ADVERTISEMENT
Thursday, March 12, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

“ನಾವು ಮರೆತ ನಮ್ಮ ಮಲೆನಾಡಿನ ಬೆಟ್ಟಗಳ ಹೆಸರುಗಳು ಹೀಗಿವೆ ನೋಡಿ”

Mahesh M Dhandu by Mahesh M Dhandu
October 15, 2020
in Newsbeat, Saaksha Special, ಎಸ್ ಸ್ಪೆಷಲ್
Sahyadri Girishreni
Share on FacebookShare on TwitterShare on WhatsappShare on Telegram

ಸಹ್ಯಾದ್ರಿ ಗಿರಿಶ್ರೇಣಿಯ ಕುಟುಂಬದ ನೂರಾರು ಮಕ್ಕಳಿಗೆ ಚೆಂದದ ಹೆಸರಿಟ್ಟವರು ಇಕ್ಕೇರಿ ನಾಯಕ ವಂಶಜರು Sahyadri Girishreni

1565ರ ತಾಳಿಕೋಟೆ ಯುದ್ಧದ ನಂತರ ವಿಜಯನಗರ ಸಾಮ್ರಾಜ್ಯದ ಹಲವಾರು ಸಾಮಂತರು ಕರ್ನಾಟಕ, ಆಂದ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಸ್ವತಂತ್ರ ಆಗಲು ಪೂರಕವಾದ ಪರಿಸ್ಥಿತಿ ನಿರ್ವಾಣವಾಗಿದ್ದು ಅದನ್ನು ಕೆಲವರು ಸಮರ್ಥವಾಗಿ ಬಳಸಿ ಕೊಳ್ಳುತ್ತಾರೆ. ನಮ್ಮ ಕರ್ನಾಟಕದ ಮಲೆನಾಡಿನ ಇಕ್ಕೇರಿ ಇಂದ ಆಳ್ವಿಕೆ ಮಾಡುತ್ತಿದ್ದ ನಾಯಕರು ಈ ಹೊಸ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ಒಂದು ಹೊಸ ಅಧ್ಯಾಯವನ್ನು ಸೃಷ್ಟಿಸುತ್ತಾರೆ.

Related posts

ಉತ್ತರ ಪ್ರದೇಶದಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬಿಜೆಪಿ ತಂತ್ರ: ‘ಮಿಷನ್ ಯುಪಿ 2027’

ಉತ್ತರ ಪ್ರದೇಶದಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬಿಜೆಪಿ ತಂತ್ರ: ‘ಮಿಷನ್ ಯುಪಿ 2027’

March 12, 2026
ಯುದ್ಧದ ಹಿನ್ನೆಲೆ: IPL ಪಂದ್ಯಗಳು ಮುಂದೂಡಿಕೆ ಸಾಧ್ಯತೆ?

ಯುದ್ಧದ ಹಿನ್ನೆಲೆ: IPL ಪಂದ್ಯಗಳು ಮುಂದೂಡಿಕೆ ಸಾಧ್ಯತೆ?

March 12, 2026

ಇದನ್ನೂ ಓದಿ : ಇಂದು ವಿಶ್ವ ವಿದ್ಯಾರ್ಥಿ ದಿನ – ವಿದ್ಯಾರ್ಥಿಗಳ ಸ್ಫೂರ್ತಿಯ ಮೂಲ ಕಲಾಂ ಮೇಷ್ಟ್ರು ಅವರ ಜನ್ಮ‌ದಿನ

