ADVERTISEMENT
Monday, November 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಸಾಹುಕಾರ್‌ಗೆ ಬಹುಪರಾಕ್‌ ! ಸತೀಶ್‌ಗೆ ಕೈ ಅಧ್ಯಕ್ಷ ಪಟ್ಟ !? ಸಾಹುಕಾರ್‌ 6 ಶಕ್ತಿಗಳ ರಹಸ್ಯ!

Satish to Become KPCC President!?

Shwetha by Shwetha
February 12, 2025
in ರಾಜ್ಯ, Newsbeat, Politics, ರಾಜಕೀಯ
Share on FacebookShare on TwitterShare on WhatsappShare on Telegram

ಬ್ರೇಕಿಂಗ್‌ ನ್ಯೂಸ್‌.. ಬ್ರೇಕಿಂಗ್‌ ನ್ಯೂಸ್‌.. ಬ್ರೇಕಿಂಗ್‌ ನ್ಯೂಸ್‌.. ಇದು ರಾಜ್ಯ ಕಾಂಗ್ರೆಸ್‌ ಗೆ ಸಂಬಂಧಪಟ್ಟ ಅತಿದೊಡ್ಡ ಬ್ರೇಕಿಂಗ್‌ ನ್ಯೂಸ್‌.. ಇದು ಅಂತೆ ಕಂತೆ ಸಂತೆಗಳ ಕಹಾನಿ ಅಲ್ಲ… ಗಾಳಿಯಲ್ಲಿ ಗುಂಡು ಹೊಡೆಯೋ ಕಥೆನೂ ಅಲ್ಲ.. ಇದು ಪಕ್ಕಾ ಸುದ್ದಿ.. ಪಕ್ಕಾ ಆಗೋ ಗ್ಯಾರಂಟಿ ಸುದ್ದಿ.. ಸಾಕ್‌ ನಿಲ್ಲೀಸ್ರೀ… ಮೊದಲು ಮ್ಯಾಟರ್‌ ಹೇಳ್ರಿ ಅಂತೀರಾ.. ಹಾಗಾದ್ರೆ ಕೇಳಿ.. ರಾಜ್ಯ ಕಾಂಗ್ರೆಸ್‌ನಲ್ಲಿ ಅತೀ ಶೀಘ್ರದಲ್ಲಿ ಬದಲಾವಣೆ ಆಗಲಿದೆ.. ಅದು ಕೂಡ ಯಾವ್ದೋ ಸಣ್ಣ ಪುಟ್ಟ ಬದಲಾವಣೆ ಅಲ್ಲ.. ಡೈರೆಕ್ಟರ್‌ ಆಗಿ ಅಧ್ಯಕ್ಷರ ಬದಲಾವಣೆ.. ಹೀಗಂತ ನಾವ್‌ ಹೇಳ್ತಿಲ್ಲ.. ಬದಲಿಗೆ ಸ್ವತಃ ಕೆಪಿಸಿಸಿ ಕಚೇರಿಯ ಮೊಗಸಾಲೆಯಲ್ಲೇ ಪ್ರತಿಧ್ವನಿಸ್ತಾ ಇರೋ ಮಾತು.. ಓಹ್‌ ಹಾಗಾ..? ಹಾಗಾದ್ರೆ ಬದಲಾವಣೆ ಯಾವಾಗ್‌ ಆಗುತ್ತೆ..? ಹೊಸ ಅಧ್ಯಕ್ಷರು ಯಾರು..? ಅಂತೀರಾ.. ನೋಡಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಇದ್ಯಲ್ಲ.. ಇದು ನೂರಕ್ಕೆ ನೂರು ಪರ್ಸೆಂಟ್‌ ಆಗೇ ಆಗುತ್ತೆ.. ಅದು ಕೂಡ ಅತೀ ಶೀಘ್ರದಲ್ಲಿ.. ಸದ್ಯ ಡಿ.ಕೆ.ಶಿವಕುಮಾರ್‌ ಅಧ್ಯಕ್ಷರಾಗಿದ್ದಾರೆ.. ಅವ್ರನ್ನ ಕೆಳಗಿಳಿಸಬೇಕು ಅಂತಾ ಅಹಿಂದ ನಾಯಕರು ಪ್ರಯತ್ನಿಸ್ತಿರೋದು ರಹಸ್ಯವಾಗಿ ಏನಿಲ್ಲ.. ಟೈಂ ಸಿಕ್ಕಾಗಲೆಲ್ಲಾ ಅಧ್ಯಕ್ಷರ ಬದಲಾವಣೆ ಬಗ್ಗೆ ಹೇಳಿಕೆಗಳನ್ನ ಕೊಡ್ತಾನೇ ಇದ್ದಾರೆ.. ಅದರಲ್ಲೂ ಮುಖ್ಯವಾಗಿ ಡಾ.ಜಿ.ಪರಮೇಶ್ವರ್‌, ಕೆ.ಎನ್.ರಾಜಣ್ಣ, ಹೆಚ್.ಸಿ.ಮಹದೇವಪ್ಪ, ಸತೀಶ್‌ ಜಾರಕಿಹೊಳಿ.. ಈ ನಾಲ್ವರ ಗುಂಪು ಶತಾಯಗತಾಯ ಅಧ್ಯಕ್ಷರ ಬದಲಾವಣೆಗೆ ಪಟ್ಟು ಹಿಡಿದಿದೆ.. ಹೈಕಮಾಂಡ್‌ ಮಟ್ಟದಲ್ಲೂ ಕೂಡ ಇದ್ರ ಬಗ್ಗೆ ಚರ್ಚೆ ನಡೀತಾ ಇದೆ.. ಯಾಕಂದ್ರೆ ಇದೇ ಹೈಕಮಾಂಡ್‌, ಡಿಕೆಶಿ ಅಧ್ಯಕ್ಷ ಸ್ಥಾನದ Validity ಬಗ್ಗೆ ಮಾತನಾಡಿತ್ತು. ಅದು ಕೂಡ ಬಹಿರಂಗವಾಗಿ ಒಂದು ನೋಟ್‌ ಪಾಸ್‌ ಮಾಡಿಬಿಟ್ಟಿದೆ.. 2024ರ ಲೋಕಸಭಾ ಚುನಾವಣೆವರೆಗೂ ಡಿ.ಕೆ.ಶಿವಕುಮಾರ್‌ ಅಧ್ಯಕ್ಷರಾಗಿರ್ತಾರೆ ಅಂತಾ ಹೈಕಮಾಂಡ್‌ ಹೇಳಿತ್ತು.. ಈಗ ಎಲೆಕ್ಷನ್‌ ಮುಗಿದಿದೆ.. ಎಲ್ಲವೂ ಆಗಿದೆ.. ಈಗ ಸ್ವತಃ ಹೈಕಮಾಂಡ್‌ ಕೂಡ ಅಧ್ಯಕ್ಷರ ಬದಲಾವಣೆ ಬಗ್ಗೆ ಚಿಂತೆ ಮಾಡ್ತಿದೆ.. ಇದಲ್ಲದೇ ಸ್ವತಃ ಡಿ.ಕೆ.ಶಿವಕುಮಾರ್‌ ಅವರಿಗೂ ತಾವು ಹೆಚ್ಚು ದಿನ ಅಧ್ಯಕ್ಷರಾಗಿ ಇರಲ್ಲ ಅನ್ನೋದು ಗೊತ್ತಿದೆ.. ಇದೇ ಕಾರಣಕ್ಕೆ ಅವ್ರು ಪದೇ ಪದೇ ಅಧ್ಯಕ್ಷರಾಗಿ ನಾನ್‌ ಇರ್ತೀನೋ.. ಇಲ್ವೋ ಅನ್ನೋ ಮಾತಾಡ್ತಿರ್ತಾರೆ.. ಅಲ್ಲಿಗೆ ಕೆಪಿಸಿಸಿ ಅಧ್ಯಕ್ಷರು ಬದಲಾಗೋದು ಪಕ್ಕಾ.. ಹಾಗಾದ್ರೆ ಮುಂದಿನ ಸಾರಥಿ ಯಾರು.. ಯಾಕೆ..? ಅನ್ನೋ ಪ್ರಶ್ನೆಗಳು ಮೊಳಕೆ ಹೊಡೆಯುತ್ವೆ.. ಅದಕ್ಕೆ ಉತ್ತರ ಕೂಡ ಇದೆ.. ಮುಂದಿನ ಕಾಂಗ್ರೆಸ್‌ ಸಾರಥಿ ಯಾರು… ಅಂದ್ರೆ ಅದಕ್ಕೆ ಥಟ್‌ ಅಂತಾ ಹೊಡೆಯೋ ಹೆಸರು ಬೆಳಗಾವಿಯ ಸಾಹುಕಾರ್‌, ಸೈಲೆಂಟ್‌ ಮ್ಯಾನ್‌ ಸತೀಶ್‌ ಜಾರಕಿಹೊಳಿ..

ಹೌದು..! ಬೆಳಗಾವಿಯ ಸಾಹುಕಾರ್ರು.. ರಾಜ್ಯ ರಾಜಕಾರಣದ ಸೈಲೆಂಟ್‌ ಮ್ಯಾನ್‌.. ಸತೀಶ್‌ ಜಾರಕಿಹೊಳಿ ಸೈಲೆಂಟ್‌ ಆಗಿಯೇ ಸಿಡಿದಿದ್ದಾರೆ.. ಇಷ್ಟು ದಿನಗಳ ಕಾಲ ತೆರೆಮರೆಯಲ್ಲಿ ನಡೆಯುತ್ತಿದ್ದ ಕಸರತ್ತು ಇದೀಗ ಬೀದಿಗೆ ಬಂದಿದೆ.. ಬಹಿರಂಗವಾಗಿಯೇ ಅಧ್ಯಕ್ಷ ಸ್ಥಾನಕ್ಕೆ ಪ್ರಯತ್ನಿಸ್ತಿದ್ದಾರೆ. ಕರೆಕ್ಟಾಗಿ ಮೂರು ತಿಂಗಳ ಹಿಂದೆ ಸತೀಶ್‌ ಜಾರಕಿಹೊಳಿ ಸಿಕ್ಕಾಪಟ್ಟೆ ಆಕ್ಟೀವ್‌ ಆಗಿದ್ರು.. ಸಂಜೆಯಾದ್ರೆ ಸಾಕು ಆ ನಾಯಕನ ಭೇಟಿ.. ಈ ನಾಯಕರ ಭೇಟಿ ಅಂತಾ ಸದ್ದು ಮಾಡಿದ್ರು.. ಅಲ್ಲದೇ ಡೈರೆಕ್ಟ್‌ ಆಗಿ ದೆಹಲಿಯಲ್ಲಿ ಕಾಣಿಸಿಕೊಂಡು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆನ ಭೇಟಿ ಮಾಡಿ ಸದ್ದು ಮಾಡಿದ್ರು.. ಆಗ ಸತೀಶ್‌ ಜಾರಕಿಹೊಳಿ ವೇಗ ನೋಡಿದ ಎಲ್ರೂ, ಅವ್ರು ಸಿಎಂ ಕುರ್ಚಿಗೆ ಗುರಿ ಇಟ್ಟಿದ್ದಾರೆ ಎಂತಾ ಅಂದಾಜು ಮಾಡಿದ್ರು.. ಆದ್ರೆ ಅಲ್ಲಿ ಚರ್ಚೆ ನಡೆದಿದ್ದೇ ಬೇರೆ.. ಅದುವೇ ಕಾಂಗ್ರೆಸ್‌ ಅಧ್ಯಕ್ಷರ ಸ್ಥಾನದ ಬಗ್ಗೆ..

