ಕಫದ ಸಮಸ್ಯೆಗೆ ಪರಿಣಾಮಕಾರಿ ಮನೆಮದ್ದು
ಶೀತ ಕೆಮ್ಮಿನಿಂದ ಮಾತ್ರವಲ್ಲದೆ ಕೆಲವರಿಗೆ ಡಸ್ಟ್ ಅಲರ್ಜಿ ಯಿಂದ ಕೂಡ ಕಫದ ಸಮಸ್ಯೆ ಉಂಟಾಗುವುದು. ಅನೇಕರು ಕಫದ ಸಮಸ್ಯೆಗೆ ಸ್ಟೀಮ್ ತೆಗೆದುಕೊಳ್ಳುವುದು ಅಥವಾ ಇನ್ನೇನಾದರೂ ಪರಿಹಾರವನ್ನು ಮಾಡಿಕೊಳ್ಳುತ್ತಾರೆ. ಇಂದು ನಾವು ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರು ಬಳಸುತ್ತಿದ್ದ ಒಂದು ಮನೆ ಮದ್ದಿನ ಬಗ್ಗೆ ಮಾಹಿತಿ ನೀಡುತ್ತೇವೆ. ಈ ಮದ್ದನ್ನು 5ವರ್ಷ ಮೇಲ್ಪಟ್ಟವರು ಮಾತ್ರ ಉಪಯೋಗಿಸಬೇಕು.
ಇದಕ್ಕೆ ಬೇಕಾಗಿರುವುದು ಬೆಲ್ಲ, ಅರಿಶಿಣದ ಪುಡಿ ಮತ್ತು ಕಲ್ಲುಪ್ಪು.
ಮೊದಲಿಗೆ ಆದಷ್ಟು ಶುದ್ಧವಾದ ಬೆಲ್ಲವನ್ನು ತೆಗೆದುಕೊಂಡು, ಒಂದು ಪಾತ್ರೆಗೆ ಹಾಕಿ ಕರಗಿಸಿಕೊಳ್ಳಿ. ನಂತರ ಇದನ್ನು ಸೋಸಿ. ಬಳಿಕ ಇದಕ್ಕೆ ಕಾಲು ಚಮಚ ಅರಿಶಿಣ ಸೇರಿಸಿ. ನಂತರ ಕಾಲು ಚಮಚ ಉಪ್ಪನ್ನು ಸೇರಿಸಿ ಚೆನ್ನಾಗಿ ಕಲಸಿ. ಇದನ್ನು ದಿನಕ್ಕೆ 3 ಬಾರಿ ಸ್ವಲ್ಪ ಪ್ರಮಾಣದಲ್ಲಿ ಚಪ್ಪರಿಸಿ ಸೇವಿಸುವುದರಿಂದ ಕಫದ ಸಮಸ್ಯೆ ಬೇಗ ನಿವಾರಣೆ ಆಗುತ್ತದೆ.
ಬೆಲ್ಲ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿದರೆ, ಅರಿಶಿಣ ಆಂಟಿ ಇನ್ ಪ್ಲಮೇಟರಿ ಮತ್ತು ಆಂಟಿ ಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿದೆ.ಉಪ್ಪು ಕೂಡ ಆಂಟಿ ಬಯೋಟಿಕ್ ಅಂಶವನ್ನು ಹೊಂದಿದೆ. ಇದು ಕಫದ ಸಮಸ್ಯೆ, ಗಂಟಲು ಕೆರೆತದಂತಹ ಸಮಸ್ಯೆಯನ್ನು ಕೂಡ ಪರಿಹಾರ ಮಾಡುತ್ತದೆ.
ಸೂಚನೆ : ಇಲ್ಲಿರುವ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ನೀಡಲಾಗಿದೆ.
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
https://twitter.com/SaakshaTv/status/1413657361852534784?s=19
https://twitter.com/SaakshaTv/status/1413715261249654786?s=19
https://twitter.com/SaakshaTv/status/1413687593640808452?s=19
https://twitter.com/SaakshaTv/status/1413352894741504005?s=19
#Saakshatv #healthtips #homeremedies