BJP | ಅನೈತಿಕ ಹಾಗೂ ಭ್ರಷ್ಟತೆಯೇ ಕಾಂಗ್ರೆಸ್ ಪಕ್ಷದ ಜೀವಾಳ

1 min read
Congress padayatre bjp vs congress tweet war saaksha tv

BJP | ಅನೈತಿಕ ಹಾಗೂ ಭ್ರಷ್ಟತೆಯೇ ಕಾಂಗ್ರೆಸ್ ಪಕ್ಷದ ಜೀವಾಳ

ಬೆಂಗಳೂರು : ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ – ಬಿಜೆಪಿ ನಡುವೆ ಯುದ್ದ ಆರಂಭವಾಗಿದ್ದು, ಟ್ವಿಟ್ಟರ್ ನಲ್ಲಿ ನೈತಿಕತೆ ಸಮರ ಶುರುವಾಗಿದೆ.

ಟ್ವಿಟ್ಟರ್ ನಲ್ಲಿ ಕಾಂಗ್ರೆಸ್ ವಿರುದ್ಧ ರಾಜ್ಯ ಬಿಜೆಪಿ ನೈತಿಕತೆ ಯುದ್ಧ ಆರಂಭಿಸಿದ್ದು, ಸರಣಿ ಟ್ವೀಟ್ ಗಳನ್ನು ಮಾಡಿ ಕುಟುಕಿದೆ.

ಬಿಜೆಪಿ ತನ್ನ ಟ್ವೀಟ್ಟರ್ ನಲ್ಲಿ..

ನೈತಿಕತೆ ಎಂಬುದು ಕಾಂಗ್ರೆಸ್ ಡಿಎನ್‌ಎಯಲ್ಲೇ ಇಲ್ಲ. ಅನೈತಿಕ ಹಾಗೂ ಭ್ರಷ್ಟತೆಯೇ ಕಾಂಗ್ರೆಸ್ ಪಕ್ಷದ ಜೀವಾಳ.

ನೈತಿಕತೆ ತ್ಯಜಿಸಿದ ಕಾಂಗ್ರೆಸ್ ರಾಜಕಾರಣಿಗಳ ಪಟ್ಟಿ ಇಲ್ಲಿದೆ.

√ಸೋನಿಯಾ ಗಾಂಧಿ

√ ರಾಹುಲ್ ಗಾಂಧಿ

√ ಮಲ್ಲಿಕಾರ್ಜುನ ಖರ್ಗೆ

√ ಸಿದ್ದರಾಮಯ್ಯ

√ ಡಿ.ಕೆ. ಶಿವಕುಮಾರ್

√ ಎಂ.ಬಿ. ಪಾಟೀಲ್

√ ಜಮೀರ್ ಅಹ್ಮದ್ ಖಾನ್

√ ಕೆ.ಜೆ. ಜಾರ್ಜ್

√ ವಿನಯ್ ಕುಲಕರ್ಣಿ

√ ಆರ್.ವಿ. ದೇಶಪಾಂಡೆ,

√ ಬಿ.ಕೆ. ಹರಿಪ್ರಸಾದ್ ಎಂದು ಕಾಂಗ್ರೆಸ್ ನಾಯಕರ ಹೆಸರುಗಳನ್ನು ಉಲ್ಲೇಖಿಸಿದ್ದಾರೆ.  

ದೇಶಕ್ಕೆ ನೈತಿಕತೆಯ ಪಾಠ ಮಾಡುವ ಕಾಂಗ್ರೆಸ್ ಪಕ್ಷದ ನಡುಮನೆಯಲ್ಲೇ ಅನೈತಿಕತೆಯ ಬಿರುಮಳೆ ಸುರಿಯುತ್ತಿದೆ.ನ್ಯಾಶನಲ್ ಹೆರಾಲ್ಡ್ ಪ್ರಕರಣದಲ್ಲಿ ಪಕ್ಷವನ್ನೇ ದೋಚಿ ಬೇಲ್ ಮೇಲೆ ಅಲೆದಾಡುತ್ತಿರುವ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದೆ.