Related posts

ರಾಜ್ಯದ ಕೈಗಾರಿಕಾ ಕಾರ್ಮಿಕರಿಗೆ ಬಂಪರ್ ಸಿಹಿಸುದ್ದಿ: ಇನ್ನು ಫ್ಯಾಕ್ಟರಿ ಪಕ್ಕದಲ್ಲೇ ಸುಸಜ್ಜಿತ ಸೂರು, ನೂತನ ಶ್ರಮಿಕ್ ನಿವಾಸ್ ನೀತಿಯಡಿ ಮೊದಲ ಹಂತದಲ್ಲಿ 30 ಸಾವಿರ ಮನೆಗಳ ನಿರ್ಮಾಣ!

ರಾಜ್ಯದ ಕೈಗಾರಿಕಾ ಕಾರ್ಮಿಕರಿಗೆ ಬಂಪರ್ ಸಿಹಿಸುದ್ದಿ: ಇನ್ನು ಫ್ಯಾಕ್ಟರಿ ಪಕ್ಕದಲ್ಲೇ ಸುಸಜ್ಜಿತ ಸೂರು, ನೂತನ ಶ್ರಮಿಕ್ ನಿವಾಸ್ ನೀತಿಯಡಿ ಮೊದಲ ಹಂತದಲ್ಲಿ 30 ಸಾವಿರ ಮನೆಗಳ ನಿರ್ಮಾಣ!

November 16, 2026
ನಾನು ಡಿಕೆಶಿ ಶಿಷ್ಯ, ಅವರು ಸಿಎಂ ಆಗಲಿ ಎಂದು ಆಸೆಪಟ್ಟಿದ್ದೆ,ಆದರೆ ನಾನು ನೋಡಿದ್ದ ಅವರ ಘರ್ಜನೆಯೇ ಬೇರೆ, ಈಗಿನವರೇ ಬೇರೆ:ಡಿಕೆಶಿ ಅವರಿಗೆ ಕೆಲಸ ಮಾಡಲು ಆಗುತ್ತಿಲ್ಲವೇ, ಅನುದಾನ ಇಲ್ಲವೇ ಅಥವಾ ಕೆಲಸ ಮಾಡಲು ಬಿಡುತ್ತಿಲ್ಲವೇ?- ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ಬೇಸರ!

ನಾನು ಡಿಕೆಶಿ ಶಿಷ್ಯ, ಅವರು ಸಿಎಂ ಆಗಲಿ ಎಂದು ಆಸೆಪಟ್ಟಿದ್ದೆ,ಆದರೆ ನಾನು ನೋಡಿದ್ದ ಅವರ ಘರ್ಜನೆಯೇ ಬೇರೆ, ಈಗಿನವರೇ ಬೇರೆ:ಡಿಕೆಶಿ ಅವರಿಗೆ ಕೆಲಸ ಮಾಡಲು ಆಗುತ್ತಿಲ್ಲವೇ, ಅನುದಾನ ಇಲ್ಲವೇ ಅಥವಾ ಕೆಲಸ ಮಾಡಲು ಬಿಡುತ್ತಿಲ್ಲವೇ?- ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ಬೇಸರ!