1586ರಿಂದ 1629ರ ವರೆಗೆ ಇಕ್ಕೇರಿ ಗದ್ದಿಗೆಯ ಮೇಲೆ ವಿರಾಜಮಾನ ಆಗಿದ್ದ ಹಿರಿಯ ವೆಂಕಟಪ್ಪ ನಾಯಕರು ಇಕ್ಕೇರಿ ರಾಜ್ಯದ ಗಡಿಯನ್ನು ಎಲ್ಲಾ ದಿಕ್ಕಿನಲ್ಲಿ ವಿಸ್ತರಿಸುತ್ತಾರೆ. ಪೋರ್ಚುಗೀಸ್ ಅವರ ಅಧೀನದಲ್ಲಿ ಇದ್ದ ಗೋವಾದ ದಕ್ಷಿಣದಿಂದ ಪ್ರಾರಂಭವಾದ ಕರಾವಳಿ ಕಡಲ ತೀರವನ್ನು ಕೇರಳದ ನೀಲೇಶ್ವರದ ವರೆಗೂ ಸ್ವಾಧೀನ ಪಡಿಸಿಕೊಂಡು “ಪಶ್ಚಿಮ ಸಾಗರದ ಒಡೆಯ” (Lord of the Western Sea) ಎಂದು ಬಿರುದು ಪಡೆದು ಇಕ್ಕೇರಿಯ ಬಾವುಟವನ್ನು ಪಶ್ಚಿಮ ಘಟ್ಟದ ಮೇಲೆ ಮತ್ತು ಕರಾವಳಿ ಪ್ರದೇಶಗಳಲ್ಲಿ ಹಾರಿಸಿ ಒಂದು ಹೊಸ ಇತಿಹಾಸಕ್ಕೆ ನಾಂದಿ ಹಾಡುತ್ತಾರೆ. 17ನೇ ಶತಮಾನದ ಹೊಸ್ತಿಲಲ್ಲಿ ಇಕ್ಕೇರಿ ಸಂಸ್ಥಾನ ಕರ್ನಾಟಕದ ಅತ್ಯಂತ ದೊಡ್ಡ, ಬಲಿಷ್ಠ ಮತ್ತು ಶ್ರೀಮಂತ ರಾಜ್ಯವಾಗಿ ಹೊರಹೊಮ್ಮುತ್ತದೆ. 17ನೇ ಶತಮಾನದಲ್ಲಿ ವಿದೇಶಿ ವ್ಯಾಪಾರಿಗಳ ಬಹು ಬೇಡಿಕೆಯ ಬಂದರೂ ಆಗಿದ್ದ ಹೊನ್ನಾವರ, ಬಸರೂರು, ಭಟ್ಕಳ ಮತ್ತು ಮಂಗಳೂರು ಎಲ್ಲವೂ ಇಕ್ಕೇರಿ ನಾಯಕರ ಆಳ್ವಿಕೆಗೆ ಒಳಪಟ್ಟ ನಂತರ ವೆಂಕಟಪ್ಪ ನಾಯಕರು ಕರ್ನಾಟಕದ ಸಮಸ್ತ ಕಾಳು ಮೆಣಸಿನ ವ್ಯಾಪಾರದ ಒಡೆಯನಾಗುತ್ತಾರೆ ಮತ್ತು ಇಡೀ ಪಶ್ಚಿಮ ಕರಾವಳಿಯ ಧಾನ್ಯವನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳುತ್ತಾರೆ. ಇದರ ಪರಿಣಾಮವಾಗಿ ಹಿರಿಯ ವೆಂಕಟಪ್ಪ ನಾಯಕರು ಮತ್ತು ವಿಶೇಷವಾಗಿ ಇಕ್ಕೇರಿ ಸಂಸ್ಥಾನ ಒಂದು ಪ್ರಮುಖ ಶಕ್ತಿಶಾಲಿ ಕೇಂದ್ರ ಬಿಂದು ಆಗುತ್ತದೆ ಹಾಗಾಗಿ ಇದರ ಜೊತೆಗೆ ಸ್ನೇಹ ಮತ್ತು ವ್ಯಾಪಾರ ಸಂಬಂಧವನ್ನು ಬೆಳಸಲು ಐರೋಪ್ಯ ರಾಷ್ಟ್ರಗಳಾದ ಇಂಗ್ಲೀಷ್, ಡಚ್, ಪೋರ್ಚುಗೀಸ್ ಮತ್ತು ಫ್ರೆಂಚರು ಹಾತೊರೆಯುತ್ತಾರೆ.Sahyadri Girishreni Saaksha TV

1600 ರಿಂದ 1763ರ ವರೆಗೂ ಇಕ್ಕೇರಿ ರಾಜ್ಯದ ಕರಾವಳಿ ಮತ್ತು ಘಟ್ಟದ ಮೇಲಿನ ಮಲೆನಾಡು ಪ್ರದೇಶಗಳನ್ನು ಬೆಸುಗೆ ಹಾಕಿದ್ದು ಮಾತ್ರ ಸಹ್ಯಾದ್ರಿ ಪರ್ವತಗಳ ಶ್ರೇಣಿ (ಪಶ್ಚಿಮ ಘಟ್ಟಗಳು) Sahyadri Girishreni. ಅಂದಿನ ಕಾಲದಲ್ಲಿ ಕರಾವಳಿ ಪ್ರದೇಶಗಳು ಅದರಲ್ಲೂ ವಿಶೇಷವಾಗಿ ಮುಖ್ಯ ವ್ಯಾಪಾರಿ ಬಂದರೂ ಗಳಿಂದ ಘಟ್ಟದ ಮೇಲಿನ ಪ್ರದೇಶಗಳನ್ನು ಸಂಪರ್ಕಿಸಲು ಹಲವಾರು ರಸ್ತೆಗಳು ಇದ್ದು ಅವುಗಳಲ್ಲಿ ಕೆಲವು ವ್ಯಾಪಾರದ ದೃಷ್ಟಿಕೋನದಿಂದ ಬಹಳ ಮಹತ್ವದಾಗಿತ್ತು. ಇಂತಹ ರಸ್ತೆಗಳಲ್ಲಿ ವ್ಯಾಪಾರಿಗಳು ಮತ್ತು ಅವರ ಸಾಮಾನುಗಳಿಗೆ ರಕ್ಷಣೆ ನೀಡಲು ಮತ್ತು ಪ್ರವಾಸಿಗರ ಹಿತದೃಷ್ಟಿ ಗೋಸ್ಕರ ಇಕ್ಕೇರಿ ನಾಯಕರು ಆಯ್ದ ಪ್ರಮುಖ ಸ್ಥಳಗಳಲ್ಲಿ ಕೋಟೆಯನ್ನು ನಿರ್ಮಿಸುತ್ತಾರೆ. ಈ ಕೋಟೆಗಳನ್ನು ನಿರ್ಮಾಣ ಮಾಡಿದ ಪ್ರದೇಶ ಬೌಗೋಳಿಕವಾಗಿ ಎಷ್ಟು ಪ್ರಮುಖವಾಗಿತ್ತು ಅಂದರೆ ಇದು ಪಶ್ಚಿಮ ಘಟ್ಟದ ತಟ್ಟ ತುದಿಯಲ್ಲಿ ಇದ್ದು ಅಲ್ಲಿಂದ ಕರಾವಳಿಯನ್ನು ಸಂಪರ್ಕಿಸುವ ಘಟ್ಟದ ರಸ್ತೆಗೆ ಕಾವಲು ಕೊಡಲು ಸುಲಭವಾಗಿತ್ತು. ಇಕ್ಕೇರಿ ನಾಯಕರ ರಾಜ್ಯದ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಪಶ್ಚಿಮ ಘಟ್ಟಗಳು ಕಾರವಾರದಿಂದ ಪ್ರಾರಂಭವಾಗಿ ಕೇರಳದ ಗಡಿಯವರೆಗು ಸಾಗುತ್ತದೆ ಮತ್ತು ಇಲ್ಲಿ ಗಮನಿಸ ಬೇಕಾದ ಅಂಶ ಏನೆಂದರೆ ಈ ಸಹ್ಯಾದ್ರಿ ಪರ್ವತ ಶ್ರೇಣಿಗಳಲ್ಲಿ ಹಲವಾರು ಗುಡ್ಡಗಳು ಇದ್ದು ನಮ್ಮ ಪೂರ್ವಜರು ಎಲ್ಲದಕ್ಕೂ ಹೆಸರನ್ನು ನೀಡಿದ್ದರು ಆದರೆ ಇಂದು ನಮಗೆ ಅದ್ಯಾವುದು ನೆನಪಿಲ್ಲ.

Sahyadri Girishreni Saaksha TV

ಇದನ್ನೂ ಓದಿ : ಕಲ್ಪತರು ನಾಡಿನಲ್ಲಿರುವ ಮಧುಗಿರಿ ಬೆಟ್ಟದ ವೈಭವ..!

