ಡೆಂಗ್ಯೂನಿಂದ ತ್ವರಿತ ಚೇತರಿಕೆ ಹೊಂದಲು ಈ ಆಹಾರ ಕ್ರಮಗಳನ್ನು ಅನುಸರಿಸಿ
ತೂಕ ಇಳಿಕೆಯಿಂದ ಹಿಡಿದು ರೋಗ ನಿರೋಧಕ ಶಕ್ತಿಯು ದುರ್ಬಲಗೊಳ್ಳುವವರೆಗೆ ಡೆಂಗ್ಯೂ, ಅಡ್ಡಪರಿಣಾಮಗಳನ್ನು ಹೊಂದಿದೆ. ಪ್ರತಿ ವರ್ಷ ದೇಶದಲ್ಲಿ ಹೆಚ್ಚಿನ ಜನಸಂಖ್ಯೆಯ ಮೇಲೆ ಡೆಂಗ್ಯೂ ಪರಿಣಾಮ ಬೀರುತ್ತದೆ. ಒಂದೇ ಸ್ಥಳದಲ್ಲಿ ನೀರು ಸಂಗ್ರಹವಾಗುವುದು ಇದಕ್ಕೆ ಕಾರಣ. ಇದು ಡೆಂಗ್ಯೂ ಹರಡುವ ಸೊಳ್ಳೆಗಳ ಸಂತಾನೋತ್ಪತ್ತಿಗೆ ನೆರವಾಗುತ್ತದೆ.
ಡೆಂಗ್ಯೂ ಪತ್ತೆಯಾದರೆ ನಿಮ್ಮ ಆಹಾರಕ್ರಮದ ಬಗ್ಗೆ ಗಮನ ಕೊಡುವುದು ಮುಖ್ಯವಾಗಿ. ಇದು ತ್ವರಿತ ಚೇತರಿಕೆಗೆ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಔಷಧಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ಇದಕ್ಕಾಗಿ, ಯಾವ ರೀತಿಯ ಆಹಾರವನ್ನು ಅನುಸರಿಸಬೇಕು ಎಂಬ ಮಾಹಿತಿ ಇಲ್ಲಿದೆ.
ಮುಂಜಾನೆ
ತಜ್ಞರ ಪ್ರಕಾರ, ರೋಗಿಯು ದಿನವನ್ನು ಖಾಲಿ ಹೊಟ್ಟೆಯಲ್ಲಿ ತಾಜಾ ಅಲೋವೆರಾ ಜ್ಯೂಸ್, ಅಮೃತಬಳ್ಳಿ ಜ್ಯೂಸ್ ಅಥವಾ ಆಮ್ಲಾ ಜ್ಯೂಸ್ ಕುಡಿಯುವ ಮೂಲಕ ಪ್ರಾರಂಭಿಸಬೇಕು.
ಬೆಳಗಿನ ಉಪಾಹಾರ
ಬೆಳಗಿನ ಉಪಾಹಾರಕ್ಕಾಗಿ, ವೆಜ್ ಉಪ್ಮಾ, ಓಟ್ ಮೀಲ್, ವರ್ಮಿಸೆಲ್ಲಿ ಪೋಹಾ ಅಥವಾ ಸ್ಯಾಂಡ್‌ವಿಚ್ ಮತ್ತು 1 ಮೊಟ್ಟೆಯ ಬಿಳಿ ಇತ್ಯಾದಿ ಜೀರ್ಣಿಸಿಕೊಳ್ಳಲು ಸುಲಭವಾದ ಆಹಾರಗಳನ್ನು ಸೇವಿಸಬೇಕು.
ಊಟದ ಮೊದಲು
ಊಟಕ್ಕೆ ಒಂದು ಗಂಟೆ ಅಥವಾ ಎರಡು ಗಂಟೆ ಮೊದಲು, ರೋಗಿಗೆ ಹಸಿವು ಅಥವಾ ಬಾಯಾರಿಕೆ ಅನಿಸಿದರೆ, ಅವರು ಎಳನೀರು ಮತ್ತು ಕಾಲು ಕಪ್ ತಾಜಾ ಪಪ್ಪಾಯಿ ಎಲೆಯ ರಸ ಅಥವಾ ಅಮೃತಬಳ್ಳಿಯ ಜ್ಯೂಸ್ ಅನ್ನು ಕುಡಿಯಬೇಕು.
ಊಟ
ಊಟಕ್ಕೆ ಮನೆಯಲ್ಲಿ ತಯಾರಿಸಿದ ಆಹಾರವು ಉತ್ತಮವಾಗಿದೆ. ಇದರಲ್ಲಿ ಅನ್ನ, ಖಿಚಡಿ, ಬೇಳೆಗಳು, ಬೇಯಿಸಿದ ತರಕಾರಿಗಳು ಮತ್ತು ಮೊಸರು ಇತ್ಯಾದಿಗಳನ್ನು ಸೇವಿಸಬಹುದು.