November 16, 2026

ನಾವು ಈ ಹಿಂದಿನ ವಿಡಿಯೋಗಳಲ್ಲಿ ಸತೀಶ್‌ ಜಾರಕಿಹೊಳಿಯ ನಡೆ, ನುಡಿ ಅವ್ರ ಗುರಿ ಎಲ್ಲವುಗಳ ಬಗ್ಗೆ ಕುಲಂಕುಶವಾಗಿ ಮಾತನಾಡಿದ್ದೀವಿ.. ಈಗ ಅವ್ರ ತಾಕತ್ತಿನ ಬಗ್ಗೆ ಮಾತನಾಡೋಣ.. ಕಾಂಗ್ರೆಸ್‌ ಹೈಕಮಾಂಡ್‌ ಯಾಕೆ, ಸತೀಶ್‌ ಜಾರಕಿಹೊಳಿಗೆ ಪಟ್ಟ ಕಟ್ಟಲು ಮುಂದಾಗಿದೆ.. ಸತೀಶ್‌ ಜಾರಕಿಹೊಳಿಗಿರೋ ಆರು ಶಕ್ತಿಗಳ ಬಗ್ಗೆ ಮಾತನಾಡೋಣ

ಶಕ್ತಿ ನಂಬರ್‌ 1
ಸಾಹುಕಾರ್‌ಗೆ 48 ಶಾಸಕರ ಬೆಂಬಲ
ಹೌದು, ಸತೀಶ್‌ ಜಾರಕಿಹೊಳಿಗೆ ಎಸ್‌ ಟಿ ಸಮುದಾಯದ 15 ಶಾಸಕರು ಬೆಂಬಲವಾಗಿ ನಿಂತಿದ್ದಾರೆ. ಇದಕ್ಕೆ ಕಾರಣ ಎಲೆಕ್ಷನ್‌ ಸಂದರ್ಭದಲ್ಲಿ ಸತೀಶ್‌, ಮಾಡಿರುವ ಸಹಾಯ.. ಜೊತೆಗೆ ಸತೀಶ್‌ ನಾಯಕತ್ವವನ್ನ ಈ ಎಲ್ಲರೂ ಒಪ್ಪುತ್ತಾರೆ.. ಇದಿಷ್ಟೇ ಅಲ್ಲ, 35ಕ್ಕೂ ಅಧಿಕ ಅಹಿಂದ ಶಾಸಕರ ದಂಡು ಕೂಡ ಸತೀಶ್‌ ಹಿಂದೆ ನಿಂತಿದೆ.. ಮುಖ್ಯವಾಗಿ ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕ ಈ ಮೂರು ಭಾಗದಲ್ಲೂ ಸತೀಶ್‌ ಜಾರಕಿಹೊಳಿ ತಮ್ಮ ಸಮಾಜಮುಖಿ ಸೇವೆ ಜೊತೆಗೆ ವಾಲ್ಮೀಕಿ ಸಮುದಾಯದ ನಾಯಕರ ಸಂಪರ್ಕದ ಕಾರಣಕ್ಕೆ ಜನರಲ್ಲಿ ಚಾಲ್ತಿಯಲ್ಲಿದ್ದಾರೆ.

ಶಕ್ತಿ ನಂಬರ್‌ 2
ವಿವಾದವಿಲ್ಲದ ನಾಯಕ
ಸತೀಶ್‌ ಜಾರಕಿಹೊಳಿ ಈ ಹಿಂದೆ ಜನತಾ ಪರಿವಾರಲ್ಲಿದ್ದರು.. ಬಳಿಕ ಜೆಡಿಎಸ್‌.. ನಂತ್ರ ಸಿದ್ದರಾಮಯ್ಯ ಹಿಂದೆ ಕಾಂಗ್ರೆಸ್‌ ಗೆ ಬಂದವ್ರು.. ಹೀಗೆ ಸುದೀರ್ಘ 30 ವರ್ಷಗಳಿಂದ ರಾಜಕಾರಣದಲ್ಲಿದ್ದರೂ ವಿವಾದಗಳ ಸನಿಹಕ್ಕೂ ಹೋಗಿಲ್ಲ.. ಹೋಗುವುದಿಲ್ಲ. ಮೌಢ್ಯ ವಿರೋಧಿ ವಿಚಾರಕ್ಕಷ್ಟೇ ಸತೀಶ್ ಜಾರಕಿಹೊಳಿ ಹೆಸರು ವಿವಾದದಲ್ಲಿ ಕೇಳಿ ಬರುತ್ತದೆ. ಬದಲಿಗೆ 1998ರಲ್ಲಿ ಎಂಎಲ್ಸಿ ಆದಾಗಿನಿಂದ 2023ರಲ್ಲಿ ಯಮಕನಮರಡಿ ಶಾಸಕರಾಗಿ ಮರು ಆಯ್ಕೆ ಆದ ತನಕವೂ ಯಾವುದೇ ಹಗರಣದ ವಿವಾದಗಳಲ್ಲಿ ಸತೀಶ್ ಜಾರಕಿಹೊಳಿ ಹೆಸರಿಲ್ಲ. ಅವ್ರ ಈ ಇಮೇಜ್‌ ಕಾಂಗ್ರೆಸ್‌ಗೆ ಪ್ಲಸ್‌ ಆಗುತ್ತೆ.. ಜೊತೆಗೆ ಬಿಜೆಪಿ ವಿರುದ್ಧ ಅಸ್ತ್ರವಾಗಿ ಪ್ರಯೋಗಿಸಬಹುದು.. ಅಂದ್ರೆ ಭ್ರಷ್ಟಾಚಾರ ವಿಚಾರದಲ್ಲಿ ಅಧ್ಯಕ್ಷರು ಕ್ಲೀನ್‌ ಇದ್ದರೇ ಯಾವುದೇ ಪಕ್ಷಕ್ಕಾದರೂ ಅದು ಪ್ಲಸ್‌ ಆಗುತ್ತೆ.

