ನಟ ದರ್ಶನ್ (Darshan) ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಕಂಬಿಗಳ ಹಿಂದೆ ಹೋಗಿದ್ದಾರೆ.
ಹೀಗಾಗಿ ಹಲವು ಸೆಲೆಬ್ರಿಟಿಗಳು ಜೈಲಿಗೆ ಬಂದು ಅವರನ್ನು ಭೇಟಿ ಮಾಡಿ ಹೋಗುತ್ತಿದ್ದಾರೆ. ನಿನ್ನೆಯಷ್ಟೇ ಪತ್ನಿ, ಸಹೋದರ ದಿನಕರ್ ದರ್ಶನ್ ರನ್ನು ಭೇಟಿ ಮಾಡಿದ್ದರು. ಈಗ ಕಾಮಿಡಿ ಸ್ಟಾರ್ ಸಾಧುಕೋಕಿಲ ಜೈಲಿಗೆ ಭೇಟಿ ನೀಡಿದ್ದಾರೆ.
ಇಂದು ಸಾಧು ಕೋಕಿಲ (Sadhu Kokila) ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದ್ದಾರೆ. ಮೊದಲ ಬಾರಿಗೆ ದರ್ಶನ್ ಭೇಟಿಗೆ ವಕೀಲರ ಜೊತೆ ಸಾಧುಕೋಕಿಲ ತೆರಳಿದ್ದಾರೆ. ನಿನ್ನೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರೊಂದಿಗೆ ವಿನೋದ್ ರಾಜ್ (Vinod Raj) ಜೈಲಿಗೆ ಭೇಟಿ ನೀಡಿದ್ದರು. ಈ ಬೆನ್ನಲ್ಲೇ ಸಾಧು ಕೋಕಿಲ ಅವರು ದರ್ಶನ್ ನೋಡಲು ಜೈಲಿಗೆ ಭೇಟಿ ಕೊಟ್ಟಿದ್ದಾರೆ. ಜೈಲು ನಿಯಮಗಳ ಪ್ರಕಾರ, ಒಂದು ವಾರದಲ್ಲಿ ಮೂವರಿಗೆ ಮಾತ್ರ ಭೇಟಿ ಮಾಡಲು ಅವಕಾಶ ಇರುತ್ತದೆ.








