ಸೈಫ್ ಗೆ ಮನೆಯಲ್ಲೇ ಇದ್ರೆ ಮಕ್ಕಳ ಸಂಖ್ಯೆ ಹೆಚ್ಚಾಗುವ ಭಯವಿದ್ಯಂತೆ..!
ಮುಂಬೈ : ಬಾಲಿವುಡ್ ನ ಸ್ಟಾರ್ ಕಪಲ್ ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ದಂಪತಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ.. ಆದ್ರೆ ಕರೀನಾರನ್ನ ಮದುವೆಯಾಗುವುದಕ್ಕೂ ಮೊದಲೇ ಸೈಫ್ ಗೆ ಇಬ್ಬರು ಮಕ್ಕಳಿದ್ದರು.. ಈಗ ಸೈಫ್ ಅವರು ಒಟ್ಟು ನಾಲ್ವರು ಮಕ್ಕಳ ತಂದೆಯಾಗಿದ್ದಾರೆ.. ಆಗಾಗ ಸೈಫ್ ಅಲಿ ಖಾನ್ ಕೆಲ ವಿಚಾರಗಳಿಗೆ ಟ್ರೋಲ್ ಆಗ್ತಲೇ ಇರುತ್ತಾರೆ..
ಇದೀಗ ಸೈಫ್ ಅಲಿ ಖಾನ್ ಮತ್ತೊಮ್ಮೆ ಖಾನ್ ನೀಡಿರುವ ಹೇಳಿಕೆ ಸಖತ್ ಸುದ್ದಿಯಾಗಿದೆ. ಇದೊಂದ್ ರೀತಿ ಸುಮ್ಮನೇ ಇರಲಾರದೇ ಇರುವೆ ಬಿಟ್ಟುಕೊಂಡಿರುವವರಂತಿದೆ.. ಹೌದು ಮನೆಯಲ್ಲಿಯೇ ಇದ್ದರೆ ಇನ್ನಷ್ಟು ಮಕ್ಕಳನ್ನು ಹೊಂದುವ ಭಯವಿದೆ ಎಂದು ಸೈಫ್ ಹೇಳಿಕೊಂಡಿದ್ದಾರೆ. ಸೈಫ್ ಅಲಿಖಾನ್ ಶೋನಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ…
ಶೋನಲ್ಲಿ ಕಪಿಲ್ ಶರ್ಮಾ ಅವರು, ಈಗಾಗಲೇ 4 ಮಕ್ಕಳನ್ನು ಹೊಂದಿರುವ ನೀವು ಇನ್ನೂ ಮಕ್ಕಳನ್ನು ಪಡೆಯುವ ಒತ್ತಡ ಏನಾದರೂ ಇದೆಯೇ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಸೈಫ್, ಮನೆಯಲ್ಲಿಯೇ ಇದ್ದರೆ ಇನ್ನೊಂದಿಷ್ಟು ಮಕ್ಕಳಾಗುತ್ತವೆ ಎಂಬ ಭಯವಿದೆ ಎಂದು ತಮಾಷೆಯಾಗಿ ಹೇಳಿದ್ದಾರೆ..
ನಟ ಸೈಫ್ ಅಲಿ ಖಾನ್ ಮೊದಲು ನಟಿ ಅಮೃತಾ ಸಿಂಗ್ ಜೊತೆ ಮದುವೆಯಾಗಿದ್ದರು. ಸೈಫ್-ಅಮೃತಾ ಜೋಡಿಗೆ ಇಬ್ರಾಹಿಂ ಅಲಿ ಖಾನ್, ಸಾರಾ ಅಲಿ ಖಾನ್ ಎಂಬ ಮಕ್ಕಳಿದ್ದಾರೆ. ಸಾರಾ ಅಲಿಖಾನ್ ಸದ್ಯ ಬಾಲಿವುಡ್ ನಲ್ಲಿ ಯುವ ನಟಿಯಾಗಿ ಮಿಂಚುತ್ತಿದ್ದಾರೆ.. ನಂತರ 2012ರಲ್ಲಿ ಸೈಫ್ ಕರೀನಾ ಕಪೂರ್ ಮದುವೆಯಾದ್ರು.. ಈ ದಂಪತಿಗೆ ತೈಮೂರ್ ಅಲಿ ಖಾನ್ ಹಾಗೂ ಜೆಹಾಂಗೀರ್ ಎಂಬ ಮಕ್ಕಳಿದ್ದಾರೆ.