ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ 50ನೇ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಐತಿಹಾಸಿಕ ಸಿಡ್ನಿ ಕ್ರಿಕೆಟ್ ಮೈದಾನದ ಪ್ರವೇಶ ದ್ವಾರಗಳಿಗೆ ಸಚಿನ್ ತೆಂಡೂಲ್ಕರ್ ಅವರ ಹೆಸರಿಟ್ಟು ಗೌರವ ಸಲ್ಲಿಸಿದೆ.
ಸೋಮವಾರ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ 50ನೇ ವಸಂತ ಪೂರೈಸಿದರು. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಸಚಿನ್ 2004ರಲ್ಲಿ 3 ಶತಕ ಹಾಗೂ ಅಜೇಯ 241 ರನ್ ಹೊಡೆದಿದ್ದರು. ಭಾರತದಾಚೆ ಸಿಡ್ನಿ ಮೈದಾನ ತಮ್ಮ ನೆಚ್ಚಿನ ಕ್ರೀಡಾಂಗಣ. 1991-92ರಲ್ಲಿ ಆಸಿಸ್ನ ಮೊದಲ ಪ್ರವಾಸ ತುಂಬ ನೆನಪುಗಳಿವೆ ಎಂದು ನೆನೆದಿದ್ದಾರೆ.
ಸಚಿನ್ ಜತೆಗೆ ಮತ್ತೋರ್ವ ಕ್ರಿಕೆಟ್ ದಿಗ್ಗಜ ಬ್ರಿಯಾನ್ ಲಾರಾ ಅವರ ಹೆಸರನ್ನು ಗೇಟ್ಗೆ ನಾಮಕರಣ ಮಾಡಲಾಗಿದೆ. ಸಿಡ್ನಿ ಮೈದಾನದಲ್ಲಿ ಬ್ರಿಯಾನ್ ಲಾರಾ 277 ರನ್ ಹೊಡೆದಿದ್ದರು. ಆಟಗಾರರು ಡಾನ್ ಬ್ರಾಡ್ಮನ್ ಗೇಟ್ ಮೂಲಕ ಕ್ರೀಡಾಂಗಣ ಪ್ರವೇಶಿಸಲಿದ್ದು ವೀಕ್ಷಕರು ಸಚಿನ್ – ಲಾರಾ ಹೆಸರಿನ ಗೇಟ್ಗಳ ಮೂಲಕ ಜ್ರೀಡಾಂಗಣಕ್ಕೆ ಪ್ರವೇಶ ಮಾಡಲಿದ್ದಾರೆ.
ಇಲ್ಲಿಗೆ ಭೇಟಿ ನೀಡುವ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರಿಗೆ ಮಾತ್ರವಲ್ಲದೇ ಭವಿಷ್ಯದಲ್ಲಿ ಸಿಡ್ನಿ ಮೈದಾನಕ್ಕೆ ಭೇಟಿ ನೀಡುವ ಎಲ್ಲಾ ಆಟಗಾರರಿಗೂ ಸ್ಪೂರ್ತಿ ತುಂಬಲಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ. ನನ್ನ ಮತ್ತು ನನ್ನ ಸ್ನೇಹಿತ ಬ್ರಿಯಾನ್ ಲಾರಾ ಹೆಸರಿನಲ್ಲಿ ಪ್ರವೇಶ ದ್ವಾರ ಇಟ್ಟಿರುವುದು ದೊಡ್ಡ ಗೌರವವಾಗಿದೆ. ನಾನು ಎಸ್ಸಿಹಿ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. ಶೀಘ್ರದಲ್ಲೆ ಎಸ್ಸಿಜಿಗೆ ಭೇಟಿ ನೀಡಲು ಎದುರು ನೋಡುತ್ತಿದ್ದೇನೆ ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.