ಅಂದು ಇಕ್ಕೇರಿ ರಾಜ್ಯದ ಪ್ರಮುಖ ಭಾಗವಾಗಿದ್ದ ಈ ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿ ಇರುವ ಗುಡ್ಡಗಳ ಹೆಸರನ್ನು ಒಮ್ಮೆ ಮೆಲುಕು ಹಾಕಿ ನೋಡೋಣ. ಸಹ್ಯಾದ್ರಿ ಶ್ರೇಣಿಯು ಕಾರವಾರದಿಂದ ಕೇರಳಕ್ಕೆ ಸಾಗುವಾಗ ಇದರಲ್ಲಿ ಇರುವ ಹಲವಾರು ಗುಡ್ಡಗಳಿಗೆ ಅಂದು ಇಕ್ಕೇರಿ ರಾಜ್ಯದಲ್ಲಿ ಕರೆಯುತ್ತಿದ್ದ ಹೆಸರುಗಳು ಕ್ರಮವಾಗಿ ಈ ತರ ಇರುತ್ತದೆ – ಸೂರ್ಯಕಲ್ಯಾಣಿ ಗುಡ್ಡ (Suryakalyani Gudda), ಕಲಾರ್ ಗುಡ್ಡ (Kalar Gudda), ಬಾಳೆಕಂತ್ ಗುಡ್ಡ (Balekant Gudda), ಬೆರೋಲಿ ಗುಡ್ಡ (Beroli Gudda), ತುಳಸಿ ಪರ್ವತ (Tulsi Parvat), ಬಿದ್ರಲ್ಲಿ ಗುಡ್ಡ (Bidralli Gudda), ಮಲಾಪುರ್ ಗುಡ್ಡ (Malapur Gudda), ಕುಂಬ್ರಿ ಗುಡ್ಡ (Kumbri Gudda), ದೇವಿತೋಟ್ ಗುಡ್ಡ (Devitot Gudda), ಬೈನ್ ಬೊಳೆ ಗುಡ್ಡ (Bainbole Gudda), ಮೆನ್ಸಿ ಗುಡ್ಡ (Mensi Gudda), ಕೋಟಾ ಗುಡ್ಡ (Kota Gudda), ದೊಡ್ಡಬೇಣಾ ಗುಡ್ಡ (Dodbena Gudda), ಅಚ್ಚುವಿಮೋಟಿ ಗುಡ್ಡ (Achuvimoti Gudda), ಹುಯ್ಸಿ ಗುಡ್ಡ (Huisi Gudda), ದೇವಿತ್ ಗುಡ್ಡ (Devit Gudda), ಕುಡ್ಲಿ ಗುಡ್ಡ (Kudli Gudda), ಸಂನ್ಯಾಸಿ ಗುಡ್ಡ (Sanyasi Gudda), ಕೋಟೆ ಗುಡ್ಡ (Kote Gudda), ಕಟಿ ಗುಡ್ಡ (Kati Gudda), ಹುಕಲಿ ಗುಡ್ಡ (Hukali Gudda), ಮಸ್ತಾನಿ ಗುಡ್ಡ (Mastani Gudda), ಹಿನ್ನಿಬರೆ ಗುಡ್ಡ (Hinnibare Gudda), ಚಂದ್ರಗಿರಿ ಬೆಟ್ಟ (Chandragiri Betta), ಕಲ್ಲರಕ್ಕು ಗುಡ್ಡ (Kallaraku Gudda), ಬಿದ್ರುಬನ ಗುಡ್ಡ (Bidrubana Gudda), ಕೆರೆ ಗುಡ್ಡ (Kere Gudda), ಹೀರೆ ಗುಡ್ಡ (Hire Gudda), ದೊಡ್ಡಕುಂಮ್ರಿ ಗುಡ್ಡ (Doddakumari Gudda), ಹೆದ್ದಿ ಗುಡ್ಡ (Hedi Gudda), ಕರೆ ಗುಡ್ಡ (Kare Gudda), ವಡಮಾಲೆ ಗುಡ್ಡ (Vadamale Gudda), ಗಲಿ ಗುಡ್ಡ (Gali Gudda), ಹುಲಿಕಲ್ ಬರೆ (Hullikal Bare), ಅತ್ತಿ ಗುಡ್ಡ (Atti Gudde), ಕೋರ್ಮಾನ್ ಕೊಟ್ಟೆ (Korman Kotte), ಕೊಡಚಾದ್ರಿ (Kodachadri), ಬೆಳಕಾಲು (Belakalu), ಸಂಸೆ (Samshe), ನಾಗನಕಲ್ ಬರೆ (Naganakal Bare), ಮುಲ್ ಗುಡ್ಡ (Mul Gudda), ಮೆಟ್ಟುಕಲ್ಲು ಗುಡ್ಡ (Mettukallu Gudda), ದುರ್ಗದ ಗುಡ್ಡೆ (Durgada Gudde), ಉಮ್ಮಿ ಗುಡ್ಡ (Umi Gudda), ಮುದ್ಕುಂಬ್ರಿ ಬರೆ (Mudkumbri Bare), ಹಂದಿನ್ಮನೆ ಬರೆ (Handinmane Bare), ದೊಡ್ ಗುಡ್ಡ (Dod Gudda), ಕೋಟೆ ಗುಡ್ಡ (Kote Gudda), ಎಲೆಹೊಳೆ ಗುಡ್ಡ (Yelehole Gudda), ಕುಂದದ ಗುಡ್ಡ (Kundada Gudda), ಸೋಮೇಶ್ವರ (Someshwar), ನಿಸಾನಿ ಗುಡ್ಡ (Nisani Gudda), ಕಟ್ಟೆ ಗುಡ್ಡ (Kate Gudda), ಭೀಮನಕಲ್ಲ್ ಗುಡ್ಡೆ (Bhimanakal Gudde), ನರಸಿಂಹಪರ್ವತ (Narasimparvata), ಮನಾಕ್ಕಿಬೆಲಾರ ( Manakkibelara), ಬಿಳಗಲ ಗುಡ್ಡೆ (Bilagal Gudde), ಬೇಗದ್ದ್ ಗುಡ್ಡೆ (Beged Gudde), ವಾಲ್ಕುಂಜಿ (Valkunji), ಆಣೆಕಲ್ಲ್ ಗುಡ್ಡೆ (Anekal Gudde), ತುಳಜಾನ್ಕಲ್ಲ್ ಮೊಟ್ಟಿ (Thulajankal Motte), ಗಂಗ್ರಿ ಕಲ್ (Gangri Kal), ಸೀತಾಭೂಮಿ (Sitabhumi), ಗಡ್ಡಿಕಲ್ ಗುಡ್ಡೆ (Gadikal Gudde), ಕಡಾಮಡ್ಡಿ ಕಲ್ಲು (Kadamadi Kallu), ಕುದುರೆಮುಖ (Kudremukha), ಬಂಗಾರಬಳಿಗ (Bangarabaliga), ನಗರ ಗುಡ್ಡೆ (Nagara Gudda), ಬಲ್ಲರಾಯನದರ್ಗ (Ballarayanadurga), ಬಿಳಿಕಲ್ ದುರ್ಗಡ (Bilikaldurgada), ನೆಡಗಂದ್ದಿ ಬೆಟ್ಟ (Nedagandi Betta), ಜೇನು ಗುಡ್ಡ (Jenu Gudda), ಬಿಳಿಗಲ್ಲು ಗುಡ್ಡ (Bilagalu Gudda), ಏರಿಕಲ್ ಗುಡ್ಡೆ (Yerikal Gudde), ಡೊಂಬ್ರ ಗುಡ್ಡ (Dombra Gudda), ಗಾಳಿ ಗುಡ್ಡ (Gali Gudda), ತೊಟ್ಟಿ ಗುಡ್ಡ (Totti Gudda) ಮತ್ತು ಕರಡಿ ಗುಡ್ಡೆ (Karadi Gudde).

