ನಾಳೆ ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದ್ದು, ಇಡೀ ಜಗತ್ತೇ ಭಾರತದತ್ತ ಮುಖ ಮಾಡಿದೆ. ಫೈನಲ್ ಕಾದಾಟಕ್ಕೆ ಕ್ಷಣಗಣನೆ ಶುರುವಾಗಿದೆ.
ಗರೂ ಪಡೆ ಕಟ್ಟಿಹಾಕುವುದಕ್ಕೆ ಅಭೇದ್ಯ ಭಾರತ ಸಜ್ಜಾಗಿದೆ. ಕ್ರಿಕೆಟ್ ದಿಗ್ಗಜರು ಈಗಾಗಲೇ ಭಾರತ ತಂಡಕ್ಕೆ ಶುಭಕೋರಿದ್ದಾರೆ. ಇದರ ಮಧ್ಯೆ ಈಶ ಫೌಂಡೇಶನ್ ಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅವರು ಸಂದೇಶ ನೀಡುವ ಮೂಲಕ ಭಾರತ ತಂಡಕ್ಕೆ ಆಶೀರ್ವಾದ ಮಾಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿರುವ ಸದ್ಗುರು, ಭಾರತ ತಂಡ ಅದ್ಭುತ ಪ್ರದರ್ಶನ ನೀಡುತ್ತಿದೆ. ಹತ್ತಕ್ಕೆ ಹತ್ತು ಪಂದ್ಯಗಳನ್ನು ಗೆಲ್ಲುವ ಮೂಲಕ ಆಟವನ್ನು ಸಂಪೂರ್ಣವಾಗಿ ಹೊಸ ದಿಕ್ಕಿನೆಡೆಗೆ ಕೊಂಡೊಯ್ದಿದೆ. ನಾಯಕತ್ವ ಮತ್ತು ವೈಯಕ್ತಿಕ ಆಟಗಾರರ ಅದ್ಭುತ ಪ್ರದರ್ಶನ, ದಾಖಲೆಗಳು , ಈ ಅಸಾಧಾರಣ ತಂಡವು ಫೈನಲ್ಗೆ ತಂದು ನಿಲ್ಲಿಸಿದೆ ಎಂದು ಹೇಳಿದ್ದಾರೆ.
Hit the damn ball and get them down under. Let us make it happen. -Sg #TeamIndia #CWC23 @BCCI pic.twitter.com/zSTzehUljH
— Sadhguru (@SadhguruJV) November 18, 2023
ನಮ್ಮ ಹುಡುಗರು ಅದನ್ನೇ ಮಾಡುತ್ತಾರೆ, ಇಡೀ ದೇಶಕ್ಕೆ ಹೆಮ್ಮೆ ಮತ್ತು ಸಂತೋಷವನ್ನು ತರುತ್ತಾರೆ ಎಂದು ನನಗೆ ವಿಶ್ವಾಸವಿದೆ’ ಎಂದಿದ್ದಾರೆ. ಫೈನಲ್ ಪಂದ್ಯದಲ್ಲಿ ಗೆಲ್ಲುವ ಮೂಲಕ 1.4 ಶತಕೋಟಿಗೂ ಹೆಚ್ಚು ಜನರನ್ನು ನೀವು ಸಂತೋಷ ಪಡಿಸಬಹುದು. ಅದನ್ನು ಮರೆಯಬೇಡಿ, ಆದರೆ ನಿಮ್ಮ ತಲೆಯಲ್ಲಿ ಇದನ್ನು ಇಟ್ಟುಕೊಳ್ಳಬೇಡಿ. ನಿಮ್ಮ ಆಟವನ್ನು ನೀವು ಆಡಿ, ವಿಕೆಟ್ ಗಳನ್ನು ಉರುಳಿಸಿ ಅಷ್ಟೇ. ಉಳಿದದ್ದು ಸಂಭವಿಸುತ್ತದೆ. ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು ಮತ್ತು ಆಶೀರ್ವಾದಗಳು’ ಎಂದು ಅವರು ಹೇಳಿದ್ದಾರೆ.