ತಂಪಾದ ಆರೋಗ್ಯಕರ ರಾಗಿ ಅಂಬಲಿ
ಬೇಕಾಗುವ ಪದಾರ್ಥಗಳು
ರಾಗಿ ಹಿಟ್ಟು – 3 ಚಮಚ
ಸಣ್ಣಗೆ ಹೆಚ್ಚಿದ ಈರುಳ್ಳಿ – 1
ಜೀರಿಗೆ ಪುಡಿ – 1/4 ಚಮಚ
ನೀರು – 2 ಕಪ್
ಮೊಸರು/ ಮಜ್ಜಿಗೆ – 1ಕಪ್
ರುಚಿಗೆ ತಕ್ಕಷ್ಟು ಉಪ್ಪು
ಕೊತ್ತಂಬರಿ ಸೊಪ್ಪು – ಸ್ವಲ್ಪ
ಮಾಡುವ ವಿಧಾನ
ಮೊದಲಿಗೆ ಸ್ವಲ್ಪ ನೀರಿನಲ್ಲಿ ರಾಗಿ ಹಿಟ್ಟನ್ನು ಗಂಟಿಲ್ಲದಂತೆ ಕಲಸಿ. ಬಳಿಕ ಒಂದು ಪಾತ್ರೆಯಲ್ಲಿ ಎರಡು ಲೋಟ ನೀರನ್ನು ಬಿಸಿ ಮಾಡಿ, ಅದು ಕುದಿಯಲು ಪ್ರಾರಂಭಿಸಿದಾಗ ಕಲಸಿಟ್ಟ ರಾಗಿಯ ಹಿಟ್ಟನ್ನು ಸೇರಿಸಿ. ನಿಧಾನವಾಗಿ ಕೈಯಾಡಿಸುತ್ತಾ 2-3 ನಿಮಿಷ ಕುದಿಸಿ. ಬಳಿಕ ಕೆಳಗಿಳಿಸಿ, ತಣ್ಣಗಾಗಲು ಬಿಡಿ.
ತಣ್ಣಗಾದ ಬಳಿಕ ಅದಕ್ಕೆ ಮೊಸರು/ಮಜ್ಜಿಗೆ, ಈರುಳ್ಳಿ, ಕೊತ್ತಂಬರಿ ಸೊಪ್ಪು, ಜೀರಿಗೆ ಪುಡಿ, ಉಪ್ಪು ಸೇರಿಸಿದರೆ ಆರೋಗ್ಯಕರ ರಾಗಿ ಅಂಬಲಿ ಸಿದ್ದ
ಕಬ್ಬಿನ ರಸವನ್ನು ಮನೆಮದ್ದಾಗಿ ಯಾವ ಕಾಯಿಲೆಗಳಿಗೆ ಬಳಸಬಹುದು ? ಮಾಹಿತಿ ಇಲ್ಲಿದೆhttps://t.co/lt5t3XcfTE
— Saaksha TV (@SaakshaTv) April 1, 2021
ತೊಗರಿ ಬೇಳೆ ಹಾಕದೆ ಸ್ಪೆಷಲ್ ಟೊಮೆಟೊ ಸಾರುhttps://t.co/AKSBlkXvfK
— Saaksha TV (@SaakshaTv) April 1, 2021
ತುಳುನಾಡಿನಲ್ಲಿ ಕೊರಗಜ್ಜನ ಶಕ್ತಿ ಮತ್ತೊಮ್ಮೆ ಅನಾವರಣ – ಕ್ಷೇತ್ರವನ್ನು ಅಪವಿತ್ರಗೊಳಿಸಿದ ಆರೋಪಿಗಳಿಗೆ ಕೊರಗಜ್ಜನಿಂದ ಶಿಕ್ಷೆ https://t.co/QMJpOuFdYv
— Saaksha TV (@SaakshaTv) April 2, 2021
ಸುಂದರ ಪತ್ನಿ ಇರುವ ಗುಡ್ ಫಾರ್ ನಥಿಂಗ್ ವ್ಯಕ್ತಿ ಎಂಬ ಟ್ರೋಲ್ ಗೆ ಅಭಿಷೇಕ್ ಬಚ್ಚನ್ ನಿಂದ ಕ್ಲಾಸಿ ರಿಪ್ಲೈ !https://t.co/6yBuKUp0vO
— Saaksha TV (@SaakshaTv) April 1, 2021
#Saakshatv #cookingrecipe #raagiambali