Sahyadri Girishreni Saaksha TV

ಇದನ್ನೂ ಓದಿ : ಟೆಕ್ಸಸ್ ನ ಟೆಕ್ಸನ್ನರ ನಾಡಿನ ಪ್ರೇಮ ಅಭಿನಂದನೀಯವಷ್ಟೇ ಅಲ್ಲ ಟೆಕ್ಸನ್ನರ ಆತ್ಮಾಭಿಮಾನ ಶ್ಲಾಘನೀಯವೂ ಹೌದು

ಕರ್ನಾಟಕದಲ್ಲಿ ಸಾಗುವಾಗ ಈ ಪಶ್ಚಿಮ ಘಟ್ಟಗಳು ಕೆಲವು ಕಡೆಗಳಲ್ಲಿ ಕವಲು ಒಡೆದು ಮತ್ತೆ ಸೇರಿಕೊಂಡು ಮುಂದೆ ಸಾಗುತ್ತವೆ. ಈ ಪಶ್ಚಿಮ ಘಟ್ಟಗಳು ಕವಲು ಒಡೆದು ಮತ್ತೆ ಸೇರಿಕೊಳ್ಳುವ ಮದ್ಯದಲ್ಲಿ ಇರುವ ಪ್ರದೇಶ ನಿಜಕ್ಕೂ ಒಂದು ವಿಸ್ಮಯ ಯಾಕೆಂದರೆ ಇವುಗಳ ಪೂರ್ವಕ್ಕೂ ಘಟ್ಟ ಮತ್ತು ಪಶ್ಚಿಮಕ್ಕೂ ಘಟ್ಟಗಳ ಸಂರಕ್ಷಣಾ ಗೋಡೆಯನ್ನು ಕಾಣಬಹುದು. ಇನ್ನೂ 1639ರಿಂದ 1763ರ ವರೆಗೂ ಇಕ್ಕೇರಿ ನಾಯಕರ ರಾಜಧಾನಿ ಹಾಗೂ ಕರ್ನಾಟಕದ ಕೇಂದ್ರ ಬಿಂದು ಆಗಿದ್ದ ಬಿದನೂರು (ಇಂದಿನ ನಗರ) ಹತ್ತಿರ ಇರುವ ಐತಿಹಾಸಿಕ ಪುರಾಣ ಪ್ರಸಿದ್ಧ ಇಕ್ಕೇರಿ ನಾಯಕರ ಇಷ್ಟ ದೇವತೆ ಶ್ರೀ ಮೂಕಾಂಬಿಕೆ ನೆಲೆಸಿದ ಕ್ಷೇತ್ರ ಕೊಲ್ಲೂರು ಸಹಾ ಮೇಲ್ಕಂಡ ವಿಸ್ಮಯವಾದ ಪ್ರದೇಶದಲ್ಲಿ ಇತ್ತು. ಕೊಲ್ಲೂರು ಕ್ಷೇತ್ರಕ್ಕೆ ಸುತ್ತಲೂ ಸಹ್ಯಾದ್ರಿ ಪರ್ವತ ಶ್ರೇಣಿಯ ಸರ್ಪಗಾವಲು ಮತ್ತು ಇಲ್ಲಿಂದ ಇಕ್ಕೇರಿ ನಾಯಕರ ರಾಜಧಾನಿ ಬಿದನೂರಿಗೆ ಸಂಪರ್ಕಿಸುವ ಘಟ್ಟದ ಮೇಲೆ ಒಂದು ಪ್ರಮುಖ ಕೋಟೆ ಇತ್ತು. ಇನ್ನೂ ಸರಿಸುಮಾರು 80 ಎಕರೆ ವಿಸ್ತೀರ್ಣದ ಈ ಕೋಟೆಯು ದುರ್ಗಮವಾದ ಕಾಡಿನಲ್ಲಿ ಇದ್ದು ಇದನ್ನು ಮುಟ್ಟಲು ಗುಡ್ಡವನ್ನು ಏರಬೇಕಿತ್ತು. ಈ ಕೋಟೆ ಸಮುದ್ರ ಮಟ್ಟದಿಂದ 815 ಮೀಟರ ಎತ್ತರದಲ್ಲಿ ಇದ್ದು ಇದರಲ್ಲಿ ಇಕ್ಕೇರಿ ನಾಯಕರು ಕಟ್ಟಿಸಿದ ಒಂದು ಅದ್ಭುತವಾದ ದೇವಾಲಯ ಇದೆ. ಇನ್ನೂ ಈ ಕೋಟೆ ಇಂದ ಘಟ್ಟದ ರಸ್ತೆ ಮತ್ತು ಶ್ರೀ ಕ್ಷೇತ್ರ ಕೊಲ್ಲೂರನ್ನು ಕಾಯಲು ಸರದಿಯ ಮೇಲೆ ಸೈನಿಕರನ್ನು ನಿಯೋಜನೆ ಮಾಡುತ್ತಿದ್ದರು. ಒಂದು ತುಕಡಿ ಏನಿಲ್ಲವೆಂದರೂ ಸುಮಾರು ಒಂದು ತಿಂಗಳ ಕಾಲ ಅಲ್ಲೆ ಮುಕ್ಕಾಂ ಹೂಡುತ್ತಿತ್ತು ಹಾಗಾಗಿ ಈ ಸೈನಿಕರಿಗೆ ನೀರನ್ನು ಒದಗಿಸಲು ಈ ಕೋಟೆಯಲ್ಲಿ ಸರಿ ಸುಮಾರು 30 ಬಾವಿಗಳ ವ್ಯವಸ್ಥೆ ಮಾಡಲಾಗಿತ್ತು. ಇನ್ನೂ 1800ರ ನಂತರದಿಂದ ಇಕ್ಕೇರಿ ನಾಯಕರು ಪಶ್ಚಿಮ ಘಟ್ಟದ ಉದ್ದಕ್ಕೂ ಕಟ್ಟಿಸಿರುವ ಇಂತಹ ಹಲವಾರು ಕೋಟೆಗಳು ತಮ್ಮ ಮಹತ್ವವನ್ನು ಕಳೆದುಕೊಂಡು ಜನರಿಂದ ಮತ್ತು ಅವರ ನೆನಪಿನ ಅಂಗಳದಿಂದ ಬಹು ದೂರ ಸಾಗಿ ಹೋಗಿದೆ. ಶ್ರೀ ಕ್ಷೇತ್ರ ಕೊಲ್ಲೂರನ್ನು ಬಿದನೂರಿಗೆ ಸಂಪರ್ಕಿಸುವ ಘಟ್ಟದ ತಟ್ಟ ತುದಿಯಲ್ಲಿ ಇರುವ ಈ ವಿಸ್ಮಯ ಕೋಟೆ ಇಂದು ಅರಣ್ಯದಲ್ಲಿ ಮುಚ್ಚಿ ಹೋಗಿದೆ ಅಂದು ಇಕ್ಕೇರಿ ಸೈನಿಕರ ನೆಲೆಯಾಗಿದ್ದ ಈ ಕೋಟೆ ಇಂದು ಹುಲಿ ಹಾಗು ಕರಡಿಯ ವಾಸ ಸ್ಥಾನವಾಗಿದೆ. ನಮ್ಮ ಹೆಮ್ಮೆಯ ಇಕ್ಕೇರಿ ನಾಯಕರು ಕಟ್ಟಿಸಿದ ಈ ಕೋಟೆ ಮತ್ತು ಇದರ ವಿಶೇಷತೆಯನ್ನು ಅಧ್ಯಯನ ಮಾಡಲು ಮತ್ತು ಈ ಕೋಟೆಯಿಂದ ಶ್ರೀ ಕ್ಷೇತ್ರ ಕೊಲ್ಲೂರು ಹಾಗೂ ಘಟ್ಟದ ರಸ್ತೆ ಹೇಗೆ ಕಾಣಿಸುತ್ತದೆ ಎಂದು ನೋಡಲು ಈ ಕ್ಷೇತ್ರ ಅಧ್ಯಯನ ತುಂಬಾ ಮಹತ್ವದಾಗಿದೆ.

