ಡ್ರಗ್ಸ್ ಕೇಸ್ ನಲ್ಲಿ ಸಿಲುಕಿದ್ದ ನಟಿ ಸಂಜನಾ ಗಲ್ರಾನಿ ಅವರು ಈಗ ತನ್ನ ಆಪ್ತ ಸ್ನೇಹಿತನ ವಿರುದ್ಧವೇ ದೂರು ದಾಖಲಿಸಿದ್ದಾರೆ.
ಹಣಕಾಸಿನ ವಿಚಾರದಲ್ಲಿ ಸಂಜನಾ ಅವರು ತನ್ನ ಸ್ನೇಹಿತ ರಾಹುಲ್ ಥೋನ್ಸೆ ಸೇರಿದಂತೆ ರಾಮಕೃಷ್ಣ ಮತ್ತು ರಾಗೇಶ್ವರಿ ವಿರುದ್ಧ ದೂರು ದಾಖಲಿಸಿದ್ದರು. ದೂರಿನ ಅರ್ಜಿಯನ್ನು ವಿಚಾರಣೆ ನಡೆಸಿದ್ದ ನ್ಯಾಯಾಲಯವು ವಿಚಾರಣೆ ನಡೆಸುವಂತೆ ಇಂದಿರಾನಗರ ಪೋಲಿಸ್ ಠಾಣೆಗೆ ಸೂಚನೆ ನೀಡಿದೆ.
ಮೂರು ವರ್ಷಗಳ ಹಿಂದೆ ಸಂಜನಾ ಗಲ್ರಾನಿ ಅವರು ರಾಹುಲ್ ಥೋನ್ಸೆ, ರಾಮಕೃಷ್ಣ ಮತ್ತು ರಾಗೇಶ್ವರಿ ಅವರಿಗೆ ದುಡ್ಡು ನೀಡಿದ್ದರು. ಕೊಲೊಂಬೊ ಮತ್ತು ಗೋವಾದ ಕ್ಯಾಸಿನೊಗಳಲ್ಲಿ ರಾಹುಲ್ ಥೋನ್ಸೆ ಮೂಲಕ ಹಣ ಹೂಡಿಕೆ ಮಾಡಿದ್ದರು. ಆದ್ರೆ ರಾಹುಲ್ ಲಾಭದ ಹಣವನ್ನು ಬಿಡಿ ಕೊಟ್ಟ ಹಣವನ್ನೇ ನೀಡುತ್ತಿಲ್ಲ. ಹೀಗಾಗಿ ಸಂಜನಾ ಗಲ್ರಾನಿ ಈಗ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಒಟ್ಟಿನಲ್ಲಿ ಸಂಜನಾ ಗಲ್ರಾನಿ ಅವರಿಗೆ ಒಂದಲ್ಲ ಒಂದು ತೊಂದರೆಗಳು ಎದುರಾಗುತ್ತನೇ ಇದೆ. ಅಲ್ಲದೆ ಆಪ್ತ ಸ್ನೇಹಿತರಿಂದಲೇ ಸಂಜನಾ ಅವರಿಗೆ ವಂಚನೆಯಾಗುತ್ತಿದೆ.
‘ನಾನು ಹೈದರಾಬಾದ್ನವಳು’: ಕರ್ನಾಟಕದವಳು ಅನ್ನೋಕೆ ಅಷ್ಟೊಂದು ಅವಮಾನವೇ?; Rashmika Mandanna ವಿರುದ್ಧ ನೆಟ್ಟಿಗರು ಫುಲ್ ಗರಂ
ರಶ್ಮಿಕಾ ಮಂದಣ್ಣ ಅವರು ಹೈದರಾಬಾದ್ನವರು ಎಂದು ಹೇಳಿಕೊಂಡಿದ್ದಕ್ಕೆ ಕರ್ನಾಟಕದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಅವಮಾನಕರ ಎಂದು ಅನೇಕರು ಭಾವಿಸಿದ್ದಾರೆ. ಕರ್ನಾಟಕದ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಜನಿಸಿದ...