ಪ್ರತಿಷ್ಠಿತ ವಿವಿಯ ಆವರಣದಲ್ಲಿ ಅಮವಾಸ್ಯೆಯ ದಿನ ಕೋಳಿ, ಮೇಕೆ ಬಲಿ ಕೊಡಲಾಗುತ್ತಿದೆ ಎನ್ನಲಾಗುತ್ತಿದೆ.
ತೆಲಂಗಾಣದ ಉಸ್ಮಾನಿಯಾ ನಂತರ ಕಾಕತೀಯ ವಿಶ್ವವಿದ್ಯಾಲಯ (Kakatiya University) ಹೆಚ್ಚು ಹೆಸರು ಮಾಡಿದೆ. ಅಲ್ಲಿನ ವಿದ್ಯಾರ್ಥಿಗಳು ಅಸಾಮಾಜಿಕ ಚಟುವಟಿಕೆಗಳು ಮತ್ತು ಕ್ಷುದ್ರ ಪೂಜೆಗಳಿಂದ ತತ್ತರಿಸಿದ್ದಾರೆ. ಅದಕ್ಕೆ ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬರುತ್ತಿರುವ ಸರಣಿ ಘಟನೆಗಳೇ ಸಾಕ್ಷಿಯಾಗುತ್ತಿವೆ.
ಇಲ್ಲಿ ಯಾರೋ ವ್ಯಕ್ತಿಗಳು ಬಂದು ಕ್ಷುದ್ರ ಪೂಜೆಗಳು (Black Magic, superstition) ಮಾಡಿದ್ದಾರೆ. ಇದು ಸಂಚಲನ ಮೂಡಿಸುತ್ತಿವೆ. ಇತ್ತೀಚೆಗೆ ಪ್ರತಾಪ ರುದ್ರ ಹಾಸ್ಟೆಲ್ ಬಳಿ ಕ್ಷುದ್ರ ಪೂಜೆ ನಡೆದ ಕುರುಹುಗಳನ್ನು ನೋಡಿ ವಿದ್ಯಾರ್ಥಿಗಳು ಬೆಚ್ಚಿ ಬಿದ್ದಿದ್ದಾರೆ.
ಕ್ಷುದ್ರ ಪೂಜೆ ನಡೆದ ಜಾಗದಲ್ಲಿ ಕುರಿ ಕೋಳಿ, ಮೇಕೆ ಬಲಿ ನೀಡಲಾಗಿದೆ.. ನಿಂಬೆಹಣ್ಣು, ಕುಂಬಳಕಾಯಿ ಹಾಕಿ ತಾಂತ್ರಿಕ ಪೂಜೆ ಮಾಡಲಾಗಿದೆ.
ವಿಶ್ವವಿದ್ಯಾನಿಲಯದ ಆವರಣದಲ್ಲಿ ಕ್ಷುದ್ರ ಶಾಸ್ತ್ರದ ಪೂಜೆ ಏಕೆ ನಡೆಯಿತು. ಅತೀಂದ್ರಿಯ ಪೂಜೆಗೆ ಗುರಿಯಾದವರು ಯಾರು ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.