sanya iyer : ಶೆಟ್ಟಿ ವಧು ಧರಿಸುವ ಒಡ್ಡಿ ಉಂಗುರ ಸಾನ್ಯ ಅಯ್ಯರ್ ಬೆರಳಲ್ಲಿ…..
ಬಿಗ್ ಬಾಸ್ ಒಟಿಟಿ ಹಾಗೂ ಸೀಸನ್ 9 ರಲ್ಲಿ ಸಿಕ್ಕಾಪಟ್ಟೆ ಹೈಲೇಟ್ ಆದ ಜೋಡಿ ಎಂದ್ರೆ ಸಾನ್ಯಾ ಐಯರ್ ಹಾಗೂ ರೂಪೇಶ್ ಶೆಟ್ಟಿ.. ಸದಾ ಇಬ್ಬರೂ ಒಟ್ಟಿಗೆ ಇರುತ್ತಿದ್ದರು.. ಇಬ್ಬರ ಆತ್ಮೀಯತೆ ನೋಡಿದ್ರೆ ಇವರಿಬ್ಬರ ನಡುವೆ ಪ್ರೀತಿ ಪ್ರೇಮದ ಗಾಸಿಪ್ ಹಬ್ಬಿತ್ತು..
ಇದೀಗ ರೂಪೇಶ್ ಸಾನ್ಯಾ ಮದುವೆ ಸುದ್ದಿ ಭಾರೀ ಸೌಂಡ್ ಮಾಡ್ತಿದೆ.. ಇದಕ್ಕೆ ಕಾರಣವೇ ಸಾನ್ಯಾ ಐಯರ್ ಧರಿಸಿರುವ ಾ ಒಂದು ಉಂಗುರ..
ಇದೊಂದು ವಿಶೇಷವಾದ ಉಂಗುರ .. ಸುಂದರವಾಗಿ ಗುಲಾಬಿ ಬಣ್ಣದ ಸೀರೆಯುಟ್ಟು ಫೋಟೋ ಶೂಟ್ ಮಾಡಿಸಿರುವ ಸಾನ್ಯಾ ಅವರು ತಮ್ಮ ಕೈಯಲ್ಲಿ ಶೆಟ್ಟಿ ವಧು ಧರಿಸುರವ ಒಡ್ಡಿ ಉಂಗುರ ಅಥವ ಒಡ್ಡುಂಗಿಲ ಧರಿಸಿದ್ದಾರೆ…
ಇದು ಶೆಟ್ಟಿ ಸಂಪ್ರದಾಯದ ವಿವಾಹಿತ ಮಹಿಳೆಯರು ಧರಿಸುವ ಉಂಗುರವಾಗಿದೆ..
ಕರ್ನಾಟಕ ಕರಾವಳಿ ಭಾಗದ ವಿಶೇಷವಾಗಿ ಮಂಗಳೂರು, ದಕ್ಷಿಣ ಕನ್ನಡ ಭಾಗದಲ್ಲಿ ಶೆಟ್ಟಿ ಸಂಪ್ರದಾಯದಲ್ಲಿ ವಿವಾಹಿತ ಮಹಿಳೆಯರು ಈ ಉಂಗುರ ಧರಿಸುತ್ತಾರೆ. ಕರಿಮಣಿ ಸರದಂತೆಯೇ ವಿವಾಹವಾಗಿರೋ ಸೂಚನೆ ಕೊಡುವ ಆಭರಣ ಇದಾಗಿದೆ.
ಈಗ ಸಾನ್ಯಾ ಐಯ್ಯರ್ ಬೆರಳಲ್ಲಿ ಈ ಉಂಗುರ ಕಾಣಿಸಿಕೊಂಡಿದ್ದು ನಟಿ ಕದ್ದುಮುಚ್ಚಿ ಮದುವೆಯಾಗಿದ್ದಾರಾ ಎಂದು ನೆಟ್ಟಿಗರು ಚರ್ಚಿಸುತ್ತಿದ್ದಾರೆ.
Sanya Iyer: Shetty bride wears Oddi ring on Sanya Iyer’s finger….