ಹಸಿ ಬೆಳ್ಳುಳ್ಳಿ ಅಥವಾ ಹೆಚ್ಚು ಬೆಳ್ಳುಳ್ಳಿ ಸೇವಿಸುವುದರ ದುಷ್ಪರಿಣಾಮಗಳು
ಭಾರತೀಯ ಅಡುಗೆಮನೆಯಲ್ಲಿ ಬೆಳ್ಳುಳ್ಳಿ ಒಂದು ಪ್ರಮುಖ ಭಾಗವಾಗಿದೆ. ಬೆಳ್ಳುಳ್ಳಿಯನ್ನು ಆಹಾರದ ರುಚಿಯನ್ನು ಹೆಚ್ಚಿಸಲು ಬಳಸಲಾಗುತ್ತದೆ.
ಅಲ್ಲದೆ ಇದನ್ನು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಔಷಧಿಯಾಗಿ ಸಹ ಬಳಸಲಾಗುತ್ತದೆ. ಆದರೆ ಬೆಳ್ಳುಳ್ಳಿ ಕೂಡ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಹಸಿ ಬೆಳ್ಳುಳ್ಳಿ ಅಥವಾ ಹೆಚ್ಚು ಬೆಳ್ಳುಳ್ಳಿ ಸೇವಿಸುವುದರಿಂದ ದೇಹದ ಮೇಲೆ ಮಾರಕ ಅಡ್ಡಪರಿಣಾಮಗಳು ಉಂಟಾಗಬಹುದು.
ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಎದೆಯುರಿ, ವಾಕರಿಕೆ ಮತ್ತು ವಾಂತಿಗೆ ಕಾರಣವಾಗಬಹುದು. ಬೆಳ್ಳುಳ್ಳಿಯು GERD (ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಕಾಯಿಲೆ) ಗೆ ಕಾರಣವಾಗುವ ಕೆಲವು ಸಂಯುಕ್ತಗಳನ್ನು ಹೊಂದಿರುತ್ತದೆ. ಅಲ್ಲದೆ ಇದನ್ನು ಅತಿಯಾಗಿ ಸೇವಿಸಿದರೆ ಅದು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.
ಲಿವರ್ ನಮ್ಮ ದೇಹದ ಒಂದು ಪ್ರಮುಖ ಭಾಗವಾಗಿದೆ. ಇದು ಕೊಬ್ಬಿನ ಚಯಾಪಚಯ, ಪ್ರೋಟೀನ್ ಚಯಾಪಚಯ ಮತ್ತು ನಮ್ಮ ದೇಹದಿಂದ ಅಮೋನಿಯಾವನ್ನು ತೆಗೆಯುವಂತಹ ವಿವಿಧ ಕಾರ್ಯಗಳನ್ನು ನಿರ್ವಹಿಸುತ್ತದೆ. ಅನೇಕ ಅಧ್ಯಯನಗಳ ಪ್ರಕಾರ, ಬೆಳ್ಳುಳ್ಳಿಯನ್ನು ಅತಿಯಾಗಿ ಸೇವಿಸುವುದರಿಂದ ನಮ್ಮ ಲಿವರ್ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವಿಸುವುದರಿಂದ ಅತಿಸಾರ ಉಂಟಾಗಬಹುದು. ಬೆಳ್ಳುಳ್ಳಿಯು ಸಲ್ಫರ್ ನಂತಹ ಸಂಯುಕ್ತಗಳನ್ನು ಹೊಂದಿದ್ದು ಅದು ಅತಿಯಾಗಿ ಸೇವಿಸಿದರೆ ಅತಿಸಾರಕ್ಕೆ ಕಾರಣವಾಗಬಹುದು.
ಕಡಿಮೆ ರಕ್ತದೊತ್ತಡದ ಸಮಸ್ಯೆ ಇದ್ದರೆ ನೀವು ಬೆಳ್ಳುಳ್ಳಿ ಸೇವಿಸುವುದನ್ನು ತಪ್ಪಿಸಬೇಕು ಅಥವಾ ಬಹಳ ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು.
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಬಾದಾಮಿ – ಗೇರು ಬೀಜ ಚಿಕ್ಕಿ https://t.co/3Tva4Ca5mI
— Saaksha TV (@SaakshaTv) August 30, 2021
ಬೆಳ್ಳುಳ್ಳಿ ಚಹಾ ಸೇವನೆಯಿಂದ ದೇಹಕ್ಕೆ ಸಿಗುವ ಲಾಭಗಳು ಮತ್ತು ಅದನ್ನು ತಯಾರಿಸುವ ವಿಧಾನ https://t.co/y05OTOWx8b
— Saaksha TV (@SaakshaTv) August 30, 2021
ಬಿಸ್ಕೂಟ್ ರೊಟ್ಟಿ https://t.co/ru9jMZv54s
— Saaksha TV (@SaakshaTv) August 31, 2021
ಜೇನುತುಪ್ಪವನ್ನು ಹಾಲಿನೊಂದಿಗೆ ಬೆರೆಸಿ ಸೇವಿಸುವುದರ ಆರೋಗ್ಯ ಪ್ರಯೋಜನಗಳು https://t.co/PkUlXW4kjV
— Saaksha TV (@SaakshaTv) August 31, 2021
#Saakshatv #garlic