ಇದನ್ನೂ ಓದಿ : ‘ಚಾರ್ಲೊಟ್ – ಜೋರ್ಡಿಯನ್ ರ ಸಮಯ ಯಾತ್ರೆಯ ವಿಸ್ಮಯ; ಒಂದು ಶತಮಾನ ಹಿಂದಕ್ಕೆ ಹೋಗಿ ಮರಳಿತಾ ಈ ಜೋಡಿ?

ಲೇಖನ ಮತ್ತು ಚಿತ್ರಗಳು :-
ಅಜಯ್ ಕುಮಾರ್ ಶರ್ಮಾ
ಇತಿಹಾಸ ಅಧ್ಯಯನಕಾರರು ಮತ್ತು ಪರಿಸರ ಹೋರಾಟಗಾರ
ಶಿವಮೊಗ್ಗ

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: Ikkeri NayakaruLord of the Western SeaSahyadri Girishreni
ShareTweetSendShare
Join us on:

Related Posts

ಉತ್ತರ ಪ್ರದೇಶದಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬಿಜೆಪಿ ತಂತ್ರ: ‘ಮಿಷನ್ ಯುಪಿ 2027’

ಉತ್ತರ ಪ್ರದೇಶದಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬಿಜೆಪಿ ತಂತ್ರ: ‘ಮಿಷನ್ ಯುಪಿ 2027’

by Shwetha
March 12, 2026
0

ಭಾರತೀಯ ಜನತಾ ಪಾರ್ಟಿ ಉತ್ತರ ಪ್ರದೇಶದಲ್ಲಿ ಸತತ ಮೂರನೇ ಅವಧಿಗೆ ಅಧಿಕಾರವನ್ನು ಮರಳಿ ಪಡೆಯಲು ಹೊಸ ರಾಜಕೀಯ ತಂತ್ರವನ್ನು ರೂಪಿಸಿದೆ. ಈ ತಂತ್ರಕ್ಕೆ ಆರ್‌ಎಸ್‌ಎಸ್ ಸಹ ಒಪ್ಪಿಗೆ...

ಯುದ್ಧದ ಹಿನ್ನೆಲೆ: IPL ಪಂದ್ಯಗಳು ಮುಂದೂಡಿಕೆ ಸಾಧ್ಯತೆ?