ಶಕ್ತಿ ನಂಬರ್‌ 3
ಜನ+ಹಣದ ಪ್ರಭಾವ
ಯಾವುದೇ ಪಕ್ಷದ ರಾಜ್ಯಾಧ್ಯಕ್ಷರಾಗಬೇಕು ಅಂದ್ರೆ ಪ್ರಮುಖವಾಗಿ 2 ವಿಚಾರಗಳು ಮಹತ್ವ ಪಡೆದುಕೊಳ್ಳುತ್ತವೆ.. ಒಂದು ಜನ ಬಲ ಮತ್ತೊಂದು ಹಣ ಬಲ. ಈ ವಿಚಾರದಲ್ಲಿ ಸತೀಶ್ ಜಾರಕಿಹೊಳಿ ರಾಜ್ಯದ ಪ್ರಭಾವಿ ಸಮಾಜದ ಅಗ್ರಗಣ್ಯ ನಾಯಕರಾಗಿ ಈ ಕ್ಷಣಕ್ಕೂ ಕಾಣುತ್ತಿದ್ದಾರೆ. ಇನ್ನು, ಹಣ ಬಲದ ವಿಚಾರಕ್ಕೆ ಬರೋ ಮಾತೇ ಇಲ್ಲ. ಇವತ್ತು ರಾಜ್ಯದಲ್ಲಿ ಅಹಿಂದ ರಣಕೇಕೆ ಹಾಕುತ್ತಿದೆ ಅಂದರೇ ಅದಕ್ಕೆ ಮೊದಲು ಹಣ ನೀಡಿದ್ದು ಇಬ್ಬರು. ಒಬ್ಬರು ಈಡಿಗ ಸಮಾಜದ ಆರ್ಎಲ್ ಜಾಲಪ್ಪ. ಮತ್ತೊಬ್ಬರು ವಾಲ್ಮೀಕಿ ನಾಯಕ ಸಮಾಜದ ಸತೀಶ್ ಜಾರಕಿಹೊಳಿ. ಇದೇ ಕಾರಣಕ್ಕೆ ಅಹಿಂದ ಸಮುದಾಯದಲ್ಲೂ ಸತೀಶ್‌ ಜಾರಕಿಹೊಳಿ ಹೋಲ್ಡ್‌ ಹೊಂದಿದ್ದಾರೆ.. ಹಾಗೇ ಸಿದ್ದರಾಮಯ್ಯ ಬಳಿಕ ಅಹಿಂದ ನಾಯಕರಾಗಿ ಹೊರ ಹೊಮ್ಮುವ ಎಲ್ಲಾ ಸಾಧ್ಯತೆಗಳಿವೆ. ಆ ನಿಟ್ಟಿನಲ್ಲಿ ಅವ್ರ ಪ್ರಯತ್ನವೂ ಇದೆ.

ಶಕ್ತಿ ನಂಬರ್ 4 ‌
ಸೈಲೆಂಟ್ ಗೇಮರ್
ಸತೀಶ್ ಜಾರಕಿಹೊಳಿ ರಾಜ್ಯ ರಾಜಕಾರಣದ ಮಟ್ಟಿಗೆ ಇನ್ನುಳಿದ ನಾಯಕರಿಗಿಂತ್ಲೂ ಭಿನ್ನ. ಎಲ್ಲವೂ ಸೈಲೆಂಟಾಗಿಯೇ ಇರುತ್ತದೆ. ರಾಜ್ಯ ರಾಜಕಾರಣದ ಸೈಲೆಂಟ್‌ ಸರ್ಜಿಕಲ್ ಸ್ಟ್ರೈಕ್ ಎಕ್ಸ್ಪರ್ಟ್ ಯಾರಾದ್ರೂ ಇದ್ರೆ ಅದು ಸತೀಶ್ ಜಾರಕಿಹೊಳಿಯೇ. ಯಾಕಂದ್ರೆ, ರಾಜಕೀಯ ಎದುರಾಳಿಯ ಮಹಬಲಕ್ಕೂ, ಮಾಸ್ಟರ್ ಮೈಂಡ್ಗೂ ಮುಟ್ಟಿ ನೋಡಿಕೊಳ್ಳುವಂಥಾ ರಣತಂತ್ರ ರೂಪಿಸೋದ್ರಲ್ಲಿ ಸತೀಶ್‌ ಎತ್ತಿದ ಕೈ.. ಸೈಲೆಂಟ್‌ ಆಗಿಯೇ ತಮ್ಮ ತಾಕತ್ತು ತೋರಿಸುವ ಸತೀಶ್‌, ಕೊಟ್ಟ ಕೆಲಸವನ್ನ ಚಾಚೂತಪ್ಪದೇ ಮಾಡಿ ಮುಗಿಸುವ ಕೆಲಸಗಾರರೂ ಆಗಿದ್ದಾರೆ.. ಇದಕ್ಕೆ ಬೆಸ್ಟ್‌ ಎಕ್ಸಾಂಪಲ್‌ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಬೈ ಎಲೆಕ್ಷನ್‌ ರಿಸಲ್ಟ್‌.. ಶಿಗ್ಗಾವಿಯಲ್ಲಿ ಕಾಂಗ್ರೆಸ್‌ ಗೆಲುವು ಅಷ್ಟು ಸುಲಭವಿರಲಿಲ್ಲ.. ಲಿಂಗಾಯತ ಪ್ರಾಬಲ್ಯ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಯನ್ನ ಗೆಲ್ಲಿಸಿದ ಶ್ರೇಯಸ್ಸು ಸತೀಶ್‌ ಜಾರಕಿಹೊಳಿಗೆ ಮಾತ್ರ ಸಲ್ಲಬೇಕು..

