ಸಲಾರ್ ಫ್ಯಾನ್ಸ್ ಗೆ ಇಂದು ಸಾಲಿಡ್ ನ್ಯೂಸ್ ಕೊಟ್ಟ ಪ್ರಶಾಂತ್ ನೀಲ್..! ಯಾವಾಗ ರಿಲೀಸ್ ಗೊತ್ತಾ..?
ಕಿಂಗ್ ಮೇಕರ್ ಪ್ರಶಾಂತ್ ನೀಲ್ ಅವರು KGF ಸಿನಿಮಾದ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದಾರೆ. ಇದೀಗ ಮತ್ತೊಂದು ಹೈ ಓಲ್ಟೇಜ್ ಪ್ಯಾನ್ ಇಂಡಿಯಾ ಸಿನಿಮಾವನ್ನ ಭಾರತದ ಬಿಗ್ ಸ್ಟಾರ್ ಬಾಹುಬಲಿ ಜೊತೆಗೆ ಮಾಡುತ್ತಿದ್ದಾರೆ. ಹೌದು ಭಾರತದ ಬಿಗ್ ಸ್ಟಾರ್ ಪ್ರಭಾಸ್ ಜೊತೆಗೆ ಸಲಾರ್ ಸಿನಿಮಾ ಮಾಡ್ತಿರುವ ಪ್ರಶಾಂತ್ ನೀಲ್ ಅವರು ಇದೀಗ ಫ್ಯಾನ್ಸ್ ಗಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ. ಇಂದು ಸಿನಿಮಾದ ಬಿಗ್ ಅಪ್ ಡೇಟ್ ನೀಡೋದಾಗಿ ಇಂದು ಬೆಳಿಗ್ಗೆ ಟ್ವೀಟ್ ಮಾಡಿ ಅಭಿಮಾನಿಗಳ ಕಾತರತೆ ಹೆಚ್ಚಿಸಿದ್ದರು ಪ್ರಶಾಂತ್ ನೀಲ್. ಈಗ ಅದಕ್ಕೆ ತೆರೆಬಿದ್ದಿದ್ದು, ಸಿನಿಮಾ ಯಾವಾಗ ವರ್ಡ್ ವೈಡ್ ರಿಲೀಸ್ ಆಗುತ್ತೆ ಎನ್ನುವ ದಿನಾಂಕ ಬಹಿರಂಗಪಡಿಸಿದ್ದಾರೆ.
ಇವರೇ ನೋಡಿ ಈ ಬಾರಿ ‘ಬಿಗ್ ಬಾಸ್’ ಮನೆಗೆ ಎಂಟ್ರಿಯಾಗ್ತಿರೋರು..!
ಹೌದು ಸಲಾರ್ ಸಿನಿಮಾ ಘೋಷಣೆಯಾದಾಗಿನಿಂದಲೂ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗುತ್ತಲೇ ಇದೆ ಸಿನಿಮಾ ಯಾವಾಗ ರಿಲೀಸ್ ಎಂದು ಕಾದು ಕುಳಿತಿರುವ ಅಭಿಮಾನಿಗಳ ಕಾತರಕ್ಕೆ ಇಂದು (ಫೆ.28) ಮಧ್ಯಾಹ್ನ 3.25ಕ್ಕೆ ತೆರೆ ಬಿದ್ದಿದೆ. ಸಿನಿಮಾ 2022ರ ಏಪ್ರಿಲ್ 14ಕ್ಕೆ ವಿಶ್ವಾದ್ಯಂತ ರಿಲೀಸ್ ಆಗಲಿದೆ. ಪ್ರಶಾಂತ್ ನೀಲ್ ಸಾಮಾಜಿಕ ಜಾಲತಾಣದ ಮೂಲಕ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇನ್ನೂ ಈ ಸಿನಿಮಾಗೆ ಕೆಜಿಎಫ್ ಖ್ಯಾತಿಯ ನಿರ್ಮಾಪಕ ವಿಜಯ ಕಿರಗಂದೂರು ಅವರೇ ಬಂಡವಾಳ ಹೂಡುತ್ತಿದ್ದಾರೆ. ಸಿನಿಮಾದಲ್ಲಿ ಶೃತಿ ಹಾಸನ್ ನಾಯಕಿಯಾಗಿದ್ದಾರೆ.