Samsung ನ ಹೊಸ Galaxy Tab A8 ಭಾರತದಲ್ಲಿ ಬಿಡುಗಡೆ
ಸ್ಯಾಮ್ಸಂಗ್ ಭಾರತದಲ್ಲಿ ಹೊಸ ಟ್ಯಾಬ್ಲೆಟ್ Samsung Galaxy Tab A8 ಅನ್ನು ಬಿಡುಗಡೆ ಮಾಡಿದೆ. ಕಳೆದ ಡಿಸೆಂಬರ್ನಲ್ಲಿ ಟ್ಯಾಬ್ ಎ8 ಅನ್ನು ಯುಎಸ್ನಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಟ್ಯಾಬ್ಲೆಟ್ 10.5 ಇಂಚಿನ TFT ಡಿಸ್ಪ್ಲೇ ಹೊಂದಿದೆ. ಕ್ವಾಡ್ ಸ್ಪೀಕರ್ ಸೆಟಪ್, 6040 mAh ಬ್ಯಾಟರಿ ಮತ್ತು 8 ಮೆಗಾಪಿಕ್ಸೆಲ್ ಕ್ಯಾಮೆರಾ, ಡಾಲ್ಬಿ ಆಟಮ್ ಬೆಂಬಲ ಹೊಂದಿದೆ.
Samsung Galaxy Tab A8 ಟ್ಯಾಬ್ಲೆಟ್ನ ಬೆಲೆ ಮತ್ತು ಲಭ್ಯತೆ
3 GB RAM ಮತ್ತು 128 GB ಮೆಮೋರಿ ಹೊಂದಿರುವ Samsung Galaxy Tab A7 ನ ಬೆಲೆ ಭಾರತದಲ್ಲಿ ಬೆಲೆ 18,999 ರೂ. ಇದೆ. ಟ್ಯಾಬ್ಲೆಟ್ ಇ-ಕಾಮರ್ಸ್ ಸೈಟ್ಗಳಾದ Amazon, Flipkart, Samsung ಇ-ರಿಸ್ಟೋರ್ ಮತ್ತು ಕಂಪನಿಯ ಆಫ್ಲೈನ್ ಸ್ಟೋರ್ನಲ್ಲಿ ಜನವರಿ 18 ರಿಂದ ಲಭ್ಯವಿರುತ್ತದೆ.
ಲಾಂಚ್ ಆಫರ್ನಲ್ಲಿ ಕಂಪನಿಯು ರೂ. 2000 ಕ್ಯಾಶ್ಬ್ಯಾಕ್ ನೀಡುತ್ತಿದೆ. ಇದರ ಜೊತೆಗೆ ಟ್ಯಾಬ್ಲೆಟ್ನ ಬ್ಯಾಕ್ ಕೆಸ್ ಸಹ ಕಡಿಮೆ ಬೆಲೆಗೆ ಲಭ್ಯವಿರುತ್ತದೆ. gray, silver and pink ಬಣ್ಣಗಳಲ್ಲಿ ಟ್ಯಾಬ್ ಆಯ್ಕೆಮಾಡಿಕೊಳ್ಳಬಹುದು.
Samsung Galaxy Tab A8 ಟ್ಯಾಬ್ಲೆಟ್ನ ವಿವರಗಳು
Samsung Galaxy Tab A6 2000 x 1200 ಪಿಕ್ಸೆಲ್ಗಳ ರೆಸಲ್ಯೂಶನ್ನೊಂದಿಗೆ 10.5-ಇಂಚಿನ WUXGA TFT ಡಿಸ್ಪ್ಲೇ ಹೊಂದಿದೆ. Mali G52 MP2 GPU ಜೊತೆಗೆ Octacore Unisok T616 ಪ್ರೊಸೆಸರ್, Samsung Galaxy Tab A6 3GB RAM ಮತ್ತು 128GB ವರೆಗಿನ ಆಂತರಿಕ ಸಂಗ್ರಹಣೆಯನ್ನು ಹೊಂದಿದೆ. ಮೈಕ್ರೋ SD ಕಾರ್ಡ್ ಮೂಲಕ 1TB ವರೆಗೆ ಮೆಮೋರಿಯನ್ನ ವಿಸ್ತರಿಸಬಹುದು. ಹೊಸ ಟ್ಯಾಬ್ ಆಂಡ್ರಾಯ್ಡ್ 11 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ.
Samsung Galaxy Tab A6 8-ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾವನ್ನು ಹೊಂದಿದೆ. ಇದು 5 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದ್ದು, ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ LED ಫ್ಲ್ಯಾಷ್ ಹೊಂದಿದೆ. ಪವರ್ ಬ್ಯಾಕಪ್ಗಾಗಿ, Galaxy Tab A6 6040 mAh ಬ್ಯಾಟರಿಯನ್ನು ಹೊಂದಿದ್ದು 15 ವ್ಯಾಟ್ ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ.
ಟ್ಯಾಬ್ಲೆಟ್ನ ಸಂಪರ್ಕ ಆಯ್ಕೆಗಳಲ್ಲಿ 4G ಲೈಟ್, ವೈಫೈ 802.11ac, ವೈಫೈ ಡೈರೆಕ್ಟ್, ಬ್ಲೂಟೂತ್ 5LE, ಜಿಪಿಎಸ್ ಗ್ಲೋನಾಸ್ ಮತ್ತು ಯುಎಸ್ಬಿ 2.0 ಟೈಪ್ ಸಿ ಪೋರ್ಟ್ ಸೇರಿವೆ. ಅಂತಿಮವಾಗಿ, ಟ್ಯಾಬ್ಲೆಟ್ 506 ಗ್ರಾಂ ತೂಗುತ್ತದೆ ಮತ್ತು 246.6 x 181.9 x 6.9 ಮಿಮೀ ಅಳತೆಗಳನ್ನು ಹೊಂದಿದೆ.