ಕರುನಾಡಿನಲ್ಲಿ ಮಕರ ಸಂಕ್ರಾಂತಿಯನ್ನು ಈ ಹಿಂದಿನಿಂದಲೂ ಬಹಳ ವಿಜೃಂಭಣೆಯಿಂದ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಆದರೆ, ಈ ಅವಧಿಯಲ್ಲಿ ಶಾಲೆಗಳಿಗೆ ದೀರ್ಘಾವಧಿಯ ರಜೆಯನ್ನು ಸರ್ಕಾರ ನೀಡುವುದಿಲ್ಲ. ಒಂದೇ ಒಂದು ದಿನ ಅಂದರೆ ಜನವರಿ 14 ರಂದು ಮಾತ್ರ ಸರ್ಕಾರಿ ರಜೆ ಇರುತ್ತದೆ. ಆದರೆ, ತೆಲಂಗಾಣ ಮತ್ತು ಆಂಧ್ರ ಪ್ರದೇಶ ಈ ರಾಜ್ಯಗಳಲ್ಲಿ ಒಂದೊಂದು ವಾರ ರಜೆ ನೀಡಲಾಗುತ್ತದೆ. ತೆಲಂಗಾಣದಲ್ಲಿ ಈ ತಿಂಗಳ 11 ರಿಂದ 17, ಆಂಧ್ರದಲ್ಲಿ ಈ ತಿಂಗಳ 10 ರಿಂದ 19ರವರೆಗೂ ರಜೆ ಘೋಷಿಸಲಾಗಿದೆ ಎಂದು ತಿಳಿದುಬಂದಿದೆ.
ಟೋಲ್ ಶುಲ್ಕ ಬಾಕಿ ವಾಹನಗಳಿಗೆ ಬ್ರೇಕ್! ಕೇಂದ್ರದಿಂದ ಕಠಿಣ ನಿಯಮ ಜಾರಿ
ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಪಾವತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ ಟೋಲ್ ಶುಲ್ಕ ಬಾಕಿ ಇರುವ ವಾಹನಗಳು ವಾಹನ ಮಾಲೀಕತ್ವಕ್ಕೆ...








