ಕ್ಯಾರೆಟ್ ಹಲ್ವಾ
ಬೇಕಾಗುವ ಸಾಮಗ್ರಿಗಳು
ಕ್ಯಾರೆಟ್ ತುರಿ – 3 ಕಪ್
ತುಪ್ಪ – 1/4 ಕಪ್
ಸಕ್ಕರೆ -1 ಕಪ್
ಹಾಲು – 3 ಕಪ್
ಡ್ರೈ ಫ್ರೂಟ್ಸ್ – ಸ್ವಲ್ಪ
ಏಲಕ್ಕಿ ಪುಡಿ – ಚಿಟಿಕೆಯಷ್ಟು
ಮಾಡುವ ವಿಧಾನ
ಮೊದಲಿಗೆ ಬಾಣಲೆಯನ್ನು ಬಿಸಿ ಮಾಡಿ, ತುಪ್ಪವನ್ನು ಹಾಕಿ ಕರಗಿಸಿ. ನಂತರ ಡ್ರೈ ಫ್ರೂಟ್ಸ್ ಗಳನ್ನು ಹುರಿದು ಪಕ್ಕದಲ್ಲಿ ಇಟ್ಟುಕೊಳ್ಳಿ. ನಂತರ ಅದೇ ಬಾಣಲೆಗೆ ಕ್ಯಾರೆಟ್ ತುರಿ ಸೇರಿಸಿ ಕೆಲವು ನಿಮಿಷ ಹುರಿಯಿರಿ. ಬಳಿಕ ಇದಕ್ಕೆ ಹಾಲನ್ನು ಸೇರಿಸಿ ಬೇಯಿಸಿಕೊಳ್ಳಿ.
ಹಾಲು ಇಂಗುವವರೆಗೆ ಕ್ಯಾರೆಟ್ ತುರಿಯನ್ನು ಬೇಯಿಸಿ ಕೊಳ್ಳಿ. ನಂತರ ಇದಕ್ಕೆ ಸಕ್ಕರೆಯನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಸಕ್ಕರೆ ಕರಗಿದ ಬಳಿಕ ತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ಈ ಮಿಶ್ರಣ ತಳ ಬಿಡುವವರೆಗೂ ಕೈಯಾಡಿಸುತ್ತಾ ಇರಿ. ನಂತರ ಏಲಕ್ಕಿ ಪುಡಿ ಮತ್ತು ಹುರಿದಿಟ್ಟುಕೊಂಡ ಡ್ರೈಫ್ರೂಟ್ಸ್ ಸೇರಿಸಿ. ಈಗ ರುಚಿಯಾದ ಕ್ಯಾರೆಟ್ ಹಲ್ವಾ ಸವಿಯಲು ಸಿದ್ಧ.
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಸ್ಲೀಪರ್ ಕ್ಲಾಸ್ ಟಿಕೆಟ್ ದರದಲ್ಲಿ ಪ್ರಯಾಣಿಕರಿಗೆ ಎಸಿ ಬೋಗಿಯಲ್ಲಿ ಪ್ರಯಾಣ ! https://t.co/8ngoQoT04C
— Saaksha TV (@SaakshaTv) September 5, 2021
ಹೃದಯಾಘಾತದ ಕೆಲವು ನಿಮಿಷ ಅಥವಾ ಗಂಟೆಗಳ ಮೊದಲು ಕಾಣಿಸಿಕೊಳ್ಳುವ ಲಕ್ಷಣಗಳು https://t.co/56APpIHBDB
— Saaksha TV (@SaakshaTv) September 5, 2021
ಗೋಧಿ ಹಲ್ವಾ https://t.co/hU2PKXLB25
— Saaksha TV (@SaakshaTv) September 3, 2021
ಅನಾನಸ್ ಕೇಸರಿ ಬಾತ್ https://t.co/706gMaM8Mb
— Saaksha TV (@SaakshaTv) September 5, 2021
#Saakshatv #cookingrecipe #carrothalva