ಸಮಂತಾ – ಡಿಸೈನರ್ ಸಂಬಂಧ ವದಂತಿ – ಪ್ರೀತಂ ಜುಕಾಲ್ಕರ್ ಗೆ ಜೀವ ಬೆದರಿಕೆ..!
ಹೈದ್ರಾಬಾದ್ : ಟಾಲಿವುಡ್ ನ ಕ್ಯೂಟ್ ಕಪಲ್ ಆಗಿದ್ದ ನಟ ನಾಗಚೈತನ್ಯ ಹಾಗೂ ನಟಿ ಸಮಂತಾ ಡಿವೋರ್ಸ್ ಪಡೆಯುವ ಮೂಲಕ ತಮ್ಮ 4 ವರ್ಷದ ದಾಂಪತ್ಯಕ್ಕೆ , 10 ವರ್ಷಗಳ ಪ್ರೀತಿಗೆ ಎಳ್ಳು ನೀರು ಬಿಟ್ಟಿದ್ದಾರೆ. ಡಿವೋರ್ಸ್ ಗೆ ನಿಖರವಾದ ಕಾರಣಗಳು ತಿಳಿದುಬಂದಿಲ್ಲವಾದ್ರೂ ಅನೇಕ ವದಂತಿಗಳು ಹರಿದಾಡ್ತಿವೆ. ಅದ್ರಲ್ಲೂ ಸಮಂತಾ ಹಾಗೂ ಅವರ ಡಿಸೈನರ್ ಪ್ರೀತಂ ಜುಕಾಲ್ಕರ್ ನಡುವೆ ಸಂಬಂಧದ ವದಂತಿ ಹರಿದಾಡ್ತಿದೆ. ಅಲ್ಲದೇ ಇದೇ ಕಾರಣಕ್ಕೆ ಸಾಮ್ – ಚೈ ಜೋಡಿ ದೂರವಾಗಿರೋದಾಗಿ ಅಭಿಮಾನಿಗಳು ಆಕ್ರೋಶ ಹೊರಹಾಕ್ತಾಯಿದ್ದಾರೆ.
ಈ ನಡುವೆ ಪ್ರೀತಂಗೆ ಸಾಮಾಜಿಕ ಜಾಲತಾಣದಲ್ಲಿ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎನ್ನಲಾಗಿದೆ. ನಾಗಚೈತನ್ಯ ಅವರ ಅಭಿಮಾನಿಗಳು ಕೊಲೆ ಬೆದರಿಕೆ ಹಾಕುತ್ತಿದ್ದು, ಅವಹೇಳನ ಮಾಡುತ್ತಿದ್ದಾರೆ. ಇದರಿಂದ ಮಾನಸಿಕವಾಗಿ ನಾನು ಕುಗ್ಗಿದ್ದೇನೆ. ತಮ್ಮ ಅಭಿಮಾನಿಗಳಿಗೆ ಈ ರೀತಿ ಮಾಡಬೇಡಿ ಎಂದು ನಾಗಚೈತನ್ಯ ಅವರು ಸೂಚಿಸಬೇಕು ಎಂದಿದ್ದಾರೆ.
ಅಲ್ಲದೇ ಸಮಂತಾ ನನ್ನ ಸಹೋದರಿಯಂತೆ. ಅವರನ್ನು ಜೀಜಿ ಎಂದು ಕರೆಯುತ್ತೇನೆ. ಉತ್ತರ ಭಾರತದಲ್ಲಿ ಜೀಜಿ ಎಂದ್ರೆ ಸಹೋದರಿ ಎಂಬ ಅರ್ಥವಿದೆ ಎಂದಿದ್ದಾರೆ. ನಮ್ಮ ನಡುವೆ ಸಂಪರ್ಕವಿರಬಹುದು. ಆದರೆ ಅವರು ನನ್ನ ಸಹೋದರಿಯಂತೆ ಎಂದು ಸಂದರ್ಶನವೊಂದರಲ್ಲಿ ಸಮಂತಾರ ಸ್ಟೈಲಿಸ್ಟ್ ಪ್ರೀತಂ ಹೇಳಿದ್ದಾರೆ. ಸಮಂತಾ ಪ್ರೀತಂ ಜೊತೆಗೆ ಇರುವ ಕೆಲ ಫೋಟೋಗಳನ್ನ ಹಂಚಿಕೊಂಡ ಬಳಿಕವೇ ಇಂತಹ ವದಂತಿಗಳು ಹರಿದಾಡಲು ಶುರುವಾಗಿತ್ತು.