ಖಾಲಿ ಹೊಟ್ಟೆಯಲ್ಲಿ ಮೆಂತ್ಯ ನೀರು ಕುಡಿಯುವುದರ ಆರೋಗ್ಯ ಪ್ರಯೋಜನಗಳು
ಮೆಂತ್ಯ ಎಲ್ಲರ ಮನೆಯ ಅಡಿಗೆ ಮನೆಯಲ್ಲಿರುವ ಅವಶ್ಯಕ ವಸ್ತುವಾಗಿದೆ. ಹೆಚ್ಚಿನ ಜನರು ಮೆಂತೆಯನ್ನು ಅಡಿಗೆಗೆ ಪರಿಮಳ ಸೇರಿಸಲು ಮಾತ್ರ ಸೇವಿಸುತ್ತಾರೆ. ಆದರೆ ಮೆಂತ್ಯ ನೀರು ಬಹಳಷ್ಟು ಪ್ರಯೋಜನಕಾರಿಯಾಗಿದೆ ಮತ್ತು ಇದು ನಿಮ್ಮನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೆಂತ್ಯ ನೀರು ಕುಡಿಯಲು ಪ್ರಾರಂಭಿಸಿದರೆ, ಮುಂದಿನ ಕೆಲವು ದಿನಗಳಲ್ಲಿ ಹೊಟ್ಟೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ. ಮೆಂತ್ಯ ನೀರು ಕುಡಿಯುವುದರಿಂದ ಆಗುವ ಲಾಭಗಳು ಮತ್ತು ಅದನ್ನು ನೀವು ಹೇಗೆ ಬಳಸಬಹುದು ಎಂದು ತಿಳಿಯೋಣ.
ರಾತ್ರಿಯಲ್ಲಿ ಒಂದರಿಂದ ಒಂದೂವರೆ ಚಮಚ ಮೆಂತ್ಯ ಬೀಜವನ್ನು ಒಂದು ಲೋಟ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಎದ್ದ ನಂತರ, ಈ ನೀರನ್ನು ಚೆನ್ನಾಗಿ ಫಿಲ್ಟರ್ ಮಾಡಿ ನಂತರ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.
ಮೆಂತ್ಯದಲ್ಲಿ ಇರುವ ಗ್ಯಾಲಕ್ಟೋಮನ್ನನ್ ಎಂಬ ಫೈಬರ್ ರಕ್ತದಲ್ಲಿನ ಸಕ್ಕರೆ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ. ಇದು ದೇಹದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ಮಧುಮೇಹವನ್ನು ತಡೆಯುತ್ತದೆ.
ಮೆಂತ್ಯ ನೀರು ಆಮ್ಲೀಯತೆ ಅಥವಾ ಗ್ಯಾಸ್ ಸಮಸ್ಯೆಗಳನ್ನು ಹೊಂದಿರುವವರಿಗೆ ಪರಿಣಾಮಕಾರಿಯಾಗಿದೆ. ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಬೆಳಿಗ್ಗೆ ಒಂದು ಲೋಟ ಮೆಂತ್ಯ ನೀರು ಕುಡಿಯುವುದರಿಂದ ಹೊಟ್ಟೆಯ ಕಿರಿಕಿರಿ ಕಡಿಮೆಯಾಗುತ್ತದೆ ಮತ್ತು ಅಜೀರ್ಣ ಅಥವಾ ಆಮ್ಲೀಯತೆಯಿಂದ ತ್ವರಿತ ಪರಿಹಾರ ನೀಡುತ್ತದೆ.
ಮೆಂತ್ಯ ನೀರಿನ ಪ್ರಮುಖ ಪ್ರಯೋಜನವೆಂದರೆ ಅದರ ನಿಯಮಿತ ಸೇವನೆಯು ಮೂತ್ರಪಿಂಡದ ಕಲ್ಲುಗಳಿಗೆ ಪರಿಹಾರವನ್ನು ನೀಡುತ್ತದೆ. ಮೆಂತ್ಯಯಲ್ಲಿರುವ ಅಂಶಗಳು ಕಲ್ಲುಗಳನ್ನು ಕರಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಕಲ್ಲುಗಳನ್ನು ತೆಗೆಯಲು ಇದು ಮನೆಮದ್ದು ಆಗಿದ್ದರೂ, ವೈದ್ಯರ ಸಲಹೆ ತೆಗೆದುಕೊಳ್ಳುವುದು ಅತ್ಯಗತ್ಯ.
ಮೆಂತ್ಯ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಈ ಕಾರಣಕ್ಕಾಗಿ, ಶೀತ ಮತ್ತು ವೈರಸ್ಗಳಿಂದ ರಕ್ಷಿಸಲು ಮೆಂತ್ಯ ನೀರು ತುಂಬಾ ಸಹಾಯ ಮಾಡುತ್ತದೆ. ಮೆಂತ್ಯ ನೀರು ದೇಹದಲ್ಲಿ ಇರುವ ಹಾನಿಕಾರಕ ಬ್ಯಾಕ್ಟೀರಿಯಾವನ್ನು ನಿವಾರಿಸುತ್ತದೆ ಮತ್ತು ಸಾಂಕ್ರಾಮಿಕ ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತದೆ.
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ರಕ್ತ ಹೆಪ್ಪುಗಟ್ಟುವಿಕೆ/ ಥ್ರಂಬೋಸಿಸ್ ಎಂದರೇನು? ಕೋವಿಡ್ ರೋಗಿಗಳಿಗೆ ಇದು ಹೇಗೆ ಅಪಾಯಕಾರಿ?#Saakshatvhealthtips #bloodclotting #thrombosis https://t.co/lGBBNqECko
— Saaksha TV (@SaakshaTv) June 21, 2021
ಮಾವಿನ ಎಲೆಗಳ ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳು#Saakshatv #healthtipsbenefits #mangoleaves https://t.co/aDEOrNCvat
— Saaksha TV (@SaakshaTv) June 22, 2021
ಕುಂಬಳಕಾಯಿ ಸಿಪ್ಪೆಯ ಚಟ್ನಿ#Saakshatv #cookingrecipe #chutney https://t.co/WNYoO3giym
— Saaksha TV (@SaakshaTv) June 21, 2021
ಲಸಿಕೆ ಪಡೆಯುವ ಮೊದಲು/ನಂತರ ಗಮನದಲ್ಲಿರಿಸಿಕೊಳ್ಳಬೇಕಾದ ವಿಷಯಗಳು#vaccinated https://t.co/cexv6VVMQa
— Saaksha TV (@SaakshaTv) June 22, 2021
#Saakshatv #healthtips #fenugreekwater #emptystomach