ನಟಿ ಮತ್ತು ಬಿಗ್ ಬಾಸ್ ಸ್ಪರ್ಧಿ ಸಾನ್ಯಾ ಅಯ್ಯರ್ ತಮ್ಮ ತಾಯಿ ಜೊತೆ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಭೇಟಿ ನೀಡಿದ್ದು, ಆಧ್ಯಾತ್ಮಿಕ ಅನುಭವ ಪಡೆದುಕೊಂಡಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಶಾಹಿ ಸ್ನಾನ ಮಾಡಿದ್ದು, ಬಳಿಕ ನಾಗಾ ಸಾಧುಗಳಿಂದ ಆಶೀರ್ವಾದ ಪಡೆದು, ತಮ್ಮ ಆಧ್ಯಾತ್ಮಿಕ ಪ್ರಯಾಣದ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಹಂಚಿದ ಸಂದೇಶದಲ್ಲಿ, ಸಾನ್ಯಾ ಈ ಶಾಹಿ ಸ್ನಾನವನ್ನು ತಮ್ಮ ಆಂತರಿಕ ಜಗತ್ತಿಗೆ ದೊಡ್ಡ ಬದಲಾವಣೆ ಮಾಡಿದ ಕ್ಷಣವೆಂದು ವಿವರಿಸಿದ್ದಾರೆ. ನಾನು ಈ ಪುನೀತ ಸ್ನಾನವನ್ನು ಪುನರ್ಜನ್ಮವೆಂದು ಭಾವಿಸುತ್ತೇನೆ. ನನ್ನ ಪೂರ್ವಜರ ಆಶೀರ್ವಾದದಿಂದ ಮುಂದಿನ ಹೊಸ ಬದುಕಿನತ್ತ ಹೆಜ್ಜೆಯಿಟ್ಟಿದ್ದೇನೆ, ಎಂದು ಬರೆದಿದ್ದಾರೆ.
ಸಾನ್ಯಾ, ಹೆಚ್ಚಾಗಿ ತಮ್ಮ ಕುಟುಂಬದ ಜೊತೆ ಪ್ರವಾಸ ಮಾಡಲು ಇಷ್ಟ ಪಡುತ್ತಾರೆ, ಅದರಲ್ಲೂ ಆಧ್ಯಾತ್ಮಿಕ ಯಾತ್ರೆಗಳು ಹೆಚ್ಚಿನ ಪ್ರಮಾಣದಲ್ಲಿ ಅವರ ಜೀವನದಲ್ಲಿ ಮಹತ್ವ ಪಡೆದಿವೆ. ಈ ಬಾರಿ, ಕುಂಭಮೇಳದ ಅನುಭವವು ಅವರಿಗೆ ಆಧ್ಯಾತ್ಮಿಕವಾಗಿ ದೊಡ್ಡ ಪ್ರೇರಣೆಯಾಗಿದ್ದು, ಲೋಕ ಸಮಸ್ತ ಸುಖಿನೋ ಭವತು ಎಂದು ಎಲ್ಲರಿಗೂ ಶುಭಾಶಯ ಕೋರಿದ್ದಾರೆ.