ಸಂಜೆ
ಸಂಜೆ ಏನನ್ನೂ ತಿನ್ನದಿದ್ದರೆ ಉತ್ತಮ. ಬೇಕಿದ್ದರೆ ಗ್ರೀನ್ ಟೀ, ಶುಂಠಿ ಚಹಾ ಅಥವಾ ಪಪ್ಪಾಯಿ ಎಲೆಯ ರಸವನ್ನು ಉಪ್ಪು ಇಲ್ಲದೆ ತೆಗೆದುಕೊಳ್ಳಬಹುದು.
ರಾತ್ರಿ ಊಟದ ಮೊದಲು
ಊಟಕ್ಕೆ ಒಂದು ಗಂಟೆ ಮೊದಲು ಟೊಮೆಟೊ ಅಥವಾ ತರಕಾರಿ ಸೂಪ್ ಸೇವಿಸುವುದು ಉತ್ತಮ.
ರಾತ್ರಿ ಊಟ
ಖಿಚ್ಡಿ, ಓಟ್ ಮೀಲ್, ಬೇಳೆಗಳೊಂದಿಗೆ ಬೇಯಿಸಿದ ತರಕಾರಿಗಳು ರಾತ್ರಿಯ ಅತ್ಯುತ್ತಮ ಮತ್ತು ಸುಲಭವಾಗಿ ಜೀರ್ಣವಾಗುವ ಆಹಾರವಾಗಿದೆ.
ಮಲಗುವ ಮೊದಲು
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮೇಕೆ ಹಾಲನ್ನು ಒಂದು ಚಿಟಿಕೆ ಅರಿಶಿನ ಪುಡಿಯೊಂದಿಗೆ ಸೇವಿಸಬೇಕು ಎಂದು ಸೂಚಿಸಲಾಗಿದೆ.
ಇವುಗಳನ್ನು ಸೇವಿಸಬೇಡಿ
ತ್ವರಿತವಾಗಿ ಚೇತರಿಸಿಕೊಳ್ಳಲು, ನೀವು ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಇದಕ್ಕಾಗಿ, ನೀವು ಮೇಲೆ ತಿಳಿಸಿದ ಆಹಾರವನ್ನು ಅನುಸರಿಸಬಹುದು. ಇದು ತ್ವರಿತವಾಗಿ ಚೇತರಿಸಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ಈ ಸಮಯದಲ್ಲಿ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಸೇವಿಸುವುದು , ಮಾಂಸ, ಸಂಸ್ಕರಿಸಿದ ಆಹಾರ, ಎಣ್ಣೆಯುಕ್ತ ಆಹಾರ, ಕೆಫೀನ್, ಮಸಾಲೆಯುಕ್ತ ಆಹಾರ ಮತ್ತು ಹೆಚ್ಚಿನ ಕೊಬ್ಬಿನಾಂಶವುಳ್ಳ ಆಹಾರ ಸೇವಿಸುವುದನ್ನು ತಪ್ಪಿಸಿ.
ಎಚ್ಚರಿಕೆ – ದೇಶಾದ್ಯಂತ ಕೊರೋನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ನಮ್ಮ ಮತ್ತು ನಮ್ಮ ಕುಟುಂಬದ ಆರೋಗ್ಯ ನಮ್ಮ ಕೈಯಲ್ಲಿದೆ. ಇದು ಸಾಕ್ಷಾಟಿವಿ ಕಳಕಳಿ.
ಕೋವಿಡ್-19 ನಿಂದ ಚೇತರಿಕೆ ವೇಗಗೊಳಿಸುವ ಜ್ಯೂಸ್ ಗಳು#Saakshatv #healthtipsjuices #speedup #recovery #COVID19 https://t.co/sEnFykS1PD
— Saaksha TV (@SaakshaTv) May 22, 2021
ಸರ್ಕಾರದ ಈ ಯೋಜನೆಯಡಿಯಲ್ಲಿ ಕಡಿಮೆ ಬೆಲೆಗೆ ಮನೆಯನ್ನು ಹೊಂದಿರಿ#Buyhome #cheaprate https://t.co/86mJsb1Adh
— Saaksha TV (@SaakshaTv) May 19, 2021
ದಾಸವಾಳ ಹೂವಿನ ತಿಳಿ ಸಾರು#Saakshatv #cookingrecipe #dasavala https://t.co/IZzcl188YN
— Saaksha TV (@SaakshaTv) May 21, 2021
ಬ್ಲಾಕ್ ಫಂಗಸ್ – ರೋಗಲಕ್ಷಣಗಳನ್ನು ಗುರುತಿಸುವುದು ಹೇಗೆ? ರೋಗಲಕ್ಷಣ ಹೊಂದಿರುವವರನ್ನು ನೋಡಿಕೊಳ್ಳುವುದು ಹೇಗೆ?#Blackfungus https://t.co/1NlcYeldFo
— Saaksha TV (@SaakshaTv) May 21, 2021
#Saakshatv #healthtips #dengue