santhosh death case bjp vs congress Morality war  saaksha tv

ರಾಜ್ಯಸಭೆಯ ಕಾಂಗ್ರೆಸ್ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಅಕ್ರಮ ಸಂಪತ್ತಿನ ಬಗ್ಗೆ ಮಾತನಾಡಲು ಹೊರಟರೆ ಅದೊಂದು ಮೆಗಾ ಧಾರವಾಹಿಯಾಗಬಹುದು!!!ನ್ಯಾಶನಲ್ ಹೆರಾಲ್ಡ್ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿರುವ ಖರ್ಗೆ ಅವರಿಗೆ ರಾಜ್ಯಸಭಾ ವಿಪಕ್ಷ ನಾಯಕನಾಗಿ ಮುಂದುವರಿಯಲು ನೈತಿಕತೆ ಕಾಡುವುದಿಲ್ಲವೇ?

ಕೊಲೆಗಾರನಿಗೆ ಕೊಲ್ಲುವ ಉದ್ದೇಶವಿರಲಿಲ್ಲ ಎಂದು ಚಾಕು ಹಿಡಿದವನ ಪರವಾಗಿ ಮಾತನಾಡಿದ್ದ ಝಮೀರ್ ಅಹಮದ್ ಅವರಿಗೆ ನೈತಿಕತೆ ಇರಲಿ, ಕನಿಷ್ಠ ಮಾನವೀಯತೆಯಾದರೂ ಇದೆಯೇ? 

ಕೆಂಗಲ್ ಹನುಮಂತಯ್ಯ, ನಿಜಲಿಂಗಪ್ಪ, ದೇವರಾಜ್ ಅರಸು, ರಾಮಕೃಷ್ ಹೆಗಡೆಯವರಂಥ ನಾಯಕರು ಕುಳಿತ ಜಾಗದಲ್ಲಿ “ಕದ್ದ ವಾಚು ಕಟ್ಟಿ” ಮೆರೆಯುವಾಗ ಸಿದ್ದರಾಮಯ್ಯ ಅವರಿಗೆ ನೈತಿಕತೆಯ ಪ್ರಶ್ನೆ ಮರೆತು ಹೋಗಿತ್ತೇ?ಅರ್ಕಾವತಿ ರೀಡು ಪ್ರಕರಣದಲ್ಲಿ ನೂರಾರು ಕೋಟಿ ನುಂಗಿದಾಗ ಎಲ್ಲಿ ಅಡಗಿತ್ತೋ ಆ ನಿಮ್ಮ ಶೌರ್ಯ?

ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ತನಿಖೆ ಅತ್ಯಂತ ನಿಷ್ಪಕ್ಷಪಾತವಾಗಿ ನಡೆಯುತ್ತಿದೆ.ಇದಕ್ಕಾಗಿ ಪ್ರತ್ಯೇಕ ತಂಡ ರಚನೆ ಮಾಡಲಾಗಿದೆ. ನೈತಿಕ ಹೊಣೆ ಹೊತ್ತು ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದ್ದಾರೆ.ಆದರೆ ಇಂಥ ನೈತಿಕ ವಿಚಾರಗಳ ಪ್ರಶ್ನೆ ಬಂದಾಗ ಕಾಂಗ್ರೆಸ್ ನಡೆದುಕೊಂಡ ರೀತಿಯನ್ನು ನೆನಪಿಸಬೇಕೇ?

ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಕೆ.ಜೆ.ಜಾರ್ಜ್ ಅವರೇ ತನ್ನ ಸಾವಿಗೆ ಕಾರಣ ಎಂದು ಡಿವೈಎಸ್ಪಿ ಗಣಪತಿ ವಿಡಿಯೋ ಹೇಳಿಕೆ ನೀಡಿ ಆತ್ಮಹತ್ಯೆ ಮಾಡಿಕೊಂಡರು.ಆಗ ಇದೇ ಸಿದ್ದರಾಮಯ್ಯ ಅವರು ಆರೋಪಿ ಸಚಿವರನ್ನು ಸಮರ್ಥಿಸಿಕೊಂಡಿದ್ದರು. ಸಿದ್ದರಾಮಯ್ಯನವರೇ, ಈಗ ಸದಾರಮೆ ನಾಟಕವೇಕೆ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದೆ. santhosh death case bjp vs congress Morality war

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd