ್ಣೆ – 1 ಚಮಚ
ಮೊಸರು – 4 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ
ಮೊದಲಿಗೆ ಮೆಂತ್ಯ ಸೊಪ್ಪನ್ನು ತೊಳೆದು ಸಣ್ಣದಾಗಿ ಹೆಚ್ಚಿ. ನಂತರ ಶುಂಠಿಯ ಸಿಪ್ಪೆ ತೆಗೆದು ತುರಿದಿಡಿ. ಒಂದು ಅಗಲವಾದ ಬೌಲ್ ನಲ್ಲಿ ಗೋಧಿ ಹಿಟ್ಟು, ಕಡ್ಲೆಹಿಟ್ಟು, ಹೆಚ್ಚಿದ ಮೆಂತ್ಯ ಸೊಪ್ಪು, ಶುಂಠಿ ತುರಿ, ಜೀರಿಗೆ, ಓಂ ಕಾಳು, ಮೆಣಸಿನ ಪುಡಿ, ಉಪ್ಪು, ಅರಿಶಿನ, ಗರಂ ಮಸಾಲೆ, ಎಣ್ಣೆ, ಮೊಸರು ಹಾಕಿ ಚೆನ್ನಾಗಿ ಬೆರೆಸಿ. ಅಗತ್ಯವಿದ್ದರೆ ಸ್ವಲ್ಪ ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ನಾದಿ. ನಂತರ 10 ನಿಮಿಷಗಳ ಕಾಲ ಅದನ್ನು ಹಾಗೆಯೇ ಬಿಡಿ. ಬಳಿಕ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ, ತೆಳುವಾಗಿ ಲಟ್ಟಿಸಿ.
ಕಾವಲಿಯನ್ನು ಬಿಸಿ ಮಾಡಿ ಲಟ್ಟಿಸಿಟ್ಟು ಕೊಂಡ ಚಪಾತಿ ಹಿಟ್ಟುಗಳನ್ನು ಎರಡೂ ಬದಿ ಎಣ್ಣೆ ಸವರಿ ಚೆನ್ನಾಗಿ ಕಾಯಿಸಿ.
ಈಗ ರುಚಿಯಾದ ಮೆಂತ್ಯ ಸೊಪ್ಪು ಚಪಾತಿ ಸವಿಯಲು ಸಿದ್ಧವಾಗಿದೆ.
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಖಾಲಿ ಹೊಟ್ಟೆಯಲ್ಲಿ ಮೆಂತ್ಯ ನೀರು ಕುಡಿಯುವುದರ ಆರೋಗ್ಯ ಪ್ರಯೋಜನಗಳು#Saakshatv #healthtips #fenugreek https://t.co/43x8RyFjFo
— Saaksha TV (@SaakshaTv) June 24, 2021
ಹಾಗಲಕಾಯಿ ಚಿಪ್ಸ್#Saakshatv #cookingrecipe #hagalkayichips https://t.co/R8KZlW2nhb
— Saaksha TV (@SaakshaTv) June 24, 2021
ಒಂದು ಆಧಾರ್ ಕಾರ್ಡ್ನಿಂದ ಎಷ್ಟು ಸಿಮ್ ಕಾರ್ಡ್ ಖರೀದಿಸಬಹುದು?#simcard #aadhar https://t.co/9y7x1ZNuTY
— Saaksha TV (@SaakshaTv) June 22, 2021
ಲಸಿಕೆ ಪಡೆಯುವ ಮೊದಲು/ನಂತರ ಗಮನದಲ್ಲಿರಿಸಿಕೊಳ್ಳಬೇಕಾದ ವಿಷಯಗಳು#vaccinated https://t.co/cexv6VVMQa
— Saaksha TV (@SaakshaTv) June 22, 2021
#Saakshatv #cookingrecipe #menthyasoppu #chapathi