ಅಜ್ವೈನ್ ನ ಆರೋಗ್ಯ ಪ್ರಯೋಜನಗಳು
ಅಜ್ವೈನ್ ಅನ್ನು ಭಾರತದಲ್ಲಿ ವಿಶೇಷ ಮಸಾಲಾ ಪದಾರ್ಥವಾಗಿ ಬಳಸಲಾಗುತ್ತದೆ. ಆದರೆ ಅಜ್ವೈನ್ ಔಷಧೀಯ ಸಸ್ಯವಾಗಿದೆ. ವಿಶೇಷವಾಗಿ ಜೀರ್ಣಕಾರಿ ಅಥವಾ ಹೊಟ್ಟೆಯ ತೊಂದರೆಗಳನ್ನು ನಿವಾರಿಸಲು ಅಜ್ವೈನ್ ಹೆಸರುವಾಸಿಯಾಗಿದೆ. ಅಜ್ವೈನ್ ಅನ್ನು ಅನೇಕ ಸಾಮಾನ್ಯ ಮತ್ತು ಗಂಭೀರ ಕಾಯಿಲೆಗಳ ಚಿಕಿತ್ಸೆಗಾಗಿ ಬಳಸಲಾಗುತ್ತದೆ. ಅಜ್ವೈನ್ ನ ಪ್ರಯೋಜನಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.
ಅಜ್ವೈನ್ ಹೊಟ್ಟೆ ನೋವು, ಸೆಳೆತ, ಗ್ಯಾಸ್, ಅಜೀರ್ಣ, ವಾಂತಿ, ಅತಿಸಾರ, ಉಸಿರಾಟದ ತೊಂದರೆ, ವೀರ್ಯದ ಕೊರತೆ ಇತ್ಯಾದಿ ತೊಂದರೆಗಳನ್ನು ನಿವಾರಿಸುತ್ತದೆ. ಇದು ಹೃದಯಕ್ಕೆ ಪ್ರಯೋಜನಕಾರಿಯಾಗಿದ್ದು, ಕಫ ನಿವಾರಿಸಲು, ಉತ್ತಮ ಔಷಧವಾಗಿದೆ.
ಗರ್ಭಾಶಯ, ಜ್ವರ, ವಾಂತಿ, ಹೊಟ್ಟೆಯ ಕಾಯಿಲೆಗಳು, ಕೀಲು ನೋವು ಇತ್ಯಾದಿ ಸಮಸ್ಯೆಗಳನ್ನು ನಿವಾರಿಸಲು ಇದು ಸಾಮಾನ್ಯ ಮನೆಮದ್ದು. ಇದು ಅತಿಸಾರ, ಮಲಬದ್ಧತೆ, ಮೂತ್ರಪಿಂಡದ ಸಮಸ್ಯೆ, ಶೀತ, ತುರಿಕೆ, ಲೈಂಗಿಕ ದೌರ್ಬಲ್ಯ, ಮುಟ್ಟಿನ ತೊಂದರೆ ಇತ್ಯಾದಿಗಳನ್ನು ಗುಣಪಡಿಸುತ್ತದೆ.
ಅಜ್ವೈನ್ ಅನ್ನು ಅದರ ವಿಶೇಷ ರುಚಿ ಮತ್ತು ಗುಣಲಕ್ಷಣಗಳಿಂದಾಗಿ ವಿವಿಧ ಔಷಧಿಗಳಾಗಿ ಮತ್ತು ಪೂರಕ ಔಷಧಿಗಳಾಗಿ ಬಳಸಲಾಗುತ್ತದೆ. ಅಜ್ವೈನ್ ಉಷ್ಣ ಗುಣವನ್ನು ಹೊಂದಿದ್ದು, ಇದರಿಂದಾಗಿ ಅದರ ರುಚಿ ತೀಕ್ಷ್ಣವಾಗಿರುತ್ತದೆ.
ಎಚ್ಚರಿಕೆ – ದೇಶಾದ್ಯಂತ ಕೊರೋನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ನಮ್ಮ ಮತ್ತು ನಮ್ಮ ಕುಟುಂಬದ ಆರೋಗ್ಯ ನಮ್ಮ ಕೈಯಲ್ಲಿದೆ. ಇದು ಸಾಕ್ಷಾಟಿವಿ ಕಳಕಳಿ.
ವಿಟಮಿನ್ ಬಿ 7 ಕೊರತೆಯಿಂದ ಯಾವ ಸಮಸ್ಯೆಗಳು ಸಂಭವಿಸಬಹುದು ?#Saakshatv #healthtips #VitaminB7 https://t.co/bnaep0xwMN
— Saaksha TV (@SaakshaTv) May 27, 2021
ಮದ್ದೂರು ವಡೆ#Saakshatv #cookingrecipe #madduruvade https://t.co/d6x7BrV5CS
— Saaksha TV (@SaakshaTv) May 27, 2021
ಉಡುಪಿ – ಕೋರ್ಟ್ ಮೆಟ್ಟಿಲೇರಿದ ಅಪ್ರಾಪ್ತ ಬಾಲಕನಿಗೆ ಸನ್ಯಾಸ ದೀಕ್ಷೆ#Udupi #Shiroormutt https://t.co/0e2wwvp7Wk
— Saaksha TV (@SaakshaTv) May 29, 2021
ಕ್ಯಾಬೇಜ್ ಮಂಚೂರಿ#Saakshatv #cookingrecipe #cabbage #Manchurian https://t.co/RmtQQM4qR2
— Saaksha TV (@SaakshaTv) May 26, 2021
ಮನೆಯಲ್ಲೇ ಸಿಗುವ ಪದಾರ್ಥಗಳಿಂದ ಕೊರೋನಾ ವೈರಸ್ ಅಪಾಯವನ್ನು ಕಡಿಮೆ ಮಾಡುವುದು ಹೇಗೆ ?#coronavirus https://t.co/sxFtepvaLF
— Saaksha TV (@SaakshaTv) May 26, 2021
#Saakshatv #healthtips #Ajwain #HealthBenefits