ಲೇಖಕ ಸಲ್ಮಾನ್ ರಶ್ದಿ ಆರೋಗ್ಯದಲ್ಲಿ ಚೇತರಿಕೆ – ವೆಂಟಿಲೇಟರ್ ತೆಗೆಯಲಾಗಿದೆ…
ನ್ಯೂಯಾರ್ಕ್ನಲ್ಲಿ ನಡೆದ ಭೀಕರ ದಾಳಿಯ ನಂತರ, ಭಾರತೀಯ ಮೂಲದ ಬ್ರಿಟಿಷ್-ಅಮೆರಿಕನ್ ಬರಹಗಾರ ಸಲ್ಮಾನ್ ರಶ್ದಿ ಅವರ ಸ್ಥಿತಿ ಈಗ ಸುಧಾರಿಸುತ್ತಿದೆ ಎಂದು ಹೇಳಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಅವರ ವೆಂಟಿಲೇಟರ್ ತೆಗೆಯಲಾದಗಿದ್ದು ಈಗವರು ಮಾತನಾಡಬಲ್ಲರು ಎಂದು ಹೇಳಲಾಗುತ್ತಿದೆ.
ಇದೇ ವೇಳೆ ಸಲ್ಮಾನ್ ಮೇಲೆ ಹಲ್ಲೆ ನಡೆಸಿದ ಆರೋಪಿ ನ್ಯಾಯಾಲಯದಲ್ಲಿ ತಾನು ನಿರಪರಾಧಿ ಎಂದು ಹೇಳಿಕೊಂಡಿದ್ದಾನೆ.
ಶುಕ್ರವಾರ ನಡೆಯುತ್ತಿದ್ದ ಕಾರ್ಯಕ್ರಮವೊಂದರಲ್ಲಿ 24 ವರ್ಷದ ಹಾದಿ ಮಾತರ್ ರಶ್ದಿಯ ಮೇಲೆ ಹಲ್ಲೆ ನಡೆಸಿದ್ದರು. ಮಾತರ್ ಕುತ್ತಿಗೆ 10-15 ಬಾರಿ ಇರಿದಿದ್ದ. ನಂತರ ಲೇಖಕ ರಶ್ದಿಯನ್ನ ಏರ್ ಲಿಫ್ಟ್ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಾದಿ ಮರಾತರ್ ಶಿಯಾ ಉಗ್ರವಾದದ ಬಗ್ಗೆ ಸಹಾನುಭೂತಿ ಹೊಂದಿದ್ದ.
ಹಾದಿ ಮತರ್ ಮೇಲೆ ಕೊಲೆ ಯತ್ನ ಮತ್ತು ಹಲ್ಲೆ ಆರೋಪ ಹೊರಿಸಲಾಗಿದೆ. ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಆತ ಶಿಯಾ ಉಗ್ರವಾದ ಮತ್ತು ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಗೆ ಸಹಾನುಭೂತಿ ಹೊಂದಿರುವುದು ಬಹಿರಂಗವಾಗಿದೆ.
33 ವರ್ಷಗಳ ಹಿಂದೆ ಲೇಖಕ ಸಲ್ಮಾನ್ ರಶ್ದಿ, ಮುಸ್ಲಿಂ ಸಂಪ್ರದಾಯಗಳ ಮೇಲೆ ಬರೆದ ‘ದಿ ಸೈಟಾನಿಕ್ ವರ್ಸಸ್’ ಕಾದಂಬರಿ ವಿವಾದಕ್ಕೀಡಾಗಿತ್ತು. ಕಾದಂಬರಿಯಲ್ಲಿ ಪ್ರವಾದಿಯನ್ನ ಅವಮಾನಿಸಲಾಗಿದೆ ಎನ್ನಲಾಗಿತ್ತು. ಇರಾನ್ನ ಧಾರ್ಮಿಕ ಮುಖಂಡ ಅಯತೊಲ್ಲಾ ಖೊಮೇನಿ 1989 ರಲ್ಲಿ ಅವರ ವಿರುದ್ಧ ಫತ್ವಾ ಹೊರಡಿಸಿದರು. ಅದಕ್ಕೂ ದಾಳಿಯ ಸಂಬಂಧವಿದೆ. ಆದರೆ, ಈ ದಾಳಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಇರಾನ್ನ ರಾಜತಾಂತ್ರಿಕರೊಬ್ಬರು ಹೇಳಿದ್ದಾರೆ.