Sai Pallavi : ತುಂಡು ಬಟ್ಟೆ ಹಾಕೋದನ್ನ ತಪ್ಪು ಎಂದು ನಾನು ಹೇಳಲ್ಲ.. ಆದ್ರೆ
ಟಾಲಿವುಡ್ ನಲ್ಲಿ ನಟಿ ಸಾಯಿ ಪಲ್ಲವಿ ಕ್ರೇಜ್ ಕಡಿಮೆ ಏನು ಇಲ್ಲ.
ಇಂಡಸ್ಟ್ರೀ ಗೆ ಬಂದ ಅತ್ಯಂತ ಕಡಿಮೆ ಅವಧಿಯಲ್ಲಿ ಸ್ಟಾರ್ ಪಟ್ಟಕ್ಕೇರಿದ ಪಲ್ಲವಿ, ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಸದ್ಯ ಸಾಯಿ ಪಲ್ಲವಿ ವಿರಾಟ ಪರ್ವ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ಜೂನ್ 17 ರಂದು ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.
ಈ ನಡುವೆ ಸಂದರ್ಶನವೊಂದರಲ್ಲಿ ಸಾಯಿ ಪಲ್ಲವಿ ಮಾತನಾಡಿದ್ದು, ಸಾಕಷ್ಟು ಇಂಟ್ರಸ್ಟಿಂಗ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಸಂದರ್ಶನದಲ್ಲಿ ನಿರೂಪಕರು ತೆಲುವು ಚೆನ್ನಾಗಿ ಮಾತನಾಡುತ್ತೀರಾ… ತೆಲುಗು ಹುಡುಗನನ್ನು ಮದುವೆ ಆಗುತ್ತೀರಾ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಪಲ್ಲವಿ, ಕಾಲೇಜಿನಲ್ಲಿದ್ದಾಗ ನನಗೆ 23 ವರ್ಷಕ್ಕೆ ಮದುವೆ ಆಗುತ್ತದೆ.

30 ವರ್ಷ ಆಗುವಷ್ಟರಲ್ಲಿ ಇಬ್ಬರು ಮಕ್ಕಳಿರುತ್ತಾರೆ ಎಂದು ಅಂದುಕೊಂಡಿದ್ದೆ ಅಂತಾ ಹೇಳಿದರು.
ಇನ್ನು ಸಿನಮಾದಲ್ಲಿ ಗ್ಲಾಮರ್ ಶೋ ಇಲ್ಲದೇ ಸ್ಟಾರ್ ನಟಿ ಆಗಿದ್ದೀರಾ..? ಹೀರೋಯಿನ್ ಅಂದ್ರೆ ತುಂಡು ತುಂಡು ಬಟ್ಟೆ ಹಾಕಿಕೊಳ್ಳುತ್ತಾರೆ.
ನೀವು ಯಾಕೆ ಅದಕ್ಕೆ ವಿರುದ್ಧವಾಗಿದ್ದೀರಿ ಎಂದು ಪ್ರಶ್ನಿಸಿದರು.
ಇದಕ್ಕೆ ಸಾಯಿ ಪಲ್ಲವಿ, ಆ ರೀತಿ ಏನು ಇಲ್ಲ. ತುಂಡು ಬಟ್ಟೆ ತಪ್ಪು ಎಂದು ನಾನು ಹೇಳೋದಿಲ್ಲ.
ಆದ್ರೆ ಎದುರಿನ ಜನರು ನೋಡುವ ದೃಷ್ಟಿ ಬದಲಾದಾಗ ನನಗೆ ಕಾನ್ಫಿಡೆನ್ಸ್ ಬರುತ್ತದೆ ಎಂದು ಪಲ್ಲವಿ ಹೇಳಿದ್ದಾರೆ.