ಶಕ್ತಿ ನಂಬರ್ 4 ‌
ಸೌಮ್ಯ ಸ್ವಭಾವ, ಚಾಣಕ್ಯ ಸತೀಶ್

ಚಂದ್ರಗುಪ್ತ ಮೌರ್ಯ ಅನ್ನೋ ದೊರೆ ಚಾಣಕ್ಯನಿಂದಾಗಿ ದೊರೆಯಾದ. ಆದರೇ, ದೊರೆಯೇ ಚಾಣಕ್ಯನಾಗಿದ್ದರೆ ಹೇಗಿರುತ್ತಿತ್ತು ಅನ್ನೋದಕ್ಕೆ ಸತೀಶ್‌ ಜಾರಕಿಹೊಳಿ ಎಕ್ಸಾಂಪಲ್‌ ಎನ್ನಬಹುದು.. ಅದರಲ್ಲೂ ಕಡುಕೋಪದ ವಿಷ್ಣುಗುಪ್ತನಿಗಿಂತ ಸೌಮ್ಯ ಸ್ವಭಾವದ ರಣತಂತ್ರಗಾರ ಗುಣ ಸತೀಶ್ರಲ್ಲಿದೆ. ಈ ವಿಷಯಕ್ಕೆ ಬಂದರೇ ಎಂತಹ ಅಪಮಾನವನ್ನಾದರೂ ನಗುತ್ತಲೇ ಸಹಿಸಿ, ಎದುರಾಳಿಗೆ ಜಂಘಾಬಲವನ್ನೇ ನಡುಗಿಸೋ ಸೋಲುಣಿಸುವ ಚಾಣಾಕ್ಷ ಗುಣ ಸತೀಶ್ ಪಾಲಿಗೆ ಮಹಾ ಶಕ್ತಿ.

ಶಕ್ತಿ ನಂಬರ್ 6‌
ಹೈಕಮಾಂಡ್ಗೆ ಅಚ್ಚುಮೆಚ್ಚು
ಹಳ್ಳಿಯಲ್ಲಿ ಎಷ್ಟೇ ಸ್ಟ್ರಾಂಗ್ ಇದ್ರೂ ಡೆಲ್ಲಿಯಲ್ಲೂ ಮೆಚ್ಚುಗೆ ಆಗಬೇಕು. ಇದು ಕಾಂಗ್ರೆಸ್ ಪಾಲಿನ ಬಹುಮಖ್ಯ ಸಂಗತಿ. ಸಿದ್ದರಾಮಯ್ಯರೊಂದಿಗೆ ಕಾಂಗ್ರೆಸ್ ಸೇರಿದಾಗಿನಿಂದ ಇಲ್ಲಿಯ ತನಕ ಹೈಕಮಾಂಡ್ ಸಂಸ್ಕೃತಿ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಹಾಗಾಗಿಯೇ ಹೈಕಮಾಂಡ್ ಜೊತೆ ಅದ್ಭುತವಾಗಿದ್ದಾರೆ. ಮೂರನೇ ವ್ಯಕ್ತಿಯ ಸಹಾಯವಿಲ್ಲದೇ ನೇರವಾಗಿ ಕಾಂಗ್ರೆಸ್‌ ವರಿಷ್ಠರನ್ನ ಭೇಟಿ ಮಾಡುವ ಸಲುಗೆಯನ್ನ ಸತೀಶ್‌ ಪಡೆದಿದ್ದಾರೆ.. ಜೊತೆಗೆ ಸಿದ್ದಾಂತದ ವಿಚಾರಕ್ಕೆ ಬಂದ್ರೆ ರಾಹುಲ್‌ ಗಾಂಧಿ ಸಾಥ್‌ ನೀಡುವ ನಾಯಕ.. ಇಬ್ಬರಿಗೂ ಸಿದ್ದಾಂತದ ಬಗ್ಗೆ ಕ್ಲಾರಿಟಿ ಇದೆ.. ಇದು ಕೂಡ ಸತೀಶ್‌ ಜಾರಕಿಹೊಳಿಯ ಶಕ್ತಿಯಾಗಿದೆ..

ಈ ಆರು ಪ್ರಮುಖ ಕಾರಣಗಳೇ ಸತೀಶ್‌ ಜಾರಕಿಹೊಳಿಗೆ ಪ್ಲಸ್‌ ಆಗಿದ್ದರೇ, ಇದೇ ಕಾರಣಗಳಿಂದಾಗಿಯೇ ಕಾಂಗ್ರೆಸ್‌ ಹೈಕಮಾಂಡ್‌ ನಾಯಕರು ಕೂಡ ಸತೀಶ್‌ ಪರ ಒಲವು ಹೊಂದಿದ್ದಾರೆ.. ಆದ್ರೆ ರಾಜಕಾರಣದಲ್ಲಿ ಹೀಗೆ ಆಗುತ್ತೆ ಅನ್ನೋಕೆ ಆಗಲ್ಲ.. ಬಟ್‌ ಸದ್ಯಕ್ಕೆ ಕಾಂಗ್ರೆಸ್‌ ವಲಯದಲ್ಲೇ ಸತೀಶ್‌ ಜಾರಿಕಿಹೊಳಿಗೆ ಪಟ್ಟ ಕಟ್ಟೋ ಬಗ್ಗೆ ಚರ್ಚೆ ಇದೆ..