ಯುದ್ಧದ ಹಿನ್ನೆಲೆ: IPL ಪಂದ್ಯಗಳು ಮುಂದೂಡಿಕೆ ಸಾಧ್ಯತೆ?

by Shwetha
March 12, 2026
0

ಮಾರ್ಚ್ 28ರಿಂದ ಆರಂಭವಾಗಬೇಕಿದ್ದ ಐಪಿಎಲ್ ಟೂರ್ನಿ ಮುಂದೂಡಲಾಗುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿ ಮತ್ತು ಅದರ ಪರಿಣಾಮಗಳಿಂದ ಹಲವು ವ್ಯವಸ್ಥಾತ್ಮಕ ಸಮಸ್ಯೆಗಳು...

ಸುಪ್ರೀಂ ಕೋರ್ಟ್ ಅಸಮಾಧಾನ ಬಳಿಕ  ಇಡೀ ಪಠ್ಯಪುಸ್ತಕ ಹಿಂಪಡೆದು ಕ್ಷಮೆಯಾಚಿಸಿದ NCERT

NCERT ಪಠ್ಯಪುಸ್ತಕಗಳ ಸಮಗ್ರ ಪರಿಶೀಲನೆ: ಸುಪ್ರೀಂ ಕೋರ್ಟ್ ಸೂಚನೆ

by Shwetha
March 12, 2026
0

ಸುಪ್ರೀಂ ಕೋರ್ಟ್ ಎನ್‌ಸಿಇಆರ್‌ಟಿ ಪಠ್ಯಪುಸ್ತಕ ವಿವಾದದ ಹಿನ್ನೆಲೆಯಲ್ಲಿ ಮಹತ್ವದ ಸೂಚನೆ ನೀಡಿದೆ. NCERT ಪ್ರಕಟಿಸಿರುವ 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿನ ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಎಂಬ ವಿಷಯಕ್ಕೆ...

ಇರಾನ್ ಬೆದರಿಕೆ ನಡುವೆಯೂ ಮುಂಬೈ ತಲುಪಿದ ತೈಲ ಟ್ಯಾಂಕರ್: ಜಾಗತಿಕ ಮಟ್ಟದಲ್ಲಿ ಭಾರತದ ದರ್ಬಾರ್ ಶುರು!

ಇರಾನ್ ಬೆದರಿಕೆ ನಡುವೆಯೂ ಮುಂಬೈ ತಲುಪಿದ ತೈಲ ಟ್ಯಾಂಕರ್: ಜಾಗತಿಕ ಮಟ್ಟದಲ್ಲಿ ಭಾರತದ ದರ್ಬಾರ್ ಶುರು!

by Shwetha
March 12, 2026
0

ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡಗಳು ಕವಿದಿರುವ ಪ್ರಸ್ತುತ ಸಂದರ್ಭದಲ್ಲಿ, ಇಡೀ ವಿಶ್ವದ ಜೀವನಾಡಿಯಾಗಿರುವ ತೈಲ ಪೂರೈಕೆ ಮಾರ್ಗ 'ಹಾರ್ಮುಜ್ ಜಲಸಂಧಿ' ಬಹುತೇಕ ಸ್ತಬ್ಧಗೊಂಡಿದೆ. ಇರಾನ್ ನೀಡಿದ್ದ ನೇರ...

ಗ್ಯಾಸ್ ಕೊರತೆ ಪರಿಣಾಮ: ಬೆಂಗಳೂರಿನ ಹೋಟೆಲ್‌ಗಳಲ್ಲಿ ಕೆಲವು ತಿಂಡಿಗಳಿಗೆ ತಾತ್ಕಾಲಿಕ ಬಂದ್

ಗ್ಯಾಸ್ ಕೊರತೆ ಪರಿಣಾಮ: ಬೆಂಗಳೂರಿನ ಹೋಟೆಲ್‌ಗಳಲ್ಲಿ ಕೆಲವು ತಿಂಡಿಗಳಿಗೆ ತಾತ್ಕಾಲಿಕ ಬಂದ್

by Shwetha
March 12, 2026
0

ಬೆಂಗಳೂರು ನಗರದಲ್ಲಿನ ಹೋಟೆಲ್‌ಗಳಲ್ಲಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿರುವ ಹಿನ್ನೆಲೆ ಕೆಲವು ತಿಂಡಿಗಳನ್ನು ತಾತ್ಕಾಲಿಕವಾಗಿ ತಯಾರಿಸದಂತೆ ಹೋಟೆಲ್ ಮಾಲೀಕರು ನಿರ್ಧರಿಸಿದ್ದಾರೆ. ವಿಶೇಷವಾಗಿ ಹೆಚ್ಚು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram