ಮಾವಿನ ಎಲೆಗಳ ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳು
ಮಾವಿನ ಎಲೆಗಳು ಸಂಬಂಧಿತ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತವೆ. ಮಾವಿನ ಎಲೆಗಳಲ್ಲಿ ವಿಟಮಿನ್ ಸಿ, ವಿಟಮಿನ್ ಎ ಮತ್ತು ವಿಟಮಿನ್ ಬಿ ಯಂತಹ ವಿಟಮಿನ್ ಗಳಿವೆ. ಇದರಲ್ಲಿ ಸ್ಟೀರಾಯ್ಡ್ಗಳು, ಆಲ್ಕಲಾಯ್ಡ್ಗಳು, ರಿಬೋಫ್ಲಾವಿನ್, ಥಯಾಮಿನ್, ಫೀನಾಲಿಕ್, ಬೀಟಾ-ಕ್ಯಾರೋಟಿನ್, ಫ್ಲೇವೊನೈಡ್ಗಳು ಮುಂತಾದ ಸಂಯುಕ್ತಗಳಿವೆ. ಮಾವಿನ ಎಲೆಗಳು ಟೆರ್ಪೆನಾಯ್ಡ್ಗಳು ಮತ್ತು ಪಾಲಿಫಿನಾಲ್ಗಳಿಂದ ಸಮೃದ್ಧವಾಗಿವೆ. ಅವು ದೇಹದಲ್ಲಿ ಉರಿಯೂತದ ವಿರುದ್ಧ ಹೋರಾಡುವ ಜೊತೆಗೆ ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತವೆ.
ಮಾವಿನ ಎಲೆಗಳ ಆರೋಗ್ಯ ಪ್ರಯೋಜನಗಳು
ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಮಾವಿನ ಎಲೆಗಳ ಸೇವನೆ ಪರಿಣಾಮಕಾರಿಯಾಗಿದೆ. ಇದಕ್ಕಾಗಿ, ನೀವು ಮಾವಿನ ಎಲೆಗಳನ್ನು ರಾತ್ರಿಯಿಡೀ ಬಿಸಿ ನೀರಿನಲ್ಲಿ ಹಾಕಿ ಮುಚ್ಚಿಡಬೇಕು. ಬೆಳಿಗ್ಗೆ ಈ ನೀರನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.
ಚರ್ಮದ ಗಾಯಗಳನ್ನು ಗುಣಪಡಿಸಲು ಮಾವಿನ ಎಲೆಗಳನ್ನು ಬಳಸಬಹುದು. ಮಾವಿನ ಎಲೆಗಳ ಪೇಸ್ಟ್ ಅನ್ನು ಗಾಯವನ್ನು ಗುಣಪಡಿಸಲು ಅನ್ವಯಿಸಬಹುದು.
ಕೆಮ್ಮನ್ನು ನಿವಾರಿಸಲು ಸಹ ಮಾವಿನ ಎಲೆಗಳನ್ನು ಬಳಸಬಹುದು. ಇದಕ್ಕಾಗಿ, ನೀವು ಮಾವಿನ ಎಲೆಗಳ ಕಷಾಯವನ್ನು ಮಾಡಬಹುದು. ಇದಕ್ಕೆ ಸ್ವಲ್ಪ ಜೇನುತುಪ್ಪವನ್ನು ಸೇರಿಸುವ ಮೂಲಕ ನೀವು ಅದನ್ನು ಸೇವಿಸಬಹುದು.
ರಕ್ತದೊತ್ತಡವನ್ನು ನಿಯಂತ್ರಿಸಲು ಮಾವಿನ ಎಲೆಗಳನ್ನು ಸೇವಿಸಬಹುದು. ಮಾವಿನ ಎಲೆಗಳನ್ನು ಕುದಿಸಿ ಕಷಾಯ ಮಾಡಿ ಅದನ್ನು ಸೇವಿಸಬಹುದು.
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಮೂತ್ರಪಿಂಡವನ್ನು ಸ್ವಚ್ಛಗೊಳಿಸಲು ನೆರವಾಗುವ ಕೆಲವು ಪಾನೀಯಗಳು#Saakshatv #healthtips https://t.co/EbD8VICuc5
— Saaksha TV (@SaakshaTv) June 17, 2021
ಸಬ್ಬಕ್ಕಿ – ಹೆಸರುಬೇಳೆ ದೋಸೆ#Saakshatv #cookingrecipe https://t.co/Cx5YU1j8WT
— Saaksha TV (@SaakshaTv) June 17, 2021
ಕರಿಬೇವಿನ ರಸದ ಆರೋಗ್ಯ ಪ್ರಯೋಜನಗಳು ಮತ್ತು ತಯಾರಿಸುವ ವಿಧಾನ#Saakshatv #healthtips #Curryleaf https://t.co/QQY8qIJF5K
— Saaksha TV (@SaakshaTv) June 18, 2021
ಧೂರ್ತ ರಾಜಕೀಯದ ಹುಸಿ ವಿಕಾಸವಾದದ ಭೂತಕುಣಿತಕ್ಕೆ ಬಲಿಯಾಗುವ ಶೇರ್ನಿ; ಒಂದು ಮನಕಲಕುವ ಕಥಾನಕವುಳ್ಳ ಸಿನಿಮಾ:#Marjalamanthana #Sherni movie https://t.co/Qf33MG7bF0
— Saaksha TV (@SaakshaTv) June 19, 2021
#Saakshatv #healthtips #mangoleaves