ShareTweetSendShare
Join us on:

Related Posts

ರಾಜ್ಯದ ಕೈಗಾರಿಕಾ ಕಾರ್ಮಿಕರಿಗೆ ಬಂಪರ್ ಸಿಹಿಸುದ್ದಿ: ಇನ್ನು ಫ್ಯಾಕ್ಟರಿ ಪಕ್ಕದಲ್ಲೇ ಸುಸಜ್ಜಿತ ಸೂರು, ನೂತನ ಶ್ರಮಿಕ್ ನಿವಾಸ್ ನೀತಿಯಡಿ ಮೊದಲ ಹಂತದಲ್ಲಿ 30 ಸಾವಿರ ಮನೆಗಳ ನಿರ್ಮಾಣ!

ರಾಜ್ಯದ ಕೈಗಾರಿಕಾ ಕಾರ್ಮಿಕರಿಗೆ ಬಂಪರ್ ಸಿಹಿಸುದ್ದಿ: ಇನ್ನು ಫ್ಯಾಕ್ಟರಿ ಪಕ್ಕದಲ್ಲೇ ಸುಸಜ್ಜಿತ ಸೂರು, ನೂತನ ಶ್ರಮಿಕ್ ನಿವಾಸ್ ನೀತಿಯಡಿ ಮೊದಲ ಹಂತದಲ್ಲಿ 30 ಸಾವಿರ ಮನೆಗಳ ನಿರ್ಮಾಣ!

by Shwetha
November 16, 2026
0

ಬೆಂಗಳೂರು: ರಾಜ್ಯದ ಕೈಗಾರಿಕಾ ವಲಯದಲ್ಲಿ ಬೆವರು ಸುರಿಸಿ ದುಡಿಯುವ ಲಕ್ಷಾಂತರ ಕಾರ್ಮಿಕರಿಗೆ ತಾವು ಕೆಲಸ ಮಾಡುವ ಕಾರ್ಖಾನೆಗಳ ಸಮೀಪದಲ್ಲೇ ಗುಣಮಟ್ಟದ ಹಾಗೂ ಸುಸಜ್ಜಿತ ವಸತಿ ಸೌಕರ್ಯ ಕಲ್ಪಿಸುವ...

ನಾನು ಡಿಕೆಶಿ ಶಿಷ್ಯ, ಅವರು ಸಿಎಂ ಆಗಲಿ ಎಂದು ಆಸೆಪಟ್ಟಿದ್ದೆ,ಆದರೆ ನಾನು ನೋಡಿದ್ದ ಅವರ ಘರ್ಜನೆಯೇ ಬೇರೆ, ಈಗಿನವರೇ ಬೇರೆ:ಡಿಕೆಶಿ ಅವರಿಗೆ ಕೆಲಸ ಮಾಡಲು ಆಗುತ್ತಿಲ್ಲವೇ, ಅನುದಾನ ಇಲ್ಲವೇ ಅಥವಾ ಕೆಲಸ ಮಾಡಲು ಬಿಡುತ್ತಿಲ್ಲವೇ?- ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ಬೇಸರ!

ನಾನು ಡಿಕೆಶಿ ಶಿಷ್ಯ, ಅವರು ಸಿಎಂ ಆಗಲಿ ಎಂದು ಆಸೆಪಟ್ಟಿದ್ದೆ,ಆದರೆ ನಾನು ನೋಡಿದ್ದ ಅವರ ಘರ್ಜನೆಯೇ ಬೇರೆ, ಈಗಿನವರೇ ಬೇರೆ:ಡಿಕೆಶಿ ಅವರಿಗೆ ಕೆಲಸ ಮಾಡಲು ಆಗುತ್ತಿಲ್ಲವೇ, ಅನುದಾನ ಇಲ್ಲವೇ ಅಥವಾ ಕೆಲಸ ಮಾಡಲು ಬಿಡುತ್ತಿಲ್ಲವೇ?- ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ಬೇಸರ!

by Shwetha
November 16, 2026
0

ಕೋಲಾರ: ನಾನು ಡಿ.ಕೆ. ಶಿವಕುಮಾರ್ ಅವರ ಶಿಷ್ಯ. ಅವರು ರಾಜ್ಯದ ಮುಖ್ಯಮಂತ್ರಿಯಾಗಲಿ ಎಂದು ನಾನು ಮನಸಾರೆ ಆಸೆ ಪಟ್ಟಿದ್ದೆ. ಆದರೆ ಈಗ ನೂರೈವತ್ತು ದಿನಗಳು ಕಳೆದರೂ ಜನರಿಗೆ...

ಬೆಂಗಳೂರು ಮೆಟ್ರೋ ಪಿಂಕ್ ಲೈನ್‌ಗೆ ಪ್ರಧಾನಿ ಮೋದಿ ಚಾಲನೆ; ಸಿಎಂ ಜೊತೆ ಮೆಟ್ರೋ ಪ್ರಯಾಣ

ಪಕ್ಷದ ಕೆಲಸಕ್ಕೆ ಹಿಂದೆ ಬೆಂಗಳೂರಿಗೆ ಬರುತ್ತಿದ್ದಾಗ ಇಷ್ಟೊಂದು ಟ್ರಾಫಿಕ್ ಇರಲಿಲ್ಲ:ಬೆಂಗಳೂರು ಟ್ರಾಫಿಕ್ ಪದ್ಮವ್ಯೂಹ ಭೇದಿಸಲು ಪ್ರಧಾನಿ ಮೋದಿ ಟಾಸ್ಕ್: ಶಾಲೆ-ಕಚೇರಿ ಸಮಯ ಬದಲಾವಣೆ, ತಡರಾತ್ರಿವರೆಗೆ ಮಾಲ್‌ಗಳ ವಿಸ್ತರಣೆ ಸೇರಿ ಸಿಎಂ ಡಿಕೆಶಿಗೆ 6 ಪರಿಹಾರ ಸೂತ್ರಗಳ ಸಲಹೆ!

by Shwetha
November 16, 2026
0

ಬೆಂಗಳೂರು: ಐಟಿ-ಬಿಟಿ ರಾಜಧಾನಿ ಬೆಂಗಳೂರನ್ನು ಹೈರಾಣಾಗಿಸಿರುವ ಭೀಕರ ಸಂಚಾರ ದಟ್ಟಣೆಯ ಸಮಸ್ಯೆಯ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ನಗರದ ವಾಹನ ದಟ್ಟಣೆಯನ್ನು...

ಉನ್ನತ ಹುದ್ದೆಗಳು ಹಲವು ಬಾರಿ ಹತ್ತಿರ ಬಂದು ತಪ್ಪಿಹೋಗಿವೆ: ಸಿಎಂ ಹುದ್ದೆ ಕೈತಪ್ಪಿದ ನೋವು ತೋಡಿಕೊಂಡ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್!

ಉನ್ನತ ಹುದ್ದೆಗಳು ಹಲವು ಬಾರಿ ಹತ್ತಿರ ಬಂದು ತಪ್ಪಿಹೋಗಿವೆ: ಸಿಎಂ ಹುದ್ದೆ ಕೈತಪ್ಪಿದ ನೋವು ತೋಡಿಕೊಂಡ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್!

by Shwetha
November 16, 2026
0

ತುಮಕೂರು: ತಮ್ಮ ಸುದೀರ್ಘ ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ ಮುಖ್ಯಮಂತ್ರಿ ಹುದ್ದೆ ಸೇರಿದಂತೆ ಹಲವು ಉನ್ನತ ಸ್ಥಾನಮಾನಗಳು ಕೈಗೆಟುಕುವಷ್ಟು ಹತ್ತಿರಕ್ಕೆ ಬಂದು ಕಡೆಯ ಕ್ಷಣದಲ್ಲಿ ಕೈತಪ್ಪಿಹೋಗಿವೆ ಎಂದು...

ಕಾಂಗ್ರೆಸ್ ಸಮಾವೇಶದಲ್ಲಿ ಇಟಲಿ ರಾಜಕಾರಣಿಯಿಂದ ವೋಟ್ ಚೋರ್, ಗದ್ದಿ ಛೋಡ್ ಘೋಷಣೆ: ಮುಗುಳ್ನಗುತ್ತಾ ಚಪ್ಪಾಳೆ ತಟ್ಟಿದ ರಾಹುಲ್ ಗಾಂಧಿ ವಿರುದ್ಧ ದೇಶದ್ರೋಹದ ಕಿಡಿ ಕಾರಿದ ಬಿಜೆಪಿ!

ಕಾಂಗ್ರೆಸ್ ಸಮಾವೇಶದಲ್ಲಿ ಇಟಲಿ ರಾಜಕಾರಣಿಯಿಂದ ವೋಟ್ ಚೋರ್, ಗದ್ದಿ ಛೋಡ್ ಘೋಷಣೆ: ಮುಗುಳ್ನಗುತ್ತಾ ಚಪ್ಪಾಳೆ ತಟ್ಟಿದ ರಾಹುಲ್ ಗಾಂಧಿ ವಿರುದ್ಧ ದೇಶದ್ರೋಹದ ಕಿಡಿ ಕಾರಿದ ಬಿಜೆಪಿ!

by Shwetha
November 16, 2026
0

ಹೈದರಾಬಾದ್‌ನಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಪಕ್ಷದ ಭಾರತ್ ಸಮಾವೇಶದಲ್ಲಿ ಇಟಲಿ ದೇಶದ ರಾಜಕಾರಣಿ ಜಿಯಾಕೊಮೊ ಫಿಲಿಬೆಕ್ ಅವರು ವೋಟ್ ಚೋರ್, ಗದ್ದಿ ಛೋಡ್ (ಮತಗಳ್ಳರೇ ಅಧಿಕಾರ ಬಿಟ್ಟು ತೊಲಗಿ)...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram